ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬ ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು


                                       ೫.ಶಿರಾಪಘಾತಗಳು
   ಮಾನವ ಶರೀರಕ್ಕಾಗುತ್ತಿರುವ ಅಪಘಾತಗಳ ಸಂಖೈ ಈಗ ನಿಮಿಷ-ನಿಮಿಷಕ್ಕೂ ಏರುತ್ತಲೇ ಇವೆ.ನಾಗಾಲೋಟದಿಂದ ಚಿಮ್ಮುತ್ತಿರುವ ಆಧುನಿಕ ನಾಗರಿಕತೆಯ ಪ್ರತೀಕಗಳಾದ ಕೈಗಾರಿಕಾ 

ಕ್ರಾಂತಿ,ವಾಹನ ಸಂಚಾರ ಸೌಲಭ್ಯ ಮುಂತಾದವುಗಳೇ ಈ ಅಪಘಾತಗಳ ಪ್ರಮುಖ ಕಾರಣಗಳು.

         ಎಲ್ಲಾ ವಿಧಗಳ ಅಪಘಾತಗಳಿಂದಾಗುವ ಒಟ್ಟು ಸಾವುಗಳ ಸರಣಿಯಲ್ಲಿ ತಲೆಗೆ ಉಂಟಾಗುವ ಒಟ್ಟು ಸಾವುಗಳ ಸರಣಿಯಲ್ಲಿ ತಲೆಗೆ ಉಂಒತಟಾಗುವ ಅಪಗಘಾತಗಳಿಂದ ಸಾಯುವವರ ಪ್ರಮಾಣವೇ ಅತೀ ಹೆಚ್ಚು ಎನ್ನಲಾಗಿದೆ .ನಡು ವಸ್ಸನ್ನು ತಲುಪೂವುದರೊಳಗೆ ಎಲ್ಲಾ ತರಹೆಯ ಅಪಘಾತಗಳಿಂದ ಸಾಯುವವರಲ್ಲಿ ಮೂರನೆ ಎರಡರಷ್ಟು ಮಂದಿ "ಶಿರಾಪಘಾತ"(head injury)ಗಳಿಂದಲೇ ಸಾಯುತ್ತಾರೆ.ಒಂದು ಅಂದಾಜಿನ ಪ್ರಕಾರ ತಲೆಗೇಟ್ಟು ತಗಲುವ ಒಟ್ಟು ಜನರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಮೂವತ್ತಕ್ಕಿಂತ ಕಡಿಮೆ ವಯಸ್ಸಿನವರು ;೧೫ರಿಂದ ೨೪ ವಯಸ್ಸಿನ ಅಂತರದ ವಯಸ್ಸಿನವರಲ್ಲಿ ಅಪಘಾತಗಳಿಂದ ಸಾಯುವ ಬಹುಪಾಲು ಯುವಕರಿಗೆ ಶಿರಾಪಘಾತಗಳಾಗಿರುತ್ತವೆ!ಸುಖ-ಸಂತೋಷದ ಜೀವನದ ಆಶೋತ್ತರಗಳ ಕನಸಿನಿಂದ ಜೀವನದ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ಮುನ್ನುಗ್ಗುವ ನಮ್ಮ ಯುವಜನಾಂಗದವರು ಈ ರೀತಿಯ ಅಪಘಾತಗಳಿಗೆ ಬಲಿಯಾಗುತ್ತಿರುವುದು ಶೋಚನೀಯ ಸಂಗತಿ .ಈ ಕಾಲದ ಗಂಭೀರ ಪರಿಸ್ಥಿತಿಗಳಲ್ಲಿ ಇದೊಂದೆಂದರ ಅತಿಶರಯೋಕ್ತಿಯಲ್ಲ.
        ನಮ್ಮ ಶಿರದಷ್ಟು ಸುಲಭವಾಗಿ ಈ ಅಪಘಾತಗಳಿಗೀದಡಾಗುವಷ್ಟು ಪರಿಸ್ಥಿತಿಯಲ್ಲಿ ದೇಹದ ಬೇರೆ ಇನ್ನಾವ ಅವಯವವೂ ಇಲ್ಲ.ನಾಗರಿಕತೆಯ ಅತ್ಯುನ್ನತ ಮಟ್ಟದ ಪ್ರಸ್ತುತ ಸಮಯದಲ್ಲಿ ಅದಕ್ಕೆ ಈಗ ಏಟು ತಗಲುವ ಸಾಧ್ಯತೆಗಳು ಅತಿ ಹೆಚ್ಚಾಗಿವೆ ಎನ್ನಬಹುದಾದರು,ಆದಿಮಾನವರು ಇಂಥಾ ಅಪಾಯಗಳಿಂದ ದೂರವಾಗಿದ್ದರೆನ್ನುವಂತಿಲ್ಲ.ಈ ತರಹೆಯ ಅಪಘಾತಗಳಿಂದಾಗಬಹುದಾದ ಅಪಾಯಗಳ ಅರಿವು
ಅನಾದಿಯಿಂದಲೂ ಇತ್ತೆಂಬುದಕ್ಕೆ ಪುರಾವೆಗಳಿವೆ.ಪ್ರಾಚೀನ ಕಾಲದ ಪರ್ಷಿಯನ್,ಗ್ರೀಕ್ ಮತ್ತು