ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಟ್ಟಗರುಳಿನ ಹಲಗಾಲಿ

     ಕರುಳಿನ ಲೋಳ್ಪರೆಯ ಗ್ರಂಥಿಗಳಲ್ಲಿ ಉಂಟಾಗುವ ತಡೆರಹಿತ
  ಬೆಳವಣಿಗೆಯಿಂದ ಹಲಗಾಲಿಗಳು ಉದ್ಭವವಾಗುತ್ತವೆಂದು ನಂಬಲಾಗಿದೆ.
  ಬೆಳವಣಿಗೆ ಮುಂದುವರಿದಂತೆಲ್ಲಾ ಅವುಗಳಿಗೆ ತೊಟ್ಟು ನಿರ್ಮಾಣವಾಗಿ ಮುಂದೆ
  ಕರುಳಿನೊಳಗಡೆ ತೇಲಾಡುತ್ತಿರುತ್ತವೆ.ಮಕ್ಕಳಲ್ಲಿ ಉಡ್ಭವವಾಗುವ ಹಲಗಾಳಿಯಲ್ಲಿ
  ಸಾಮಾನ್ಯವಾಗಿ ವಿಷಮ/ಅತ್ಯುಗ್ರ ಬದಲಾವಣೆಗಳಾಗದಿರುವುದೊಂದು ವಿಶೇಷ.
  ನೆಟ್ತಗಿರುಳು ಮತ್ತು ಗುದನಾಳಗಳಲ್ಲಿ ಪದೇ ಪದೇ ಉಂಟಾಗುವ ಅತಿಸಾರ,
  ಅಮಶಂಕೆ ಉರಿಯೂತಗಳು ಹಲಗಾಲಿಗಳ ಸೃಷ್ತಿಗೆ ಪ್ರಚೋದನೆ
  ನೀಡುತ್ತವೆನ್ನಬಹುದು.
         ಗುದನಾಳ ಮತ್ತು ನೆಟ್ತಗರುಳಿನ ಕೆಳಗಡೆಯ ಅರ್ಥಭಾಗದಲ್ಲೆ ಹೆಚ್ಛಿನ
  ಹಲಗಾಲಿಗಳು ಉಧ್ಭವವಾಗುವುದು.ಗಾತ್ರದಲ್ಲಿ ನೆಲಗಡಲೆ ಕಾಲಿನಿಂದ ಹಿಡಿದು
  ಸಣ್ಣ ನಿಂಬೇ ಹಣ್ಣಿನಷ್ತು ದೊಡ್ಡದಾಗಿ ಬೆಳೆಯಬಹುದು.ತೊಟ್ಟಿನ ಉದ್ದ
  ಅರ್ಧದಿಂದ ಒಂದು ಅಂಗುಲದಷ್ತಿರಬಹುದು.ಸಾಮಾನ್ಯವಾಗಿ ಕಡುಕೆಂಪಾಗಿರುವ
  ಹಲಗಾಲಿಯ ಉಂಡೆ ವೆಲ್ವೆಟ್ನಂಧ ಮೃದುವಾದ ಹೊರಮೈ ಹೊಂದಿರುತ್ತದೆ.
  ರಕ್ತನಾಳ ಬುಗ್ಗೆಯ೦ತಿರುವ ಹಲಗಾಲಿಯನ್ನು ತೀರಾ ಹಗುರವಾಗಿ ಸ್ಪರ್ಷಿಸಿದರೂ ರಕ್ತ ಸುರಿಯುತ್ತದೆ. ಮಲವಿಸರ್ಜನೆಯ ಸಮಯದಲ್ಲಿ ಇವುಗಳಿ೦ದ ರಕ್ತ ಸೋರುವುದು ತೀರಾ ಸಾಮಾನ್ಯ ಸ೦ಗತಿ .ನೆಟ್ಟಗರುಳು ಮತ್ತು ಗುದನಾಳಗಳಲ್ಲಿ ಒತ್ತಡ ಹೆಚ್ಛಾದಾಗ ಅವು ಹೊರಚಾಚಿಕೊಳ್ಳುತ್ತವೆ.(ಚಿತ್ರ ೨೫)
  ೧.ನೆಟ್ಟಗರುಳು 
  ೨.ಹಲಗಾಲಿ 
  ೩.ಗುದದ್ವಾರ 
    
   ಅತಿಸಾರ ,ಆಮಶ೦ಕೆಗಳಿಗೆ ಸೂಕ್ತ ರೀತಿಯ ಚಿಕಿತ್ಸೆ ನೀಡಿದರೂ ರಕ್ತಸ್ರಾವ ಕಡಿಮೆಯಗಾದದ್ದಾಗ ಹಲಗಾಲಿಗಳ ಇರುವಿಕೆಯ ಸ೦ಶೆಯ ಉ೦ಟಾಗುತ್ತದೆ.