ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಲಾಸಿನಿ ೮೭ A AAAAAA A

1 2 1 1 1 1 1 7 2 1 1 A A A A A \ \ \ \ \ \n • • • • A A A A , ಕೋಣೆಗೆ ಮತ್ತೆಲ್ಲಿ ಬಾಗಿಲನ್ನು ಇಟ್ಟಿರುವರೋ ಎಂದು ಹುಡುಕುತ್ತ, ಒಂದು ಕಡೆ ಕಾರ್ಗತ್ತಲೆಯು ಕವಿದು ಬೆಳಕಿನ ಲೇಶವೂ ಇಲ್ಲದ ಒಂದು ಭಾಗಕ್ಕೆ ಬಂದನು. ಅಲ್ಲೊಂದು ಚಿಕ್ಕ ಬಾಗಿಲಿದ್ದಿತು. ಆ ಬಾಗಿಲನ್ನು ತೆಗೆದುಕೊಂಡು, ಒಳಹೋಗಲು ಅದೊಂದು ಚಿಕ್ಕ ಕೊಠಡಿಯಾಗಿದ್ದಿತು. ಅದರಲ್ಲೂ ಕತ್ತಲೆಯು ತುಂಬಿದ್ದಿತು. ಶಶಿ ಯಾದರೊ ದುಸ್ಸಹ ! ಅಲ್ಲಿ ತನ್ನ ಕೈಲಾಂದ್ರದ ಬೆಳಕಿನಿಂದ ಕೋಣೆಯನ್ನೆಲ್ಲ ಹ.ಡುಕಲು, ಒಂದು ಕಡೆ ಒಂದು ಚಿಕ್ಕ ಬಾಗಿಲುಳ್ಳ ಗೂಡಿದ್ದಿತು. ಆ ಗೂಡಿಗೆ ಬಹು ಬಲವಾದ ಬೀಗವು ಹಾಕಲ್ಪಟ್ಟಿದ್ದಿತು. ಅಲ್ಲೇನೊ ಅತಿಶಯವಾದುದಿರಬಹುದೆಂದಂದುಕೊಂಡು ಆ ಬಾಗಿಲನ್ನು ತೆಗೆದು ನೋಡಲು ಅದು ಗೂಡಾಗಿರಲಿಲ್ಲ. ಆದುದರಿಂದ ಆಶ್ಚರ್ಯ ಭರಿತನಾಗಿ ಆ ಗೂಡಿನೊಳಗಿನಿಂದ ಹೋಗಿ ನೋಡಿದನು. ನಾತಿದೂರದಲ್ಲಿ ಆರೋ ಮಾತನಾಡುತ್ತಿದ್ದಂತೆ ಅಸ್ಪಷ್ಟವಾಗಿ ಕೇಳಿಬರುತ್ತಿತ್ತು. ಮುಂದುವರಿದು ನೋಡಿದನು. ಬರಬರುತ್ತ ಮಾತು ಬಹು ಸ್ಪಷ್ಟವಾಗಿ ಕೇಳಿಸಿತು, ಮಾತನಾಡುತ್ತಿದ್ದವರು ಸ್ತ್ರೀಯ ರೆಂದು ಅವರ ಸ್ವರದಿಂದಲೇ ವ್ಯಕ್ತವಾಯಿತು. ಒಬ್ಬಳು ಅಯ್ಯೋ ! ನಮ್ಮ ಹಣೆ ಯನು ಬರೆದಿರುವುದೊ ! ನಾನು ಕಣ್ಣನ್ನು ಮುಚ್ಚಿದೆನೆಂದರೆ ಪ್ರೇಮಚಂದ್ರನು ಬಹು ದೀನನಾಗಿ ನನ್ನ ಸಮೀಪದಲ್ಲಿ ನಿಂತು ಅಯ್ಯೋ ! ನನ್ನನ್ನು ಕೈಬಿಡುವೆಯಾ ? , ಎಂದು ಕೇಳುವಂತೆಯೂ, ಒಂದೊಂದುವೇಳೆ, ಆಲಿಂಗಿಸಲಾಶಿಸುವನಂತೆ ನೀಡಿದ ಹಸ ಗಳುಳ್ಳವನಾಗಿ ಸಮಾಪವರ್ತಿಯಾಗುತ್ತ, ಅಷ್ಟರಲ್ಲಿ ಭೀತನಾಗಿ ಹಿಂಜರಿಯುವ ನಂತೆಯೂ ಸ್ವಷ್ಟವಾಗುವುದು. ಅದೇನೋ ! ಅವನ ಮುಖವನ್ನು ಕಂಡರೆ ಸಾಕೆಂದು ಹಂಬಲಿಸುತ್ತಿರುವ ನನಗೆ ಒಂದು ದಿನವಾದರೂ ಅವನು ಮುಖವನ್ನು ತೋರಿಸಲಿಲ್ಲ ! , ಎಂದಂದಳು. ಮತ್ತೊಬ್ಬಳು ನನಗೆ ನಿನ್ನೆ ಯ ದಿವಸದಿಂದ ಈಚೆಗೆ ಈ ವಿಚಾರದಲ್ಲಿ ಮೊದಲಿದ್ದಂತೆ ಅಭಿಪ್ರಾಯವಿಲ್ಲ. ಏನೋ ಒಂದು ದುರಭಿಸಂಧಿ ಇರುವಂತೆ ತೋರುತ್ತದೆ.” ಮೊದಲನೆಯವಳು ಅದೇನು ? ಭುಜಂಗನೇನಾದರೂ ನಮ್ಮನ್ನು ಈರೀತಿ ಮೋಸಗೊಳಿಸಿ ನಮ್ಮನ್ನು ಕೆಡಿಸಲು ಯತ್ನಿಸಿರಬಹುದೆ ?” ಎಂದಂದಳು, ಈ ಮಾತನ್ನು ಕೇಳಿ ಎರಡನೆಯವಳು ಕ್ಷಣಕಾಲ ಆಲೋಚಿಸಿ ನನಗಂತೂ ಕೇವಲ ಸಂದೇ ಹವೆ ! ನಾವು ಮನೆಯಿಂದ ಅಗಲಿಸಲ್ಪಟ್ಟ ಲಾಗಾಯಿತು ಇಲ್ಲಿಗೆ ಬರುವ ಪ್ರತಿಯೊ