ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೬ ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗೆಳು


                          ೨೪. ಬದಲಿ ಮೂತ್ರ-ಪಿಂಡ ನಾಟಿ ಚಿಕಿತ್ಸೆ 

ಬದಲಿ ಅವಯವಗಳ ನಾಟಿ ಶಸ್ತ್ರ ಚಿಕಿತ್ಸಾ ವಿಧಾನ (Organ Transplantation Surgery) ಇತ್ತನೆ ಶತಮಾನದ ವೈದ್ಯಕೀಯ ಕ್ಷೇತ್ರದ ಕೌತುಕಗಳಲ್ಲೊಂದು, ೧೯೫೪ರ ಡಿಸೆಂಬರ್ ತಿಂಗಳಲ್ಲಿ ಅಮೆರಿಕಾದ ಡಾ|| ಜೋಸೆಫ್ ಮುರ್ರೆ ಮತ್ತು ಅವರ ತಂಡದವರು ಮೊದಲ ಮೂತ್ರ ಪಿಂಡದ ಯಶಸ್ವಿ ನಾಟಿ ಶಸ್ತ್ರ ಚಿಕಿತ್ಸೆ ನಡೆಸಿದರು. ಅದು ಇಬ್ಬರು ತದ್ರೂಪಿ ಅವಳಿಗಳ ನಡುವೆ ಜರುಗಿತು. ದಕ್ಷಿಣ ಆಫ್ರಿಕಾದ ಡಾ|| ಕ್ರಿಶ್ಚಿಯನ್ ಬರ್ನಾಡ್ ೧೯೬೭ರಲ್ಲಿ ನಡೆಸಿದ ಯಶಸ್ವಿ ಬದಲಿ ಹೃದಯ ನಾಟಿ ಶಸ್ತ್ರ ಚಿಕಿತ್ಸೆ ಪ್ರಪಂಚದಾದ್ಯಂತ ಜನರ ಗಮನ ಸೆಳೆಯಿತು. ಈಗ ದೇಹದಲ್ಲಿ ರೋಗಗ್ರಸ್ಥವಾದ ಹಲವು ಅವಯವಗಳ ಬದಲಿ ನಾಟಿ ಶಸ್ತ್ರ ಚಿಕಿತ್ಸೆ ವಿಧಾನ ದಿನ ನಿತ್ಯದ ಮಾತಾಗಿದೆ. ಬದಲಿ ಮೂತ್ರಪಿಂಡ ನಾಟಿ ಚಿಕಿತ್ಸೆಯಂತೂ ಈಗ ಎಲ್ಲಾ ಕಡೆ ಜರುಗುವಷ್ಟು ಸರಳವಾಗುತ್ತಿದ್ದು ಈಗಾಗಲೇ ಲಕ್ಷಾಂತರ ಸಂಖ್ಯೆಯಲ್ಲಿ ನಡೆದಿವೆ. ಭಾರತದಲ್ಲಿ ಇಂಥ ಶಸ್ತ್ರ ಚಿಕಿತ್ಸೆ ೧೯೭೧ರ ಫೆಬ್ರವರಿಯಲ್ಲಿ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ನಡೆಯಿತು. ಈಗ ದೇಶದ ಹಲವಾರು ನಗರಗಳಲ್ಲಿ ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಯುತ್ತಿದೆ. ಪ್ರಾಣಾಂತಿಕ ಸ್ಥಿತಿಯಲ್ಲಿರುವ ಸಾವಿರಾರು ರೋಗಿಗಳನ್ನು ಬದುಕಿಸಲು ಈಗ ಸಾಧ್ಯವಾಗುತ್ತಿದೆ.


ಪೀಠಿಕೆ

    ದೇಹಕ್ಕೆ ಸ್ವಂತವಲ್ಲದ ವಸ್ತುಗಳು ಹೊರಗಿನಿಂದ ಅಕಸ್ಮಾತ್ತಾಗಿ ಪ್ರವೇಶಿಸಿದಾಗ ಅವುಗಳಲ್ಲಿ ಬಹುಪಾಲು ಅದಕ್ಕೆ ಒಗ್ಗಿಕೊಳ್ಳಲಾರವು. ದೇಹಕ್ಕೂದಗಬಹುದಾದ ಇಂತಹ ಅಪಾಯಗಳ ನಿವಾರಣೆಗಾಗಿ ಸದಾ ಸಜ್ಜಾಗಿರುವ ಬಿಳೀ ರಕ್ತಕಣಗಳ ರಕ್ಷಣಾ ತಂಡ ತನ್ನದಲ್ಲದೆ ಪರ ವಸ್ತುಗಳನ್ನು ಹೊರದೂಡಲು ಇಲ್ಲವೆ ನಾಶಮಾಡಲು ಹೋರಾಟದಲ್ಲಿ ತೊಡಗುತ್ತವೆ. ಇದು ನಿಸರ್ಗ ನಿಯಮ.