ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂತ್ರಾಂಗ ಮಂಡಲದ ರಚನೆ ಮತ್ತು ಕಾರ್ಯವಿಧಾನ ೧೯೧

ಎಂಬ ವಿಶಿಷ್ಟ ರೂಪವನ್ನು ಹೊಂದಿದೆ. ಸುಮಾರು ೧೦-೧೧ ಸೇ.ಮೀ. ಉದ್ದವಿರುವ ಮೂತ್ರಪಿಂಡದ ಸುತ್ತ ಕೊಬ್ಬೂತಕದ ರಕ್ಷಣೆ ಇರುವುದಲ್ಲದೆ ಅದರ ಮೇಲ್ಮೆ ಸತ್ತು ಕವಚದ ಪರೆ ಇದೆ. ಸಾಗಿಸುವ ಮೂತ್ರಕನಾಳ (Ureter) ಉದ್ಭವಿಸಿ ಕೆಳಗಿಳಿಯುತ್ತದೆ. ಮೂತ್ರಪಿಂಡದ ಹೊರಭಾಗದಲ್ಲಿ ಸ್ವಲ್ಪ ಗಡುಸಾದ ರಗಟೆ (Cortex) ಮತ್ತು ಒ ಭಾಗದಲ್ಲಿ ಮಿದುವಾದ ತಿರುಳು (Medulla)ಗಳಿಂದ ರಚಿತವಾಗಿದೆ.

    ಮೂತ್ರ ತಯಾರಿಕೆಯ ಆತ್ಯಂತ ಕಿರಿದಾದ ಘಟಕವೆನ್ನಬಹುದಾದ ಕಿರುನಾಳಗಳು (ಯುರಿನಿಫೆರಸ್ ಟ್ಯೂಬೂಲ್ಸ್) ರಗಟೆ ಮತ್ತು ತಿರುಳಿನಲ್ಲಿ ಹಬ್ಬಿಕೊಂಡಿವೆ. ಮೂತ್ರ ತಯಾರಿಕೆಯ ಮೂಲ ಘಟಕ - ಕಿರುನಾಳ ಮತ್ತು ರಕ್ತದ ಲೋಮ ನಾಳಗಳಿಂದ ಸಂಯೊಜನೆಯಾದ ಗೊಂಡೆಗೆ "ನೆಫ್ರಾನ್" ಇನ್ನಲಾಗುತ್ತದೆ. ಪ್ರತಿಯೊಂದು ಮೂತ್ರ ಪಿಂಡದಲ್ಲೂ ಒಂದು ಕೋಟಿಗೂ ಮಿಗಿಲಗಿ ಇಂತಹ ಘಟಕಗಳಿರುತ್ತವೆ. ಪ್ರತಿಯೊಂದು ಘಟಕದಲ್ಲೂ ಆತ್ಯಂತ ಕಿರಿಯ (ರಕ್ತ) ಲೋಮನಾಳಗಳು ಗೊಂಡೆಯಂತೆ (ಗ್ಲೊಮಾರಲಸ್) ಮೂತ್ರ ತಯಾರಿಕೆಯ ಕಿರಿನಾಳಗಳ ಸುತ್ತುವರಿದು ಕೊಂಡು (ಟ್ಯೂಬಲ್ಸ್) ನೆಫ್ರಾನ್ ಗಳಾಗಿರುತ್ತವೆ. ಈ ಘಟಕಗಳಲ್ಲಿ ಲೋಮನಾಳದ ಭಿತ್ತಿಯೂ ಮೂತ್ರ ತಯಾರಿಕೆಯ ಕಿರುನಾಳದ ಭಿತ್ತಿಗಳಿಂದ ಕೇವಲ ಒಂಡೆರಡು ಜೀವಕೋಷಗಳ ಅಂತರಡಿಂದ ಬೇರ್ಪಟ್ಟಿರುತ್ತವೆ. ಲೋಮನಾಳಗಳಲ್ಲಿ ಸಂಚರಿಸುವ ರಕ್ತದಲ್ಲಿರಬಹುದಾದ ವಿಷಕರ ವಸ್ತುಗಳು ನೀರಿನ ಜೊತೆ ಅಲ್ಲಿ ಏರ್ಪಾಡಾಗಿರುವ "ಭೌತ ರಾಸಾಯನಿಕ" ವ್ಯವಸ್ಥೆಗನುಗುಣವಾಗಿ ಕಿರುನಾಳ್ದೊಳ್ಗೆ ಪ್ರವಹಿಸುತ್ತವೆ. ಲೋಮನಾಳದ ಭಿತ್ತಿಯ ಜೀವಕೋಶ ಮತ್ತು ಮೂತ್ರದ ಕಿರುನಾಳದ ನಡುವೆ ಇರುವ ಒತ್ತ್ಯ ಜೀವಕೋಶ ಮುತ್ತು ಮೂತ್ರದ ಕಿರುನಾಳದ ನಡುವೆ ಇರುವ ಒತ್ತಡದ ವ್ಯತ್ಯಾಸಗಳ ಪ್ರಭಾವದಿಂದ ಜರುಗುವ ಈ ಕ್ರಿಯೆಗೆ :"ಸೂಕ್ಷ್ಮಾಭಿಸರಣ" (Osmosis) ಎಂದು ಹೆಸರು. ಈ ವ್ಯವಸ್ಥೆಯಿಂದ ರಕ್ತ ಪ್ರವಾಹದಲ್ಲಿ ಅವಶ್ಯಕ ಹಾಗೂ ಹಾನಿಕರ ವಸುತ್ಗಳು ಮೂತ್ರವಾಗಿ ಪರಿವರ್ತನೆಗೊಂಡು ನ್ಂತರ ವಿಸರ್ಜಿಸಲ್ಪಡುತ್ತವೆ. ಇದರಿಂದಲೇ ಮೂತ್ರ್ ಪಿಂಡಗಳು ಪ್ರಮುಖ ಕಾರ್ಯಗಳಿಂದ ರಕ್ತದ ಒತ್ತಡ ಮತ್ತು ಕ್ಷಾರೀಯ ಪರಿಸರವನ್ನು ಕಾಪಾಡಿಕೊಂಡು ಬರಲು ಸಾಧ್ಯವಾಗುತ್ತದೆ.
    ಮೂತ್ರವನ್ನು ಯಾವುದೇ ಗ್ರಂಥಿಯಂದ ಸ್ರವಿಸುವ ಸುರಿತಕ್ಕೆ ಹೋಲಿಸುವಂತಿಲ್ಲ. ಅದೊಂದು "ಸಾಂದ್ರೀಕೃತವಾದ" (Concen-
    











ದ್