ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜನನಾಗಂಗಳ ರಚನೆ ಮತ್ತು ಕಾರ್ಯವಿಧಾನ.

ಪ್ರೊಸ್ಟೇಟ್ ಗ್ರಂಥಿ : ನೆಟ್ಟಗರುಳು ಮತ್ತು ಗುದನಾಳದ ಮುಂದುಗಡೆ ಮೂತ್ರ ಕೋಶದ ಕೆಳಗೆ, ಮೂತ್ರನಾಳ ಆರಂಭವಾಗುವೆಡೆಯಲ್ಲಿ ಸುತ್ತಲೂ ಅದನ್ನಾವರಿಸಿಕೊಂಡು ನೆಲೆಯಾಗಿರುವ ಪ್ರೋಸ್ಟೇಟ್ ಗ್ರಂಥಿ. ಸಾಮಾನ್ಯರ ಅಂದಾಜಿಗೆ ನಿಲುಕಲಾರದು. (ಚಿತ್ರ ೩೪) ತ್ರಿಕೋಣಾಕೃತ್ಯಿ ಕಂದು ಬಣ್ಣದ ಈ ಗ್ರಂಥಿ ಮೂರು ಹಾಲೆಗಳಿಂದಾಗಿದೆ. ತನ್ನ ಸಹಜ ಸ್ಥಿತಿಯಲ್ಲಿ ಸುಮಾರು ೨೦ ಗ್ರಾಂನಷ್ಟು ತೂಕವಿರುವ ಪ್ರೊಸ್ಟೇಟ್, ಹಲವಾರು ಸಣ್ಣ-ಸಣ್ಣ ಸ್ನಾಯು-ತಂತು ಮಿಶ್ರಿತ ಕಿರುಗ್ರಂಥಿಗಳಿಂದ ಕೂಡಿದೆ. ವೃಷಣದಿಂದ ಬರುವ ವ್ಯಾಸ್ ನಾಳ ಮತ್ತಿತರ ರಸಗ್ರಂಥಿಗಳ ನಾಳಗಳು (Seminal Vesicles) ಪ್ರೊಸ್ಟೇಟ್ ಮೂಲಕವೇ ಮೂತ್ರನಾಳವನ್ನು ಸೇರುತ್ತವೆ. ಈ ಗ್ರಂಥಿಯಿಂದ ಸ್ರವಿಸುವ ಲೋಳೆಯಂತಹ ದ್ರವ ಸಂಭೋಗ ಸಮಯದ ಸ್ಖಲನದಲ್ಲಿ ಅಲ್ಲಿಗೆ ಬರುವ ವೀರ್ಯಾಣುಗಳ