ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗುದಮುಂದಾಣದ ಕುರುಗಳು

ಕೊಬ್ಪೂತಕವಿರುವ ಜಾಗದಲ್ಲಿ ಕುರುಗಳು ಉದ್ಭವಿಸಲು ಕಾರಣವಾಗುವುದುಂಟು. ಗುದಮುಂದಾಣದ ಹೊರ ಮೈಯ ಚರ್ಮದಲ್ಲೂ ಉದ್ಭವವಾಗುವ ಕುರುಗಳು ಸಹಾ ಈ ಜಾಗಕ್ಕೆ ಪ್ರಸರಿಸುವ ಸಾಧ್ಯತ್ತೆ ಇರುತ್ತದೆ.

ಲಕ್ಷಣಗಳು

  ಗುದನಾಳ, ಮಲದ್ವಾರ ಹಾಗು ಆಸನದ ಹೊರಗಿನ ಪರಿಸರದಲ್ಲಿ ಸ್ಥಳೀಯ ಊತ, ಸಿಡಿಮಿಡಿತದ ನೋವು, ಮಲವಿಸರ್ಜನೆಯ ಸಮಯದಲ್ಲಿ ನೋವು , ಜ್ವರ ಇತ್ಯಾದಿಗಳು ಈ ಕುರುಗಳ ಪ್ರಮುಖ ಲಕ್ಷಣಗಳು.ಆರಂಭದ ಹಂತದಲ್ಲೇ ಸೂಕ್ತ ಜೀವಿರೋಧಕ ಮದ್ದುಗಳು  ನೀಡುವುದರಿಂದ ಉಪಶಮನಗೊಳಿಸಲು ಸಾಧ್ಯ, ಮುಂದುವರಿದ ಪ್ರಕರಣಗಳಲ್ಲಿ ಅವು ನೆಟ್ಟಗಾರುಳು ಗುದನಾಳ ಇಲ್ಲವೇ ಗುದ ಮುಂದಾಣದ ಚರ್ಮದಲ್ಲಿ ಒಡೆದುಕೊಂಡು ಕೀವು ಸುರಿಸುತ್ತವೆ. ಅವು ತಮ್ಮಷ್ಟಕ್ಕೆ ಒಡೆಯುವವರೆಗೆ ಆಗುವ ಯಾತನೆಯನ್ನು ತಡೆಯುವುದು ರೋಗಿಗೆ ಕಷ್ಟವಾಗಬಹುದು. ಆದುದರಿಂದ ಮೊದಲೇ ವ್ಯದ್ಯಕೀಯ ನೆರವಿಗೆ ಬರುತ್ತಾರೆ. 
  ಆಸನದ ಸುತ್ತ ಅಥವಾ ಅದರ ಒಂದು ಪಾರ್ಶ್ವದಲ್ಲಿ  ಉರಿಯೂತದ ಲಕ್ಷಣ ಊತ ಗೋಚರಿಸಬಹುದು.ಗುದನಾಳದ ಒಳಗೆ ಕೈ ಬೆರಳನ್ನು ತೂರಿಸಿ ಉಬ್ಬಿದ ಕುರುವನ್ನು ಸ್ಪರ್ಶಿಸಿ ಗುರುತಿಸುವುದು ಸಾಧ್ಯವಾಗುತ್ತದೆ. ಬಹಳ ಆಳವಾಗಿ  ನೆಲೆಸಿರುವ ಕುರುವನ್ನು ಪತ್ತೆಹಚ್ಚಲು ಸ್ವಲ್ಪ ಅಗಲ ಸುತ್ತಳತೆಯ ಇಂಜಕ್ಷನ್ ಸೂಜಿಯನ್ನು ಹೊರಗಿನಿಂದ ತೂರಿಸಿ ಕುರುದಲ್ಲಿರಬಹುದಾದ ಕೀವನ್ನು ಹೊರಗೆಳೆದು ಗುರುತಿಸುವುದು ಸಾಧ್ಯ.

ಚಿಕಿತ್ಸೆ

    ಆರಂಭದ ಸ್ಥಿತಿಯ ಕುರುಗಳಿಗೆ ವಿಶಾಲ ಕ್ರಿಯಾಶೀಲತೆ ಇರುವ ಜೀವಿರೋಧಕ ಮದ್ದುಗಳನ್ನು ನೀಡಿ ಅವು ಬತ್ತುವಂತೆ ಮಾಡಬಹುದು. ಹಾಗೆ ಬತ್ತದ ಕುರುಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಕೀವನ್ನು ಹೊರಗೆ ಬಿಡಬೇಕಾಗುತ್ತದೆ. ಚರ್ಮದ ಮೇಲ್ಮೈಯಲ್ಲೇ ನೆಲೆಗೊಂಡಿರುವ ಕುರುಗಳನ್ನು ಕೆಲಸಾರಿ ಯಾವುದೇ ಅರಿವಳಿಕೆಯ ನೆರವಿಲ್ಲದೆ ಕತ್ತರಿಕೆ ಮಾಡಿ ಕೀವು ಹೊರಬಿಡಲು ಸಾಧ್ಯ. ಆಳವಾಗಿ ನೆಲೆಸಿರುವವುಗಳಿಗೆ ಅರಿವಳಿಕೆಯ ನೆರವು ಬೇಕಾಗುತ್ತದೆ. ಕುರುವು ಹೆಚ್ಚಾಗಿ ಉಬ್ಬಿಕೊಂಡಿರುವ ಜಾಗದಲ್ಲಿ ಅಗಲವಾದ ಕತ್ತರಿಕೆಯನ್ನು ಮಾಡಿ ಒಳಗಿರುವ