ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಮ೯ದ ಮೇಲ್ಮೈನ ಶಸ್ತ್ರ ವ್ಯೆದ್ಯರ ಕಾಯಿಲೆಗಳು ೩೧

   ನೀಡಬೇಕಾಗುತ್ತದೆ.
           ಎರಡನೆಯ ನಮೂನೆಯದರಲ್ಲಿ ನೂರಾರು ಸಂಖೆಯ್ಯ ನರತಂತು ಗಂತಿಗಳಿರುತ್ತವೆ.ಅತಿ
ಚಿಕ್ಕದಾಗಿರುವ ಈ ಗೆಡ್ಡೆಗಳು ದೇಹದ ಎಲ್ಲಾ ಭಾಗದ ಚಮ೯ದಿಂದ ನೇತು ಬಿದ್ದುಕೊಂಡಿರುವುದರಿಂದ,ವ್ಯಕ್ತಿ
ವಿಕಾರಗೊಂಡಿರುತ್ತಾನೆ.ಅವುಗಳ ಸುತ್ತ ಚಮ೯ ಕಪ್ಪಾಗಿರುತ್ತದೆ.ಅಸಂಖ್ಯವಾಗಿರುವ ಇವುಗಳನ್ನು ತೆಗೆಯುವ
ಪ್ರಯತ್ನ ನಿರಥ೯ಕ.ಇವುಗಳಲ್ಲೂ ಕ್ಯಾನ್ಸರ್ ಪರಿವತ೯ನೆಯ ಸಾಧ್ಯತೆ ಇರುತ್ತದೆ.
          
ಕಲೆಗಂತಿ(Keloid)
      ಗಾಯಗಳು ವಾಸಿಯಾದ ಜಾಗದಲ್ಲಿನ ಕಲೆ ಉಬ್ಬಿಕೊಂಡು ಬೆಳೆದು ವಿಕೃತವಾಗುವುದನ್ನು ಕೆಲಸಾರಿ
ನೋಡಬಹುದು.ಕಲೆಯ ಅಂಗಾಂಶವೇ ಮಿತಿಮೀರಿ ಬೆಳೆಯುವ ಅಸಹಜ ಪರಿಸ್ಥಿತಿ ಅದು. ಕೆಲವರು ಮೈಯ
ಅಂಗಾಂಶಗಳ ಗುಣವೇ ಹಾಗಿದ್ದು ಯಾವುದೇ ಗಾಯವಾದರೂ ಅಲ್ಲಿ ಕಲೆ ಗಂತಿಗಳಾಗುತ್ತವೆ. ಕಿವಿ ಚುಚ್ಚಿದ ರಂಧ್ರ,
ಮುಳ್ಳು ಚುಚ್ಚಿದ ಗಾಯ, ಶಸ್ತ್ರ ಚಿಕಿತ್ಸೆಯ ಕತ್ತರಿಕೆಯ ಕಲೆ, ಸುಟ್ಟ ಗಾಯದ ಕಲೆ ಮುಂತಾದವುಗಳಲ್ಲಿ  ಅಂಗಾಂಶಗಳು ಹದ್ದುಮೀರಿ ಬೆಳೆಯುವುದರಿಂದ ಹೀಗಾಗುತ್ತದೆ. ಆದರೆ ಈ ಹದ್ದುಮೀರಿದ ಬೆಳವಣಿಗೆಯನ್ನು
ಕ್ಯಾನ್ಸರ್ ನಲ್ಲಾಗುವ ಪರಿಸ್ಥಿತಿಗೆ ಹೋಲಿಸಬಾರದು.ಜೀವಕೋಶಗಳು ಬರೇ ವಿಭಜನೆಯಾಗುತ್ತವೇ ಹೊರತು,ಅವುಗಳ

ಕೇಂದ್ರ ಬಿಂದುವಿನಲ್ಲಿ ವ್ಯತ್ಯಾಸಗಳಾಗುವುದಿಲ್ಲ. ಮುಖ, ಕತ್ತು, ಕಿವಿ, ಎದೆ ಮತ್ತು ಹೊಟ್ಟೆಯ ಮುಂಭಾಗದಲ್ಲಿ ಈ

ತೆರನ ಬೆಳವಣಿಗೆಗಳಾಗುವುದು.ಅತಿ ಹೆಚ್ಚು.ಕೆಲವು ಕುಟುಂಬದವರಲ್ಲಿ ಕಲೆ ಗಂತಿಯಾಗುವ ಲಕ್ಷಣ ವಂಶಪಾಯ೯ವಾಗಿರುವುದುಂಟು.ಗಾಯಗಳಿಗೆ ಸೋಂಕು ತಗುಲಿದಾಗ ಇವುಗಳ ಬೆಳವಣಿಗೆಗೆ ಪ್ರಚೋದನೆಯಾಗುತ್ತದೆಂದು ಹೇಳಲಾಗುತ್ತದೆ.
     ನಸುಗೆಂಪಿನ, ನುಣುಪಾಗಿರುವ ಈ ಗೆಡ್ಡೆ ತಾನು ನೆಲೆಯಾಗಿರುವ ಜಾಗದಲ್ಲಿ ಅಡ್ಡಾದಿಡ್ದಿಯಾಗಿ ಉಬ್ಬಿಗೊಂಡು ಬೆಳೆಯುತ್ತದೆ; ಆದಿರುವ ಪ್ರದೇಶದನ್ನು ವಿಕಾರಗೊಳಿಸುತ್ತದೆ.ಕತ್ತು,ಎದೆ,ಹೊಟ್ಟೆಯ ಭಾಗಗಳಲ್ಲಿರುವುವುಗಳಿಂದ ವಿಪರೀತ ಬಾಧೆಯಾಗುತ್ತಿರುತ್ತದೆ.ಕೆಲಸಾರಿ ಅವುಗಳನ್ನು ಅತ್ಯಂತ ಹಗುರ ಸ್ಪಶ೯

ಮಾಡಿದರೂ,ಉರಿಯಾದಂತಾಗುತ್ತದೆ.ಅತ್ಯಂತ ಸೌಮ್ಯ ರೀತಿಯ ಕ್ಯಾನ್ಸರ್ ಕಲೆಗಂತಿಯಲ್ಲಾಗಬಹುದಾದರೂ,ಅದು ದೂರದ ಅಂಗಾಂಗಗಳಿಗೆ ಹರಡುವಂತಹದಲ್ಲ.