ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಂದು ವಿಧ. ತನ್ನ ಸಹಜ ಮಾರ್ಗವಾದ ಗೆಜ್ಜೆಯ ನಾಳದ ಮೂಲಕ ಪ್ರಯಾಣಿಸಿ ಹೊರಬಂದಿದ್ದರೂ ವೃಷಣ ಚೀಲವನ್ನು ತಲುಪುದರಲ್ಲಿ ವಿಫಲವಾದ-"ಎಡೆಬಿಟ್ಟು ನಿಲ್ಲುವ ವೃಷಣ" ಇನ್ನೊಂದು ವಿಧ. ಅಂತಹವು ಕೆಲವು ಸಾರಿ ಗುಂಜೆಲವು ಗುದ ಮುಂದಾಣ, ಗೆಜ್ಜೆಯ ಹೊರಮಡಿಲು ಹಾಗೂ ತೊಡೆಯ ಮೇಲ್ಭಾಗದಲ್ಲಿ ನೆಲೆಯಾಗಿರಬಹುದು. ಅವುಗಳನ್ನು ಹುಡುಕಿ ಗುರುತಿಸುವುದೂ ಕಷ್ಟವಾಗಬಹುದು. ಈ ಎರಡು ವಿಧಗಳೇ ಅಲ್ಲದೆ ಸಾಮಾನ್ಯವಾಗಿ ಚೀಲದಲ್ಲಿರುತ್ತಿದ್ದ ವೃಷಣಗಳು ಕೆಲಸಾರಿ ಅಲ್ಲಿಂದ ನಾಪತ್ತೆಯಾಗುವ ಪರಿಸ್ಥಿತಿಯೊಂದಿದೆ. ವಾತಾವರಣದಲ್ಲಿ ಚಳಿ ಹೆಚ್ಚಾದಾಗ ಕೆಲವು ಬಾಲಕರ ವೃಷಣಗಳು ಗೆಜ್ಜೆಯ ನಾಳಗಳಿಗೆ ಹಿಂದೆ ಸರಿದುಕೊಳ್ಳುವುದರಿಂದ-"ಒಳ ಸೆಳೆಕೊಳ್ಳುವ ವೃಷಣ" ಹೀಗಾಗುತ್ತದೆ. ಮೊದಲಿನ ಎರಡು ವಿಧಗಳಿಂದ ಇದನ್ನು ಬೇರ್ಪಡಿಸುವುದು ಅವಶ್ಯಕ. ಕೆಳಗಿಳಿಯದ ವೃಷಣಗಳನ್ನು ಸೂಕ್ತ ಚಿಕಿತ್ಸೆಗೊಳಪಡಿಸುವ ಮೊದಲು ಈ ನಿರ್ಧಾರ ಮಾಡಲೇ ಬೇಕಾಗುತ್ತದೆ.