ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಸ್ತ್ರ ಚಿಕಿತ್ಸಾ ಪದ್ಧತಿಯ ಇತಿಹಾಸ

ರೈನೊ ಪ್ಲಾಸ್ಟಿ ಯನ್ನು ಆಧುನಿಕ ಸ್ವರೂಪಿ ವೈದ್ಯರು ಅನುಸರಿಸುತ್ತಿದ್ದರೆ ನಮ್ಮ ಪದ್ಧತಿ ಎಷ್ಟು ಮುಂದುವರಿದಿದೆ ಎಂಬುದರ ಅರಿವಾಗಬಹುದು. ಕ್ರಿ .ೂ. ನಾಲ್ಕನೇ ಶತಮಾನದಲ್ಲಿ ದಂಡೆತ್ತಿ ಬಂದಿದ್ದ ಅಲೆಕ್ಸಾಂಡರ್ ನ ಸಂಪರ್ಕದಿಂದ ಗ್ರೀಕರು ನಮ್ಮ ವೈದ್ಯ ಪದ್ಧತಿಯ ಲಾಭ ಪಡೆದುಕೊಂಡರು .ಮುಂದೆ ಉಂಟಾದ ಅರಬ್ಬರು ಸಂಪರ್ಕದಿಂದ ಅದು ಇಸ್ಲಾಂ ವೈದ್ಯ ಪದ್ಧತಿ ಒಡನೆಯೇ ಬೆರೆತು ಹೋಯಿತು .ನಂತರ ಈ ದೇಶವನ್ನು ಕೆಲ ಕಾಲ ಆಳಿದ ಬ್ರಿಟಿಷರು ತಮ್ಮ ಪದ್ಧತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ದೇಶೀಯ ಪದ್ಧತಿಯನ್ನು ಕಡೆಗಣಿಸಿದರು .ಅವರು ಪ್ರಚಾರಕ್ಕೆ ತಂದ ಆಧುನಿಕ ವೈಜ್ಞಾನಿಕ ವೈದ್ಯ ಪದ್ಧತಿ ನಮ್ಮ ಪ್ರಾಚೀನ ವೈದ್ಯ ಪದ್ಧತಿಗೆ ಪುನರು ತಗೊಂಡು ಮರಳಿ ನಮ್ಮಲ್ಲಿಗೆ ಬಂದಿದೆ ಎಂದರೆ ಅತಿಶಯೋಕ್ತಿಯಲ್ಲ

   ಆಧುನಿಕ ಶಸ್ತ್ರ ಚಿಕಿತ್ಸಾ ಪದ್ಧತಿ ನಡೆದು ಬಂದ ದಾರಿ ದುರ್ಗಮ ವಾದದ್ದು