ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯.ಗುದಮುಂದಾಣದ ಕುರುಗಳು

        ಗುದನಾಳ, ನೆಟ್ಟಗರುಳು ಹಾಗೂ ವಸ್ತಿಕುಹರದ ಮಾಂಸಖಂಡಗಳ
    ನಡುವೆ ಕೊಬ್ಬೂತಕದಿಂದ ಕೂಡಿದ ಪೊಳ್ಳು ಪೊಳ್ಳಾದ ಅಂತಸ್ಥ ಜಾಗವಿರುತ್ತದೆ.
    ರೋಗಾಣುಗಳು ತಂಗಿ ವೃಧ್ದಿಯಾಗಲು ಒಳ್ಳೆಯ ಪರಿಸರ ಇಲ್ಲಿರುವಂತಿದೆ.
    ಇಲ್ಲಿಯ ವಿವಿಧ ಪದರಗಳಲ್ಲಿ ಉಂಟಾಗಬಹುದಾದ ಉರಿಯೂತದಿಂದ
    ಉದ್ಬವಿಸುವ ಕುರುಗಳು ಸಾಮಾನ್ಯವಾಗಿ ಗುದಮುಂದಾಣದಲ್ಲಿ ಹೊರ ಚಾಚುತ್ತವೆ.
         ದೇಹದ ಯಾವುದೇ ಭಾಗದಲ್ಲಿ ನೆಲೆಯಾಗಿರುವ ರೋಗಾಣು ರಕ್ತ
    ಪ್ರವಾಹದಲ್ಲಿ ತೇಲಿ ಬಂದು ಇಲ್ಲಿ ನೆಲೆಸಿ ವೃದ್ದಿಯಾಗಬಹುದು.ನಟ್ಟಗರುಳು
    ಮತ್ತು ಗುದನಾಳ ಲೋಳ್ಫರೆಯಲ್ಲಿ ಹಲವಾರು ಅತ್ಯಂತ ಕಿರಿದಾದ ಅವಿಗುಳಿಗಳಿರುತ್ತವೆ.
    ಇವುಗಳ ಮುಖಾಂತರವೂ ರೋಗಾಣುಗಳು ಸಂಚರಿಸಿ