ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು trated filtrate) ಎನ್ನಬಹುದು.ದೇಹದಲ್ಲಿ ಸಂಚರಿಸುವ ಶೇ.೨೫ರಶ ರಕ್ತ ಮೂತ್ರ ಪಿಂಡಗಳಲ್ಲಿ ಸದಾ ಪ್ರವಹಿಸುತ್ತಿರುತ್ತದೆ.ಪ್ರತಿದಿನ ಸುಮಾರು ೧೦೦ ಲೀಟರ್ ಮೂತ್ರದ ಮೂಲ ಜಲ ತಯಾರಾಗುತ್ತಿದ್ದರೂ,ಅದು ಅಂತಿಮವಾಗಿ ಸೋಸಿಕೆ,ಸಾಂದ್ರೀಕರನಗಳಿಗೊಳಗಾಗಿ ಕೇವಲ ಒಂದು ಅಥವಾ ಒಂದೂವರೆ ಲೀಟರ್ ನಷ್ಟು ಮೂತ್ರವಾಗಿ ಹೊರಬರುತ್ತದೆಂದರೆ,ಮೂತ್ರ ತಯಾರಾಗುವ ಪ್ರಕ್ರಿಯೆಯೆ ಜಟಲತೆಯೆ ಅರಿವಾಗಬಹುಧು.

      ಅತಿಯಾಗಿ ಸೇವಿಸಿದ ಉಪ್ಪು ಮತ್ತು ನೀರು ಮೂತ್ರ ಪಿಂಡಗಳ ಕಾರ್ಯಾಚರಣೆಯಲ್ಲಿ ಹೊರ ಬರುವ ವ್ಯವಸ್ಥೆ ಇದೆ.ಆಹಾರದಲ್ಲಿನ ಸಸಾರಜನಕಗಳ ಜೀವ ವಸ್ತುಕರಣಕ್ರಿಯೆಯಿಂದ ಹೊರಬರುವ ಯೂರಿಯಾ ಮತ್ತು ಸಾರಜನಕ (ನೈಟ್ರೋಜನ್)ಗಳಂತಹ ಹಾನಿಕರ ವಸ್ತುಗಳ ಕಳೆತವೂ ಮೂತ್ರಪಿಂಡಗಳ ಮೂಲಕವೇ ಜರುಗುತ್ತವೆ.ಅವು ಸಾಮಾನ್ಯವಾಗಿ ನಿಗದಿತವಾದ ಪ್ರಮಾಣಕ್ಕಿಂತ ರಕ್ತದಲ್ಲಿ ಮಿಗಿಲಾಗಿದ್ದರೆ ನಮ್ಮ ಸ್ವಾಸ್ಥ್ಯ ಹದಗೆಡುತ್ತವೆ.
       ನಮ್ಮ ದೇಹದ ಕೆಲವು ಆಗುಹೊಗುಗಳ ನಿಯಂತ್ರಣವೊ ಮೂತ್ರ ಪಿಂಡಗಳಿಂದಲೇ ನಿರ್ವಹಿಸಲ್ಪಡುತ್ತದೆ.ರಕ್ತದೊತ್ತಡದ ನಿರ್ವಹಣೆ ,ರಕ್ತದ ಉತ್ಪಾದನೆ,ಮೂಳೆಗಳ ಬಲವರ್ಧನೆ ಮುಂತಾದವು ಮೂತ್ರಪಿಂಡಗಳಲ್ಲಲೇ ಜರುಗುವುದು.ರಕ್ತದಲ್ಲಿರುವ ಉಪ್ಪಿನ ಅಂಶವನ್ನು ಹೊರಹಾಕುವುದು ಇಲ್ಲವೆ ತಡೆಹಿಡಿಯುವುದರಿಂದ ಅದು ರಕ್ತದಲ್ಲಿ ಒಂದು ನಿಗದಿತ ಪ್ರಮಾಣದಲ್ಲಿದ್ದುಕೊಂಡು ರಕ್ತದಲ್ಲಿರಬೇಕಾದ ನೀರಿನ ಪ್ರಮಾಣ ಮತ್ತು ರಕ್ತದೊತ್ತಡಗಳು ಹತೂಟಿಯಲ್ಲಿರುವಂತೆ ಮಾಡುತ್ತವೆ.ಮೂತ್ರ ಪಿಂಡದಲ್ಲಿ ಉತ್ಪಾದನೆಯಾಗುವ ರೆನಿನ್ ಎಂಬ ವಸ್ತುವಿನಿಂದ ರಕ್ತದೊತ್ತಡ ಏರಿದರೆ,ಪ್ರೊಸ್ಟಾಗ್ಲಾಂಡಿನ್ ಎಂಬ ಅಂಶದ ಬಿದುಗಡೆಯಿಂದ ಅದು ಕಡಿಮೆಯಾಗುತ್ತದೆ.ರಕ್ತಕಣಗಳ ಉತ್ಪಾದನೆಗೆ ಪ್ರಚೋದನೆ ನೀಡುವ "ಎರಿತ್ರೋಪಾಯಿಟಿನ್" ಕೂಡ ಮೂತ್ರ ಪಿಂಡಗಳಲ್ಲೇ ತಯಾರಾಗುತ್ತದೆ.ಮೂಳೆಗಳ ಹಬಲವರ್ಧನೆಗೆ ಸಹಕಾರಿಯಾಗುವ ಜೀವಸತ್ವ 'ಡಿ' ಚುರುಕುಗೊಳ್ಳುದು ಸಹಾ ಮೂತ್ರಪಿಂಡದಲ್ಲೇ.
       ಮೂತ್ರದ ಶೇ.೯೫ರಷ್ಟು ನೀರು, ಶರೀರದಲ್ಲಿ ಸದಾ ಜರುಗುತ್ತಿರುವ ಜೀವದ್ರವ್ಯೀಕರಣದಂಥ ಕ್ರಿಯೆಗಳಿಂದ ಬಿದುಗಡೆಯಾಗುವ ಸೂಡಿಯಂ ಕ್ಲೋರೈಡು (ಉಪ್ಪು) ಪೊಟಾಸಿಯಂ ಪಾಸ್ಪೇಟ್,ಯೂರೇಟ್ಸ್ ಗಳ ಜೊತೆ,ಯುರಿಯ,ಯುರಿಕ್ ಆಸಿಡ್,ಕ್ರಿಯೊಟನಿನ್ ಗಳು ಮೂತ್ರದಲ್ಲಿ ಕರಗಿರುತ್ತವೆ.ಕ್ಯಾಲ್ಸಿಯಂ,ಆಕ್ಸಲೇಟ್ಸ್,ಗ್ಲೂಕೋಸ್ (ಸಕ್ಕರೆ),ಆಲ್ಬುಮಿನ್ (ಸಸಾರಜನಕ)