ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೪

ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು

೧೮. ನೆಟ್ಟಗರುಳಿನ ಹಲಗಾಲಿ ಗುದದ್ವಾರದ ಮೂಲಕ ನೋವಾಗದೆ ರಕ್ತ ಸ್ರಾವವಾಗುವುದಕ್ಕೆ "ನೆಟ್ಟಗರುಳಿನ ಹಲಗಾಲಿ" (rectal polyp)ಗಳೂ ಕಾರಣವಾಗುತ್ತವೆ. ದೊಡ್ಡಕರಳು ಮತ್ತು ನೆಟ್ಟಗರುಳಿನ ಲೋಳ್ಪರೆಯಲ್ಲಿ ಹುದುಗಿಕೊಂಡಿರುವ ಕೆಲವು ಸೂಕ್ಷ್ಮಗ್ರಂಥಿಗಳಿಂದ ಕೆಲಸಾರಿ ಕಿರಿದಾದ ಗೆಡ್ಡೆಗಳು ಉದ್ಭವಿಸುತ್ತವೆ. ಇವು ಇತರ ಕಡೆಗಳಲ್ಲಾಗುವ ಸಹಜ ರೀತಿಯವಾಗಿರದೆ ಕೆಲವು ನ್ಯೂನತೆಗಳಿಂದ (ಊನಗಂತಿ-hamartoma) ಕೂಡಿರುತ್ತವೆ. ಅವುಗಳಲ್ಲಿ ಕೆಲವು ಲೋಳ್ಪರೆಯ ಮೇಲ್ಮೈಗೆ ಅಂಟಿಕೊಂಡು ವೃದ್ಧಿಯಾದರೆ, ಉಳಿದವು ಬುಡದಲ್ಲಿ ತೊಟ್ಟು ಪಡೆದ ಹಣ್ಣುಕಾಯಿಗಳಂತೆ ನೇತಾಡಿಕೊಂಡು ಬೆಳೆಯುತ್ತವೆ. ಇವನ್ನೇ ಹಲಗಾಲಿಗಳೆನ್ನುವುದು. ದೊಡ್ಡಕರುಳಿನಲ್ಲಿ ಹಲವು ತರಹೆಯ ಹಲಗಾಲಿಗಳು ಉದ್ಭವಿಸುತ್ತವೆ. ಅವುಗಳನ್ನು ಇಲ್ಲಿ ಪ್ರಸ್ತಾಪಿಸಿಲ್ಲ. ನೆಟ್ಟಗರುಳು ಮತ್ತು ಗುದನಾಳಗಳಲ್ಲಿ ಉದ್ಭವಿಸುವ ಹಲಗಾಲಿಗಳ ಬಗೆಗೆ ಮಾತ್ರ ಇಲ್ಲಿ ವಿವರಿಸಲಾಗಿದೆ.

ಲಕ್ಷಣಗಳು ವಯಸ್ಕರಲ್ಲೂ ಹಲಗಾಲಿಗಳು ಉದ್ಭವವಾಗುವುವಾದರೂ, ಎಳೆಯರಲ್ಲೇ ಇವುಗಳ ಉಪಟಳ ಜಾಸ್ತಿ. ಮಗುವಿನ ಮಲದಲ್ಲಿ ಆಮ ಮಿಶ್ರಿತ ರಕ್ತ ಅಥವಾ ಹಚ್ಚನೆಯ ರಕ್ತ ಪದೇ ಪದೇ ಕಾಣಿಸಕೊಳ್ಳುತ್ತಿದ್ದಾಗ ಪೋಷಕರ ಗಮನ ಅತ್ತ ಸೆಳೆಯುವಂತಾಗುತ್ತದೆ. ಅತಿಸಾರ, ಆಮಶಂಕೆಗಳಿಂದ ಹೀಗಾಗುತ್ತಿರಬಹುದೆಂಬ ಶಂಕೆಯಿಂದ ಅವುಗಳ ಚಿಕಿತ್ಸೆ ಮೊದಲು ನಡೆಯುತ್ತದೆ. ಆದರೂ ಭೇದಿ ಕಡಿಮೆಯಾಗದೆ, ಮುಂದೆ ಕೆಂಪು ಅಥವಾ ಕಂದು ಬಣ್ಣದ ಮಾಂಸದ ಉಂಡೆ ಮಲದ್ವಾರದ ಮೂಲಕ ಮಲ ವಿಸರ್ಜನೆಯ ಸಮಯದಲ್ಲಿ ಮಗುವನ್ನು ವೈದ್ಯರಲ್ಲಿ ಕರೆ ತರುತ್ತಾರೆ. ಇಷ್ಟಾದರೂ ನೋವು ಪ್ರಕಟವಾಗದಿರುವುದು ಒಂದು ವೈಶಿಷ್ಟ್ಯ ವೈದ್ಯರಲ್ಲಿಗೆ ಬರುವಷ್ಟುರಲ್ಲೇ ಬಹುಪಾಲು ಮಕ್ಕಳು ಪದೇ ಪದೇ ಭೇದಿ ಮತ್ತು ರಕ್ತಸ್ರಾವದಿಂದ ಬಳಲಿ ನ್ಯೂನ ಪೋಷಣೆಗೊಳಗಾಗಿರುತ್ತಾರೆ.