ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬. ಕೆಳಗಿಳಿಯದ ವೃಷಣ ನವಜಾತ ಶಿಶುಗಳಲ್ಲಿ ವೃಷಣಗಳು ಕೆಳಗೆ ಇಳಿಯದಿರಬಹುದಾದ ಸಾಧ್ಯತೆಗಳನ್ನು ಈ ಮೊದಲೇ ಪ್ರಸ್ತಾಪಿಸಲಾಗಿದೆ. ಭ್ರೂಣಾವಸ್ಥೆಯಲ್ಲೇ ವೃಷಣಗಳು ಕೆಳಗಿಳಿದು ವೃಷಣ ಚೀಲದಲ್ಲಿ ನೆಲೆಯಾಗಿ ನಿಲ್ಲಲು ಚೋದನಿಯ ಪ್ರಚೋದನೆ, ನಿಲುಗಟ್ಟಿನ ಎಳೆತ ಇತ್ಯಾದಿಗಳ ಪ್ರಭಾವಗಳಿರುವುದಾದರೂ ಕೆಲವರಲ್ಲಿ ಅವು ಕೆಳಗೆ ಬರುವುದೇ ಇಲ್ಲ. ಕೆಲವರಲ್ಲಿ ಅವು ಉದರ ಕೋಶದಲ್ಲೇ ಉಳಿದುಕೊಂಡರೆ ಮತ್ತೆ ಕೆಲವರಲ್ಲಿ ಗೆಜ್ಜೆಯ ನಾಳ ಇಲ್ಲವೇ ಅದರ ಸನಿಹದಲ್ಲಿ ಬಂದು ನಿಂತುಕೊಳ್ಳುತ್ತವೆ. ವೃಷಣಗಳ ಇಳಿತಕ್ಕೆ ಅಡಚಣೆ ಹೇಗೆ ಆಗುತ್ತವೆನ್ನುವುದರ ಬಗೆಗೆ ಇನ್ನೂ ಸರಿಯಾದ ಅರಿವು ಉಂಟಾಗಿಲ್ಲ. ಚೋದನಿಗಳ ಕೊರತೆಯನ್ನು ಕೆಲವರು ದೂರಿದರೆ, ಅವು ಕೆಳಗೆ ಇಳಿದು ಬರುವ ದಾರಿಯಲ್ಲಿ 'ಯಾಂತ್ರಿಕ' ತೊಂದರೆಗಳಿರಬಹುದೆಂಬ ಸಂಶಯ ಕೆಲವರಲ್ಲಿದೆ. ಜನಿಸುವ ಸಮಯದಲ್ಲಿ ಶೇ. ೧-೪ರಷ್ಟು ಶಿಶುಗಳಲ್ಲಿ ವೃಷಣಗಳು ಕೆಳಗಿಳಿದಿರಲಾರವು. ಒಂದು ವರ್ಷ ತುಂಬುವುದರೊಳಗೆ ಮೂರನೇ ಒಂದರಷ್ಟು ಕೆಳಗಿಳಿಯುತ್ತವೆ. ಹದಿ ಹರಯದ ಸಮಯಕ್ಕೆ ಶೇ. ಒಂದರಷ್ಟು ಇನ್ನೂ ಕೆಳಗಿಳಿಯದಿರಬಹುದು. ಎರಡನೆಯ ಮಹಾಯುಧ್ಧದ ಸಮಯದಲ್ಲಿ ಸೈನ್ಯಕ್ಕೆ ಸೇರಿಸುವ ಸಲುವಾಗಿ ದೈಹಿಕ ತಪಾಸಣೆ ನಡೆಸಿದ ಅಮೆರಿಕಾದ ಹತ್ತುಸಾವಿರ ಯುವಕರಲ್ಲಿ ಶೇ.೦.೮ರಷ್ಟು ಮಂದಿಯಲ್ಲಿ ವೃಷಣಗಳು ಕೆಳಗಿಳಿಯದಿದ್ದದ್ದು ಗಮನಕ್ಕೆ ಬಂದಿತ್ತು. ಇಂಥವರ ಶೇ.೧೦ರಷ್ಟು ಮಂದಿಯ ಪೂರ್ವಿಕರಲ್ಲಿ ಈ ಪರಿಸ್ಥಿತಿ ಇದ್ದುದಕ್ಕೆ ಪುರಾವೆಗಳು ದೊರೆತಿದ್ದವು!

ಲಕ್ಷಣಗಳು ಕೆಳಗಿಳಿಯದ ವೃಷಣಗಳಲ್ಲಿ ಸಾಮಾನ್ಯವಾಗಿ ಎರಡು ವಿಧಗಳನ್ನು ಗುರುತಿಸಬಹುದು. ತನ್ನ ಊರ್ಧ್ವಮುಖ ಪ್ರಯಾಣದ ಮಾರ್ಗದಲ್ಲೇ ಒಂದು ಕಡೆ ಸ್ಥಗಿತವಾಗಿ ನಿಂತು ಬಿಡುವ - "ನಿಜವಾಗಿ ಕೆಳಗಿಳಿಯದ ವೃಷಣ"