ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಟಾನ್ಸಿಲೈಟಿಸ್

ರೀತಿಯಲ್ಲಿ ಬಾಗಿದ ಉಪಕರಣವನ್ನು ಅವಿರುವ ಜಾಗಕ್ಕೆ ತೂರಿಸಿ, ಅವುಗಳನ್ನು ಹೆರೆದು (Curettage) ತೆಗೆಯುತ್ತಾರೆ.ಆಗ ಜರಗಬಹುದಾದ ಅಲ್ಪ ಪ್ರಮಾಣದ ರಕ್ತಸ್ರಾವ ಸ್ಥಳೀಯವಾಗಿ ಒತ್ತಡ ಉಂಟುಮಾಡುವುದರಿಂದ ಹತೋಟಿಗೆ ಬರುತ್ತದೆ.

ಆರೈಕೆ

    ಟಾನ್ಸಿಲೆಕ್ಟೆಮಿಯ ನಂತರ ವಾರ್ಡಿಗೆ ಹಿಂದಿರುಗುವ ರೋಗಿ ಪೂರ್ತಿ ಎಚ್ಚರವಾಗುವವರೆಗೆ ತೀವ್ರ ಆಸಕ್ತಿಯಿಂದ ನೋಡಿಕೊಳ್ಳುವ ಏರ್ಪಾಡು ಇರುತ್ತದೆ. ರಕ್ತಸ್ರಾವ ಬಗೆಗೆ ತೀವ್ರ ಕಾಳಜಿಯಿಂದ ವೀಕ್ಷಿಸಲಾಗುತ್ತದೆ.ನೋವು ನಿವಾರಕ ಮತ್ತು ಜೀವಿರೋದಕ ಮದ್ದುಗಳನ್ನು ಆಗಾಗ್ಗೆ ನೀಡುತ್ತರೆ.ರಕ್ತಸ್ರಾವದ ಸಂಭವವನ್ನು ಕಡಿಮೆ ಮಾಡಲು ಹಾಗೂ ನೋವಿನ ತೀವ್ರತೆಯನ್ನು ಕಡಿಮೆ ಮಾಡಲು ಕತ್ತಿನ ಸುತ್ತ ಮಂಜುಗಡ್ಡೆಯ ಚೀಲವನ್ನಿರಿಸುತ್ತಾರೆ.ರೋಗಿ ಪೂರ್ಣ ಎಚ್ಚರಗೊಂಡ ಮೇಲೆ ಐಸ್ಕ್ರೀಂ ನಂತಹ ತಂಪಾದ ಪಾನೀಯಗಳನ್ನು ನೀಡಬಹುದು.
         ಟಾನ್ಸಿಲೆಕ್ಟೆಮಿಯ ನಂತರ ಕೆಲಸಾರಿ ಪ್ರತಿಕ್ರಿಯಾತ್ಮಕ (Reactionary) ರಕ್ತಸ್ರಾವ ಆಗಬಹುದು. ಗಾಯದಿಂದ ಹೊರಬಂದ ರಕ್ತದ ಬಹುಪಾಲು ಜಠರ ಅಥವಾ ಶ್ವಾಸಕೋಶಗಳಿಗೆ ಇಳಿದು ಹೋಗಬಹುದಾದುದರಿಂದ ಸೋರಿ ಹೋದ ರಕ್ತದ ಅಂದಾಜು ಸಿಗುವುದು ಕಷ್ಟ.ಅದರಿಂದ ರೋಗಿಯ ಬಾಯಿ ತೆರೆಸಿ ಆಗಾಗ್ಗೆ ವೀಕ್ಷಿಸುತ್ತಿರಬೇಕು.ರಕ್ತಗರಣೆಗಟ್ಟಲು ಸಹಾಯಕವಾಗುವ ಮದ್ದುಗಳು,ಕತ್ತಿನ ಸುತ್ತ ಮಂಜುಗಡ್ಡೆ ಇಡುವುದೇ ಮುಂತಾದ ಚಿಕಿತ್ಸೆಗಳಿಂದ ರಕ್ತಸ್ರಾವ ಹತೋಟಿಗೆ ಬರದ್ದಿದ್ದರೆ ರೋಗಿಯನ್ನು ಮತ್ತೆ ಶಸ್ತ್ರಚಿಕಿತ್ಸಾ ಕೊಠಡಿಗೆ ಕೊಂಡೊಯ್ದು ರಕ್ತನಾಳವನ್ನು ಗುರುತಿಸಿ ಕಟ್ಟಬೇಕಾಗುತ್ತದೆ.ಇಂಥ ಸಂದರ್ಭಗಳಲ್ಲಿ ರಕ್ತ ಪೂರೈಕೆಯ ಅವಶ್ಯಕತೆಯುಂಟಾಗಬಹುದು.
          ಶಸ್ತ್ರಚಿಕಿತ್ಸೆಯಾದ ಒಂದು ವಾರದ ನಂತವೂ ಅಪರೂಪಕ್ಕೆ ರಕ್ತಸ್ರಾವ (Secondary) ಆಗುವುದುಂಟು. ಟಾನ್ಸಿಲ್ ತೆಗೆದ ಜಾಗದಲ್ಲಿ ಉರಿಯೂತ ಮುಂದುವರೆಯುವುದು,ಇಲ್ಲವೆ ಕಟ್ಟಿದ ದಾರ ಸಡಿಲವಾಗುವುದೇ ಮುಂತಾದ ಕಾರಣಗಳಿಂದ ಹೀಗಾಗಬಹುದು. ರೋಗಿಯನ್ನು ಕೂಡಲೆ ಮಲಗಿಸಿ ವಿಶ್ರಾಂತಿ ದೊರೆಯುವಂತೆ ಮಾಡಬೇಕು. ಶಮನಿಕ ಮದ್ದುಗಳ ನೀಡಿಕೆ, ಮಂಜುಗಡ್ಡೆಗಳನ್ನಿಡುವಿಕೆ,ಗರಣೆಗಟ್ಟುವ ಮದ್ದುಗಳ ಪ್ರಯೋಗ ಮುಂತಾದ ಕ್ರಮಗಳಿಂದ ಸಾಮಾನ್ಯವಾಗಿ ಈ ರಕ್ತಸ್ರಾವ ನಿಲ್ಲುತ್ತದೆ.ಈ ಕ್ರಮಗಳಿಗೂ