ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾವಿತ್ರಿ, ' vvv/ vvvvvvv ಸಹಾಯವಾಗಿರುವುದು, ದನಕರುಗಳು ಯಾವ ಕಾಲದಲ್ಲಿಯಾದರೂ ಹR ಗಿ ನೀರನ್ನು ಕುಡಿಯುವುವು, ನಾಯಂಕಾಲದಲ್ಲಿ ಹುಡುಗರು ಆಟ ಶಾಟಗಳ ನಡುವರು. ತಾಲ್ಲೂಕು ಕಛೇರಿಯ ಮುಂದುಗಡೆಯಲ್ಲಿ ಆಂಜನೇಯನಗುಡಿ ಬಿ : ದಿಯೋಂದಿರುವುದು, ಆಂಜನೇಯನ ಗುಡಿಗೆ ಮೂರನೇವನೆಯು ಒಬ್ಬ ಶ್ಯಾನುಭೆ ನೀಗಸದು ಶಾನುಭೋಗನಾದರೂ, ಆಸ್ತಿಯು ಚೆನ್ನಾಗಿತ್ತು. ಭಸ್ಥಿತಿಗೆ ಬಲವಾಗಿತ್ತು. ಈತನಿಗೆ ಎರಡು ಮನೆಗಳೂ, ೫೦೦೦ ರೂ ಶಾಖೆಗಳ ಮೂಲಧನವೂ ಉಂಟು. ಈತನ ಹೆಸರು ಕೊನೇರಯ ಈತನ ವಯಸ್ಸು ಸುಮಾರು ೨೩ ವರುಷಗಳಿರಬಹುದು. ರೂಪು ಅಷ್ಟೇನು ಚಲುವ ಕುರೂಪಿಯೂ ಅಲ್ಲ. ಆಕಾರದಲ್ಲಿ ಗಿಡ, ಈ ಕೋನೇರಯ್ಯನೇ ಮನೆಗೆ ಯಜಮಾನನು. ಮನೆಯಲ್ಲಿ ಈತನ ಬಲತಾಯಿ, ಮತ್ತು ತಂಗಿಯೊಬ್ಬಳು ಇರುವಳು. ಈ ತಂಗಿಯು ಸ್ವಂತ ತಂಗಿಯಲ್ಲ; ಬಲತಾಯಿಯ ಮಗಳು ಇವರಲ್ಲದೆ, ಕೋನೇರಯ್ಯನ ಹೆಂಡತಿ ಭಾವಮ್ಮ ದಂದಿರೂ ಇರುವರು. ಹಳ್ಳಿಯಕಡೆಯಿಂದ ಬರುವ ಆಳುಗಳು ಮನೆಯ ಕೆಲಸಗಳನ್ನೂ ಮಾಡುವರು. ಆದರೆ, ಅಡಿಗೆಯ ಮನೆಯ ಯಜಮಾನಿಯು ಕನೇರಯ್ಯನ ಎಲತಾಯಿ ನಾಗಮ್ಮನಾಗಿದ್ದಳು ಈ ಯಾಜಮಾನ್ಯಕ್ಕೆ ಇತರರಾರೂ ಬರಲಿಲ್ಲವಾದುದರಿಂದ ನಾಗಮ್ಮನೇ ವಹಿಸಬೇಕಾಯಿತು. ಇದರಿಂದ ಮನಸ್ಸಿಗೆ ಹೆಮ್ಮೆಯು ಬರಲು ಅವಕಾಶ ವಿರಲಿಲ್ಲ. ಕನೇರಯ್ಯನ ತಂದೆಯು ತನ್ನ ಜೀವಿತಕಾಲದಲ್ಲಿ ವಿಷಯಾಸ ನಾಗಿದ್ದನು ತನ್ನ ಮೊದಲನೇ ಹೆಂಡತಿಯು ಸಾಯುವಕಾಲದಲ್ಲಿ ೯ ವರು ಪದ ಮಗನಾಗಿದ್ದರೂ ಅವರ ಹಿಂದೆಮುಂದೆ ಕೆಲವು ಮಕ್ಕಳು ಕಾಂ ತರವನ್ನು ಹೊಂದಿದ್ದರೂ ಇನ್ನೊಂದು ಮದುವೆಯನ್ನು ಮಾಡಿ ಕೊಂಡು ಸಂಸಾರಸುಖವನ್ನು ಅನುಭವಿಸಲು ಮನಸ್ಸು ಮಾಡಿದನು, ಇದಕ್ಕಾಗಿಯೇ ನಾಗಮ್ಮನನ್ನು ಪಾಣಿಗ್ರಹಣ ಮಾಡಿಕೊಂಡು ಕೆಲವು ವರುಷಗಳ ನಂತರ