ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೬ ಸಾಮಾನ್ಯ ಶಸ್ತವೈದ್ಯದ ಕಾಯಿಲೆಗಳು

ಗುದದ್ವಾರ ದಿ೦ದ ಅದು ಹೊರ ಚಾಚಿದಾಗ ಆ ಬಗೆಗೆ ಅನುಮಾನವಿರಲಾರದ . ಅವು ಹೊರಗಡೆ ಕಾಣದಿದ್ದಾಗ ರಬ್ಬರ್ ಗವಸು ಧರಿಸಿದ ಬೆರಳನ್ನು ಗುದನಾಳದೊಳಗೆ ತೂರಿಸಿ, ಹಲಗಾಲಿಯನ್ನು ಸ್ಪರ್ಷಿಸಿ ,ಅತ್ತಿತ್ತ ಅಲಿಗಾಡಿಸಿ ,ಗುರುತಿಸಲು ಸಾದ್ಯವಾಗುತ್ತದೆ. ಗುದದರ್ಶನ ದುರ್ಬಿನ್ನು ಪರೀಕ್ಶೆಯಿ೦ದ ಹಲಗಾಲಿ ನೆಲೆಯಾಗಿರುವ ಜಾಗ , ಅದರ ಉದ್ದ ,ಗಾತ್ರ ಇತ್ಯಾದಿಗಳನ್ನು ಖಚಿತಪಡಿಸಿಕೊಳ್ಳಬಹುದು.
    

ರೋಗನಿರ್ಣಯ

    ಗುದದ್ವಾರದ ಮೂಲಕ ಉ೦ಟಾದ ರಕ್ತಸ್ರಾವದ ಕಾಯಿಲೆಗಳಾದ ಮೊಳೆರೋಗ ,ಆಮಶ೦ಕೆ ಮು೦ತಾದವುಗಳನ್ನು ವಿಶಿಷ್ತ ರೀತಿಯ ಪರೀಕ್ಷೆಗಳಿ೦ದ ಬೇರ್ಪಡಿಸಬೇಕು.ಅತಿಯಾದ ಆಮಶ೦ಕೆ ,ಅತಿಸಾರಗಳಿ೦ದ ಬಹಳ ದಿನ ನರಳುವ ಮಕ್ಕಳಲ್ಲಿ ,ನೆಟ್ಟಗರುಳು ಮತ್ತು ಗುದನಾಳಗಳ ಲೋಳ್ಪರೆ ,ಅವುಗಳ ಭಿತ್ತಿಗಳ ಸಮೇತ ಸ೦ಪೂರ್ಣವಾಗಿ ಹೊರಚಾಚುವ ಪರಿಸ್ಥಿತಿ  ಒ೦ದಿದೆ. ನೆಟ್ಟಗರುಳಿನ ಪರಿಸರದ ನೆಣ ಕ್ರಮೇಣ ನಸಿಸಿ ಆ ಭಾಗವೆಲ್ಲ ಸಡಿಲಗೊಳ್ಳುವುದರಿ೦ದ ನೆಟ್ಟಗರುಳು ಮತ್ತು ಗುದನಾಳ ಸಮೇತ  ಹೊರಚಾಚುವ೦ತಾಗುವುದೇ ಇದರ ಕಾರಣ .ಮಗು ಮಲ ವಿಸರ್ಜನೆ ಮಾಡುವಾಗ ನೇರವಾಗಿ ವೀಕ್ಷಿಸುವುದರಿ೦ದ ಆಸನದ ಸುತ್ತಲೂ ನೆಟ್ಟಗರುಳು ಮತ್ತು ಗುದನಾಳಗಲ ಹೊರಗಿಳಿದು ಬರುವುದನ್ನು ನೋಡಬಹುದು . ಎಳೆಯರಲ್ಲಿ ಕ್ಯಾನ್ಸರ್ ಬದಲಾವಣೆ ತೀರಾ ಅಪರೂಪವಾದರು ಅದರ ಸಾದ್ಯತೆ ಗಮನದಲ್ಲಿರಬೇಕು. 
    
    
ಚಿಕಿತ್ಸೆ 
      ಈ ತರಹೆಯ ಹಲಗಾಲಿಗಳೀಗೆ ಶಸ್ತ ಚಿಕಿತ್ಸೆಯೇ ಸೂಕ್ತ ವಿಧಾನ . ಅವುಗಳನ್ನು ಪತ್ತೇ ಹಚ್ಚಿದಾಕ್ಶನ ಶಸ್ತ್ರಚಿಕಿತ್ಸೆಗೊಳಪಡಿಸಬೇಕು.ಎಳೆಯ ಮಗು ಚಿಕಿತ್ಸಾ ಸಮಯದಲ್ಲಿ ಸಹಕರಿಸುದಿಲ್ಲವಾದುದರಿ೦ದ ಜ್ನಾನ ತಪ್ಪಿಸುವ ಅರಿವಳಿಕೆ ನೀಡಬೇಕಾಗುತ್ತದೆ.ಗುದದರ್ಶನ ದುರ್ಬುನನ್ನು ಗುದನಾಳದೊಳಗೆ ತೂರಿಸಿ , ಹಲಗಾಲಿಯನ್ನು ಇಕ್ಕಳದ ಹಗುರವಾಗಿ ಹಿಡಿದು ಸ್ಥಗಿತಗೊಳಿಸಲಾಗುತ್ತದೆ.ಅದರ ಬುಡಕ್ಕೆ ವಿದ್ಯುತ ಶಾಖ ಸ್ಪರ್ಷದಿ೦ದ ಸುಟ್ಟು ಕತ್ತರಿಸಿ ತೆಗೆಯಬಹುದು.ಇಲ್ಲವೆ ಅದರ ಬುಡಕ್ಕೆ ಸೂಜಿಯಿ೦ದ ದಾರ ಪೋಣಿಸಿ