ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಣಿಯದಿದ್ದರೆ ರಕ್ತನಾಳವನ್ನು ಬಿಗಿದು ಕಟ್ಟುವ ಏರ್ಪಾಡು ಮಾಡಬೇಕಾಗಬಹುದು.

ಟಾನ್ಸಿಲೆಕ್ಟಮಿಗೊಳಗಾದವರಿಗೆ ಮೊದಲ ಎರಡು-ಮೂರು ದಿನಗಲು ತಣ್ಣನೆಯ ದ್ರವಾಹಾರ-ವಸ್ತುಗಳನ್ನು ನೀದಬಹುದು. ಮುಂದಿನ ಕೆಲವು ದಿನಗಲು ಹೆಚ್ಚಿನ ಬಿರುಸಿನ ಕೆಲಸ ಕಾರ್ಯಗಳಲ್ಲಿ ತೊಡಗಬಾರದು. ಮಕ್ಕಳು ಒಂದು ವಾರದ ನಂತರ ಶಾಲೆಗೆ ಹೋಗಬಹುದು. ವಯಸ್ಕರು ತಮ್ಮ ಎಂದಿನ ಕೆಲಸ ಕಾರ್ಯಗಳಲ್ಲಿ ತೊಡಗಲು ಎರಡು ವಾರಗಳೇ ಹಿಡಿಯಬಹುದು.

ಟಾನ್ಸಿಲ್ಗಳನ್ನು ವಾಡಿಕೆಯಂತೆ ತೆಗೆದು ಹಾಕುವ ಬಗೆಗೆ ಹಿಂದಿನಿಂದಲೂ ಭಿನ್ನಾಭಿಪ್ರಾಯಗಳಿವೆ. ಅವುಗಳಿಂದ ರೋಗ ನಿರೋಧಕ ರಕ್ಷಣೆ ದೊರೆಯುವ ಬಗೆಗೂ ಕೆಲವರಲ್ಲಿ ಅನುಮಾನಗಳಿವೆ. ಆದುದರಿಂದ ಟಾನ್ಸಿಲೆಕ್ಟಮಿಗೆ ನಿಖರವಾದ ಮಾರ್ಗಸೂಚಿಗಳು ಇಲ್ಲವೆಂದರೂ ಸರಿಯೆ. ಅದು ತೀರಾ ಸರಳ. ಮತ್ತು ವೈದ್ಯರ ಆರ್ಥಿಕ ಸ್ಥಿತಿಯನ್ನು ಉತ್ತಮಪದಿಸಿಕೊಳ್ಳುವ ಸಲುವಾಗಿ ತೆಗೆಯುತ್ತಾರೆಂಬ ಅವಹೇಳನೆಯೂ ಇದೆ. ಆದರೂ ಅದರ ಉಪಯುಕ್ತತೆಯನ್ನು ಅಲ್ಲಗಳೆಯುವಂತಿಲ್ಲ. ವೈದ್ಯರೂ ಸಹಾ ಈ ದಿಸೆಯಲ್ಲಿ ಸಂಯಮದಿಂದ ವರ್ತಿಸುವುದೊಳಿತು.