ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

56

ಕಾರ್ಯದಕ್ಷತೆಗಳ ಅವನತಿ ಆರಂಭವಾಗುತ್ತಿದೆ.ಈ ಕ್ರಿಯೆಯನ್ನು 'ಪಾಜೀಕರಣ'ಕ್ರಿಯೆ ಎನ್ನುತ್ತಾರೆ. ಕಣ್ಣಿನ ಮಸೂರವೂ ಅದಕ್ಕೆ ಹೊರತಲ್ಲ; ಅದರ ಪರಿಣಾಮವೇ ಪರೆ ಬೆಳೇಯುವುದು ವಯಸ್ಸಾಗುವವರೆಗೂ ತಿಳಿಯಾಗಿ ಪಾರದರ್ಶಕವಾಗಿದ್ದ ಮಸೂರವೂ ಕ್ರಮೇಣ ಮಬ್ಬಾಗಲಾರಂಭಿಸುತ್ತದೆ.ಮಬ್ಬಾಗುತ್ತಿರುವ ಮಸೂರದ ಮೇಲೆ ಬೀಳುವ ಬೆಳಕಿನ ಎಲ್ಲಾ ಕಿರಣಗಲಳೂ ಅಕ್ಷಿಪಟಲದತ್ತ ಹಾದು ಹೋಗಲಾರವು.ಇದರಿಂದ ದೃಷ್ಟಿ ಮಂಜಾಗುತ್ತದೆ; ದೃಶ್ಯ ಮಸುಕಾಗುತ್ತದೆ. ಪರೆ,ಬಲಿತಂತೆಲ್ಲಾ ಬೆಳಕಿನ ಕಿರಣಗಳೂ ಅಕ್ಷಿ ಪಟಲವನ್ನು ತಲುಪುವಲ್ಲಿ ವಿಫಲವಾಗುತ್ತವೆ;ವ್ಯಕ್ತಿ ಕ್ರಮೇಣ ಕುರುಡಾಗುತ್ತಾನೆ. ಮಸೂರದಲ್ಲಿ ಸಾಮಾನ್ಯವಾಗಿರುವ ಸಸಾರಜನಕ,ಅದರಲ್ಲೂ ಅಮೈನೋ ಆಮ್ಲಗಳು,ವಿಟಮಿನ್ E ರಿಬೋಫ್ಲೆವಿನ್,ಖನಿಜಗಳಾದ ಕ್ಯಾಲ್ಸಿಯಂ,ಫಾಸ್ಪರಸ್,ಕ್ರೋಮಿಯಂ,ಸತು ಮುಂತಾದವುಗಳ ಕೊರತೆಯುಟಾದಾಗ ಅದರಲ್ಲಿ ಕೆಲವು ರಾಸಾಯನಿಕ ಪ್ರಕ್ರಿಯೆಗಳುಂಟಾತ್ತವೆ.ಇದರಿಂದ ಮಸೂರದ ಕೆಲವು ಭಾಗಗಳಲ್ಲಿ ಪರದರ್ಶಕತ್ವ ಕಡಿಮೆಯಾತ್ತದೆ.ಪ್ರಣಿಗಲ್ಲಿ ಜರುಗಿಸಿದ ಪ್ರಾಯೋಗಿಕ ಪರೀಕ್ಷೆಗಳಿಂದ ಈ ಪರಿಣಮವನ್ನು ಪಡೆಯಲಾಗಿದೆ.ಈ