ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೧

           ೨೫.ಜನನಾಂಗಳ ರಚನೆ ಮತ್ತು ಕಾರ್ಯವಿಧಾನ


ತಮ್ಮ ಸಂತತಿಗಳನ್ನು ನಿರಂತರವಾಗಿ ವ್ರುದ್ದಿಸಿಕೊಂಡು ಎಲ್ಲ ಜೀವ ಜಂತುಗಳ ಮೂಲ ಉದ್ದೆಶಗಳಲ್ಲಿ ಒಂದು.ಜೀವ ವಿಕಾಸದ ತೀರ ಕೆಳಮಟ್ಟದ ಜೀವೆಗಳಲ್ಲಿ ಇದು ಏಕ-ಲಿಂಗಿಕ ಕ್ರಿಯೆ,ಕೆಲವು ಜೀವಕೋಶಗಳ ಅವಿರತ ವಿಭಂಜನೆಯಿಂದಾಗುತ್ತದೆ.ಆದರೆರ್ ಮಾನವನಂತಹ ವೀಕಾಸದ ಪರಾಕಾಷ್ಟೆಯಲ್ಲಿರುವ ಪ್ರಾಣಿಗಳಲ್ಲಿ ಎರಡು ವಿಭಿನ್ನ ಲಿಂಗದವರ ಸಮ್ಮಿಲನದಿಂದ ಮಾತ್ರ ಹೊಸ ಸಂಗತಿಯೊಂದು ಸೃಷ್ಟಿಯಾಗಬಲ್ಲುದು.ಅರ್ಥತ್ ಗಂಡು ಹೆಣ್ಣುಗಳೆಂಬ ಎರಡು ವ್ಯಕ್ತಿಗಳಲ್ಲಿ ತಯಾರಾಗುವ ವೀರ್ಯಾಣು ಮತ್ತು ಅಂಡಾಣುಗಳು ಒಂದರೊಡನೊಂದು ಸಂಧಿಸಿ ಫಲಿತವಾಗಬೇಕಾಗುತ್ತದೆ.ಇದಕ್ಕಾಗಿ ಈ ವ್ಯಕ್ತಿಗಳಲ್ಲಿ ವಿಶಿಷ್ಟ ರೀತಿಯ ಜನನಾಂಗಳ ವ್ಯವಸ್ಥೆಯಿದೆ