ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೦ ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು

ಇರುತ್ತವೆ. ಸಕಲ ಜೀವಿಗಳ ಬೆಳವಣೆಗೆ ಮತ್ತು ದೈನಂದಿನ ಕಾರ್ಯಕಲಾಪಗಳಿಗೆ ಬೇಕಾಗುವ ಜೈವಿಕ ದ್ರವ್ಯಗಳು ಈ ಪೌಷ್ಟಿಕಾಂಶಗಳು ಮೂಲದಿಂದಲೇ ತಯಾರಾಗಬೇಕಾಗುತ್ತದೆ. ಸಾಮಾನ್ಯವಾಗಿ ಯಕೃತ್ ನಲ್ಲಿ ಜರುಗುವ ಈ ಮಹತ್ವದ ಕ್ರಿಯೆಗೆ "ಜೀವ ವಸ್ತುಕರಣ" ಅಥವಾ "ಜೀವದ್ರವ್ಯೀಕರಣ" ಎಂದು ಹೆಸರು (ಮೆಟಬಾಲಿಸಂ).

    ಈ ಜೈವಿಕದ್ರವ್ಯಗಳ ತಯಾರಿಕೆಯ ಸಮಯದಲ್ಲೂ ಶರೀರದ ಬೆಳವಣಿಗೆ ಮತ್ತು ಕರ್ಯ ಚಟುವಟಿಕೆಗಳಿಗೆ ಅವಶ್ಯಕವಲ್ಲದ. ಕೆಲಸಾರಿ ಜೀವಿಗೇ ತೊಂದರೆಯನ್ನುಂಟು ಮಾಡಬಹುದಾದ ಕೆಲಸವು ಆಂತಿಮ ವಿಷಕರ ವಸ್ತುಗಳು ಉದ್ಭವಿಸುತ್ತವೆ. ಕರುಳಿನಿಂದ ಮಲವಿಸರ್ಜನೆಯೂ ಜರುಗಬೇಕಾಗುತ್ತದೆ. ಇಂತಹ ವಿಸರ್ಜನಾ ಕಾರ್ಯ ಮೂತ್ರದ ರೂಪದಲ್ಲಾಗುತ್ತದೆ. ಬೆವರು, ಉಸಿರಾಟದಿಂದಲೂ ಈ ವಸ್ತುಗಳು ಅತ್ಯಲ್ಪ ಪ್ರಮಾಮದಲ್ಲಿ ಹೊರಬೀಳುವುದಾದರೂ, ಅವುಗಳ ಸಂಪೂರ್ಣ ಕಳೆತಕ್ಕಾಗಿ ಮೂತ್ರಾಂಗ ಮಂಡಲವೆಂಬ ವಿಶಲ ಹರವು ಮತ್ತು ಕ್ರಿಯಾ ಶಕ್ತಿಯ ವ್ಯವಸ್ಥೆಯಿದೆ. (ಚಿತ್ರ ೨೯)
    ಮೂತ್ರದ ತಯಾರಿಕೆ, ರವಾನೆ, ಶೇಖರಣೆ ಮತ್ತು ವಿಸರ್ಜನೆಯೂ ಪಚನಕ್ರಿಯೆಯಂತೆ ಅತ್ಯ್ಂತ ಸಂಕಿರ್ಣ ಹಾಗೂ ಜಟಿಲವಾದ ಕ್ರಿಯ.ಅದನ್ನು ವ್ಯವಸ್ಥಿತವಾಗಿ ನಿರ್ವಹಿಸುವ "ಮೂತ್ರಾಂಗ ಮಂಡಲ" (Urinary System)ವೂ, ಮಿದುಳು, ಹೃದಯ, ಶ್ವಾಸಕೋಶಗಳಂತೆ ನಮ್ಮ ಜೀವನ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುವುದಾದರೂ, ಆವುಗಳ ಕಡೆ ನಮ್ಮ ಗಮನ ಅಷ್ಟಾಗಿರಲಾರದಷ್ಟೆ!
    ಮೂತ್ರ ಪಿಂಡಗಳು : (ಕಿಡ್ನಿಗಳು) ಒಟ್ಟು ಮುನ್ನೂರು ಗ್ರಾಮ್ ಇರಬಹುದಾದ ಈ ಜೋಡಿ ಅವಯವಗಳು ಶರೀರದ ಒಟ್ಟು ತೂಕದ ಪಾಲು ಶೇ. ೦.೫ರಷ್ಟು ಮಾತ್ರ ಆದರೆ ಮೂರ್ತಿ ಚಿಲಕ್ಕದಾದರೂ, ಕೀರ್ತಿ ಹಿರಿದು ಇನ್ನುವ ನಾಣ್ನುಡಿಯಂತೆ ಶರೀರದಲ್ಲಿ ಅತ್ಯಂತ ಗುರುತರ ಜವಾಬ್ದಾರಿ ಇವುಗಳಿಗಿದೆ. ಎರಡೂ ಮೂತ್ರಪಿಂಡಗಳು ಉದರ ಕೋಶದ ಹಿಂಬದಿಯ ಭಿತ್ತಿಯಲ್ಲಿ ಎದೆ ಮತ್ತು ಪಕ್ಕೆಲುಬುಗಳು ಗೂಡಿನ ಕೆಳಗಡೆ ಬೆನ್ನು ಮೂಳೆಯ ಇಕ್ಕೆಲಗಳಲ್ಲಿ ನೆಲೆಯಾಗಿವೆ. ಹುರುಳಿ ಕಾಳಿನ ಆಕಾರದಂತಿರುವ ಒಂದೊಂದು ಮೂತ್ರಪಿಂಡದ ಒಳ ಪಾಶ್ರ್ವದ ಅಂಚಿನ ನಡುವಿನಲ್ಲಿ ಗುಳಿ ಬಿದ್ದಂತಾಗಿರುವುದರಿಂದ "ಮೂತ್ರ - ಪಿಂಡಾಕಾರ" (Kidney Shaped)