ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೦ ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು

ಕೀವು ಹೊರಗೆ ಬರುವಂತೆ ಮಾಡಲಾಗುತ್ತದೆ. ಅದರೊಳಗೆ ರಬ್ಬರ್ ಗವಸು ಧರಿಸಿದ ಬೆರಳು ತೂರಿಸಿ, ಪದರಗಳನ್ನು ಒಡೆಯ ಬೇಕಾಗುತ್ತದೆ. ಕತ್ತರಿಕೆಯ ದ್ವಾರವನ್ನು ಅಗಲವಾಗಿರಿಸಿ, ಕೀವು ಯಾವ ತಡೆಯು ಇಲ್ಲದೆ ಸುರಿಯುವಂತೆ ಮಾಡಲಾಗುವುದು. ಕುರುವಿನ ಒಳಗುಂಡಿಯೊಳಗೆ ಉದ್ದನೆಯ ಬಟ್ಟೆಯ ಟೇಪನ್ನು ತುರುಕಿಸಿಟ್ಟು, ಪ್ರತಿದಿನ ತೆಗೆದು ಸ್ವಚ್ಛ ಮಾಡುವುದರಿಂದ ಕುರು ತಳದಿಂದ ಮುಚ್ಚಿಕೊಳುತ್ತ ಬರಲು ಅವಕಾಶಮಾಡಿಕೊಟ್ಟಂತಾಗುತ್ತದೆ. ಈ ಚಿಕಿತ್ಸೆಯ ಸಮಯಾದಲ್ಲಿ ಜೀವಿರೋಧಕ ಮದ್ದುಗಳನ್ನು ಮುಂದುವರಿಸತಿರಬೇಕು.

   ಗುದ ಮುಂದಾಣದ ಕುರುಗಳು ತಮಷ್ಟಕ್ಕೆ ಒಡೆದು ಸುರಿದುಕೊಳ್ಳುವುದು, ಇಲ್ಲವೆ ಶಾಸ್ತ್ರಚಿಕಿತ್ಸೆಗೊಳಗಾದವು ಸಹ ಸರಿಯಾಗಿ ಮುಚ್ಚಿಕೊಳ್ಳದಿದ್ದರೆ ಅವೇ ಮುಂದೆ "ಫಿಸ್ಟುಲಾ" ಗಳಾಗಿ ಮುಂದುವರಿಯುತ್ತವೆ. 
                                * * * *