ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂತ್ರಾಂಗ ಮಂಡಲದ ಕಲ್ಲುಗಳು ೨೦೫

ಕ್ಯಾಲ್ಸಿಯಂ ಫಾಸ್ಳೇಟ್ ಕಲ್ಲುಗಳಿದ್ದವರು ಹಾಲು ಮತ್ತಿತರ ಹೈನುಗಾರಿಕ ಪದಾರ್ಥ ಆದಷ್ಟು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕಾಗುತ್ತದೆ. ಒಡೆಯದ ಧಾನ್ಯದ ಕಾಳುಗಳು, ಕರಟಕ ಬೀಜಗಳು (Nuts) - ನೆಲಗಡಲೆಗಳನ್ನು ಉಪಯೋಗಿಸಬಹುದು. ಒಣಗಿಸಿದ ಹಣ್ಣು-ಹಂಪಲು-ತರಕಾರಿ, ಪ್ರಾಣಿಗಳ ಯಕೃತ್ತು (ಲಿವರ್) ಮೂತ್ರಪಿಂಡದಂಥ ಅವಯವಗಳ ಮಾಂಸದ ಪದಾರ್ಥಗಳನ್ನು ಬಹಿಷ್ಕರಿಸುವುದು ಒಳ್ಳೆಯದು. ಮೂತ್ರಾಂಗ ಮಂಡಲಕ್ಕೆ ರೋಗಾಣು ಸೋಂಕು ತಗುಲದಂತೆ ಎಚ್ಚರವಹಿಸಬೇಕಲ್ಲದೆ ಮೂತ್ರ ಸದಾ ಕ್ಷಾರೀಯವಾಗಿರುವಂತೆ ನೋಡಿಕೊಳ್ಳಬೇಕು.

ಯೂರಿಕ್ ಆಸಿಡ್ ಕಲ್ಲುಗಳಿದ್ದವರು ಪ್ಯೂರೀನ್ ಯುಕ್ತ ಮಾಂಸದ ಪದಾರ್ಥಗಳು-ಕೋಳಿ, ಹಕ್ಕಿ-ಪಕ್ಷಿಗಳ ಮಾಂಸ, ಡಬ್ಬೀಕರಿಸಿದ ಸಾರ್ಡೀನ್ ಮೀನು ('ಭೂತಾಯಿ' ಮೀನು) ಚಿಪ್ಪಿನ ಮೀನು (ಮಳವೆ-Shell Fish) ಸಾಲ್ಮನ್ ಮೀನು, ಪ್ರಾಣಿಗಳ ಅವಯವಗಳ ಮಾಂಸ, ಬಸಲೇ ಸೊಪ್ಪು ಮತ್ತು ಮದ್ಯಪಾನೀಯಗಳನ್ನು ಬಹಳಷ್ಟು ಕಡಿಮೆ ಮಾಡಬೇಕು, ಇಲ್ಲವೇ ಸಂಪೂರ್ಣವಾಗಿ ತ್ಯಜಿಸಬೇಕು.

ರಕ್ತ ಮತ್ತು ಮೂತ್ರದಲ್ಲಿ ಯೂರಿಕ್ ಆಸಿಡ್ ಮಟ್ಟ ಅತಿಯಾಗಿರುವವರು ಅಲೋಪ್ಯೂರಿನಲ್ ಎಂಬ ಮದ್ದನ್ನು ಸೇವಿಸುವುದರಿಂದ ಉತ್ತಮ ಫಲಿತಾಂಶಗಳುಂಟಾಗುತ್ತೆವೆಂದು ಹೇಳಲಾಗಿದೆ.

ಸಿಸ್ಟೀನ್ ಕಲ್ಲುಗಳಿದ್ದವರು ಸಸಾರಜನಕದ ಅಂಶಗಳು ಅತಿಯಾಗಿರುವ ಮಾಂಸ, ಮೊಟ್ಟೆ ಹಾಲು, ಹಾಲಿನ ಪದಾರ್ಥಗಳು ಕರಟಕ ಬೀಜಗಳು (ನೆಲಗಡಲೆ ಹೊರತು ಪಡಿಸಿ) ಸೇವನೆಯನ್ನು ಮಿತಿಗೊಳಿಸಬೇಕು.

ಪ್ರತಿದಿನ ಸುಮಾರು ಎರಡುವರ-ಮೂರು ಲೀಟರಿರ್ಗಳಷ್ಟು ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಹೆಚ್ಚಾದ ಮೂತ್ರ ಸುರಿತದಲ್ಲಿ ಕಲ್ಲುಗಳು ಬೇಗನೆ ಹರಳು ಗಟ್ಟುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ರಾತ್ರಿಯೂ ಒಂದೆರಡು ಸಾರಿ ನೀರು ಕುಡಿಯುವುದು, ಬೇಸಿಗೆಯಲ್ಲಿ ಇನ್ನೂ ಹೆಚ್ಚು ನೀರು ಕುಡಿಯುವ ಅಬ್ಯಾಸ ಒಳ್ಳೆಯದು.

ಮರಳಿ ಸೃಷ್ಟಿಯಾಗುವ ಕಲ್ಲುಗಳು ಕೆಲಸಾರಿ ಯಾವ ಚಿಹ್ನೆಗಳನ್ನೂ ಪ್ರಕಟಮಾಡದೆ, ಸದ್ದಿಲ್ಲದೆ ಮೂತ್ರಾಂಗಗಳು ಮತ್ತು ವ್ಯಕ್ತಿಗೆ ಹಾನಿಯುಂಟು ಮಾಡಬಹುದು. ಆದುದರಿಂದ ಒಂದು ಸಾರಿ ಕಲ್ಲುಗಳ ವ್ಯಾಧಿಯಿಂದ ನರಳಿದವರು ಆಗಿಂದಾಗ್ಗೆ ವೈದ್ಯಕೀಯ ತಪಾಸಣಿಗೆ ಒಳಗಾಗುತ್ತಿರುವುದು ಕ್ಷೇಮಕರ.