ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂತ್ರಾಂಗ ಮಂಡಲದ ರಚನೆ ಮತ್ತು ಕಾರ್ಯವಿಧಾನ

ಮುಂತಾದವು.ಸಾಮಾನ್ಯವಾಗಿ ಆರೋಗ್ಯವಂತರ ಮೂತ್ರದಲ್ಲಿ ಇರಿವುದಿಲ್ಲ.ಅವು ಮೂತ್ರದಲ್ಲಿ ಕಾಣಿಸಿಕೊಂಡರೆ ಅದು ಅನಾರೋಗ್ಯದ ಸಂಕೇತವೇ ಸರಿ.ಆರೋಗ್ಯ ತಪಾಸಣೆ ಮತ್ತು ರೋಗ ನಿರ್ಣಯದಲ್ಲಿ ಮೂತ್ರ ಪರೀಕಗೆ ಹೆಚ್ಚಿನ ಮಹತ್ವವಿರುವುದು ಇದರಿಂದಲೇ.ಮೂತ್ರದಲ್ಲಿ ಈ ರಾಸಾಯನಿಕರಗಳ ಪ್ರಮಾಣ ಏರುಪೇರಾದಾಗ ಮೂತ್ರಾಂಗ ಮಂಡಲದಲ್ಲಿ ಕಲ್ಲುಗಳು (stones) ಸೃಷ್ಟಿಯಾಗುತ್ತವೆ.ಅದೇ ರೀತಿ ಮೂತ್ರಪಿಂಡ ತನ್ನ ಇತರ ಕರ್ತವ್ಯಗಳನ್ನು ನಿರ್ವಹಿಸಲು ವಿಫಲವಾದಾಗ (kidney (renal)failure) ವ್ಯಕ್ತಿಯ ಜೀವಕ್ಕೆ ಹಾನಿಯುಂಟಾಗಬಹುದು.

      ಮೂತ್ರಕ ನಾಳ (ಯುರೇಟರ್):ಮೂತ್ರ ಪಿಂಡಗಲ ಗುಳಿ ಪ್ರದೇಶಗಳಿಂದ ಉದ್ಭವಿಸುವ ಸುಮಾರು ೩೦ ಸೆಂ.ಮೀ. ಉದ್ದ ಮೂತ್ರಕನಾಳ (ureter) ಉದರ ಕೋಶದ ಹಿಂದುಗಡೆಯ ಭಿತ್ತಿಗೆ ಅಂಟಿಕೊಂಡು ವಸ್ತಿಕುಹರದಲ್ಲಿರುವ ಮೂತ್ರಕೋಶದೊಡನೆ ಸಂಪರ್ಕಿಸುತ್ತದೆ.ತರಂಗ ಚಲನೆಯಿಂದ ಮೂತ್ರಪಿಂಡದಲ್ಲಿ ತಯಾರಾದ ಮೂತ್ರ ಸದಾ ಕೆಳಗಿಳಿದು ಬಂದು ಮೂತ್ರಕೋಶದಲ್ಲಿ ಶೇಖರಣೆಯಾಗುತ್ತಿರುತ್ತದೆ.ಮೂತ್ರಪಿಂಡದಲ್ಲಿ ಉದ್ಭವವಾಗುವ ಕಲ್ಲುಗಳು ಇದರ ಮೂಲಕ ಕೆಳಗಿಳಿಯುವಾಗ ಭೀಕರ ಸ್ವರೂಪದ ಚಳುಕು ಉಂಟಾಗುತ್ತದೆ,
       ಮೂತ್ರಕೋಶ (ಯೂರಿನರಿ ಬ್ಲಾಡರ್): ವಸ್ತಿಕುಹರದಲ್ಲಿ ನೆಲೆಯಾಗಿರುವ ಒನ್ದು ನಮೂನೆಯಲ್ಲಿ ತ್ರಿಕೋಣಾಕಕೃತಿಯ ಸ್ನಾಯು_ತಂತುಗಳಿಂದ ರಚಿತವಾದ ಚೀಲ ಇದು.ಅದರ ಮೇಲ್ಭಾಗದ ಎರಡೂ ಕಡೆಯ ಪಾರ್ಶ್ವಗಳಲ್ಲಿ ಮೂತ್ರಕ ನಾಳಗಳು ಬಂದು ಸೇರುತ್ತವೆ.ತ್ರಿಕೋಣದ ಕೆಳಭಾಗ ಮೂತ್ರವನ್ನು ಹೊರಗೆ ಕೊಂಡೊಯ್ಯುವ ಮೂತ್ರನಾಳ (urelhra)ವಾಗಿ ಮುಂದುವರಿಯುತ್ತವೆ.ತ್ರಿಕೋಣದ ಕೆಳಗಡೆ ಮೂತ್ರನಾಳ ಆರಂಭವಾಗುವ ಜಾಗದಲ್ಲಿ ಮೂತ್ರ ವಿಸರ್ಜನೆಯನ್ನು ನಿಯಂತ್ರಿಸುವ ಬಿಗಿಸುತ್ತು ಇರುತ್ತದೆ.ಈ ಬಿಗಿಸುತ್ತು ಮಿದುಳು ಮತ್ತು ನರಕೋಶಗಳ ನಿಯಂತ್ರಣದಲ್ಲಿದ್ದು ಮೂತ್ರ ವಿಸರ್ಜನೆ ಸಮಯ,ಸ್ಥಳ ಇತ್ಯಾದಿಗಳನ್ನು ನಿರ್ದೀಶಿಸುತ್ತದೆ.ಬಿಗಿಸುತ್ತುಗಳ ಸನಿಹದಲ್ಲೇ ಮೂತ್ರನಾಳವನ್ನಾವರಿಸಿಕೊಂಡು ಪ್ರೊಸ್ಟೇಟ್ (prostate)ಎಂಬ ಗ್ರಂಥಿ ಇರುತ್ತದೆ.
     ಮೂತ್ರಕೋಶವು ತನ್ನ ಸಹಜ ಸ್ಥಿತಿಯಲ್ಲಿ ಸುಮಾರು ೪೦೦ ರಿನ್ದ ೫೦೦ ಮೀ.ಲೀ.ನಷ್ಟು ಮೂತ್ರವನ್ನು ಶೇಖರಿಸಿತ್ತುಕೊಳ್ಳಬಲ್ಲದು.ಮಿದುಳು ಮತ್ತು ನರಗಳ ದೌರ್ಬಲ್ಯದ ಕೆಲವು ಸಂಧರ್ಭಗಲ್ಲಿ ಮೂತ್ರ ವಿಸರ್ಜನೆಯಾಗದೇ ಮೂತ್ರಕೋಶ ಬಹಳಷ್ಟು ಊದಿಕೊಳ್ಳಬಹುದು.ಅದರೊಳಗೆ ಹಿರಿದಾದ ಕಲ್ಲುಗಳು