ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜವಾಬ್ದಾರಿ ಹೊತ್ತಿರುವ ಮುಖ್ಯ ಮಂತ್ರಿಗಳಂತಹವರೂ ಸಹಾ ಈ ಗುಂಪಿನಲ್ಲಿದ್ದಾರೆ. ಅವರೆಲ್ಲರಿಗೂ ರೋಗಾಣು ಸೋಂಕಿನ ಭಯ ನಿರಂತರವಾಗಿದೆ. ಆದರೂ ಮೂತ್ರಪಿಂಡ ರೋಗಿಯ ಶರೀರದಲ್ಲಿ ಸ್ವಲ್ಪ ಕಾಲ ನೆಲೆಯಾಗಿ ನಿಂತ ನಂತರ ಕ್ರಮೇಣ ಸ್ವಂತದ್ದೇ ಎನ್ನುವ ಹಾಗೆ ಸಹಿಸಿಕೊಳ್ಳುತ್ತದೆ. ಬರು ಬರುತ್ತಾ ನಿರಾಕರಣ ನಿಗ್ರಹ ಮದ್ದುಗಳ ಪ್ರಮಾಣವನ್ನು ಕಡಿಮೆ ಮಾಡಬಹುದು. ಬದಲಿ ಮೂತ್ರಪಿಂಡ ನಾಟಿ ಚಿಕಿತ್ಸೆ ಮಾಡಿಸಿಕೊಂಡವರು ಅತ್ಯಂತ ಜಾಗರೂಕತೆಯ ಜೀವನ ನಡೆಸಬೇಕಾಗುತ್ತದೆ.ಅವರ ಮೊದಲಿನ ಮೂತ್ರಪಿಂಡಗಳಿಗೆ ತಗುಲಿದ ವ್ಯಾಧಿ ನಾಟಿ ಚಿಕಿತ್ಸೆ ಮೂದಿಸಿಕೊಂಡವರು ಅತ್ಯಂತ ಜಾಗರೂಕತೆಯ ಜೀವನ ನಡೆಸಬೆಕಾಗುತ್ತದೆ. ಅವರ ಮೊದಲಿನ ಮೂತ್ರಪಿಂಡಗಳಿಗೆ ತಗುಲಿದ ವ್ಯಾಧಿ ನಾಟಿ ಹಾಕಿದ ಮೂತ್ರಪಿಂದಕ್ಕೂ ತಗಲುವ ಸಾಧ್ಯತೆ ಹೆಚ್ಚು. ಅವರು ಅದರ ಹತೋಟಿಯ ಬಗೆಗೆ ಎಚ್ಚರವಹಿಸಬೇಕಾಗುತ್ತದೆ.ಈ ತೆರನ ಚಿಕಿತ್ಸೆಗೊಳಗಾದವರು ಈಗ ೩೦ ವರ್ಷಗಳಿಗೂ ಮಿಕ್ಕಿ ಬದುಕಿದ್ದಾರೆ. ೧೯೫೪ರಲ್ಲಿ ಮೊದಲ ಮೂತ್ರಪಿಂಡ ನಾಟಿ ಚಿಕಿತ್ಸೆ ಮಾಡಿಸಿಕೊಂಡ ಮತ್ತು ದಾನ ಮಾಡಿದ ಇಬ್ಬರು ಅವಳಿ ಅಕ್ಕತಂಗಿಯರು ಈಗ ಅಜ್ಜಿಯರಾಗಿದ್ದಾರೆ. ಅವರಿಗೆ ಈ ಚಿಕಿತ್ಸಾ ಕ್ರಮವನ್ನು ಮೊಟ್ಟ ಮೊದಲಾಗಿ ಜರುಗಿಸಿದ ಬೋಸ್ಟನ್ ನ ಡಾ!ಜೋಸೆಫ್ ಮುರ್ರೆಯವರಿಗೆ ೧೯೯೦ರ ನೋಬೆಲ್ ಬಹುಮಾನ ದೊರೆತಿದೆ. ಬದಲಿ ಮೂತ್ರಪಿಂಡ ನಾಟಿ ಚಿಕಿತ್ಸಾ ವಿಧಾನ ಈಗ ಭದ್ರವಾಗಿ ನೆಲೆಯೂರಿ ನಿಂತಿದೆ. ಅದೀಗ ಕೆಲವು ಆಸ್ಪತ್ರೆಗಳಲ್ಲಿ ದಿನ ನಿತ್ಯದ ಶಸ್ತ್ರ ಚಿಕಿತ್ಸೆಯಂತಾಗಿದೆ. ಬೆಂಗಳೂರು ಸೇರಿದಂತೆ ಭಾರತದ ಹಲವಾರು ನಗರಗಳಲ್ಲಿ ಈ ಸೌಲಭ್ಯವಿದೆ. ಅಂದರೆ ಈ ದಿಸೆಯಲ್ಲಿನ ಎಡರುತೊಡರುಗಳು ಮಾಯವಾಗಿವೆಯಂತಲ್ಲ. ಜನರಲ್ಲಿ ಈ ಬಗೆಗೆ ಇರುವ ಅನುಮಾನಗಳು ನಿವಾರಣೆಯಾಗಬೇಕು. ಜೀವಿಸಿರುವಾಗ ಅಥವಾ ಸತ್ತ ನಂತರವಾದರೂ ತಮ್ಮ ಮೂತ್ರಪಿಂಡಗಳನ್ನು ದಾನಮಾಡುವ ಉದಾರತೆ ಜನರಲ್ಲಿ ಬೆಳೆಯಬೇಕು. ಕಾನೂನಿನ ತೊಡಕುಗಳು ಮಾಯವಾಗಬೇಕು. ಬಡಜನರೂ ಸಹ ಈ ಚಿಕಿತ್ಸೆಗೊಳಗಾಗುವುದನ್ನು ಖರ್ಚು ಕಡಿಮೆಯಾಗಬೇಕು. ಈ ಬಗೆಗೆ ವ್ಯಾಪಕ ಪ್ರಚಾರದ ಅವಶ್ಯಕತೆಯಂತೂ ಇದ್ದೇ ಇದೆ.