ಪುಟ:ಹಗಲಿರುಳು.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು, ೧4


ಹಿಂಬಾಲಿಸಿದುವು. ಒಂದೇ ಮಾತಿನಿಂದ ಹೇಳುವುದಾದರೆ, ಕಾಲಕರ್ಮವನ್ನು ತೀರಿಸಿಕೊಂಡು ಎಲ್ಲರೂ ಹಿಂತಿರುಗಿದರು. ಇಂಥ ಹಿಂದಾಳುಗಳಿಂದಲೆ, ಮುಂದಾಳುಗಳ ಉದ್ದೇಶವು ಜರುಗಬೇಕು, ಪೂರ್ವದಲ್ಲಿ ಅರ್ಥವನ್ನು ತಿಳಿದುಕೊಂಡುದರಿಂದಲೇ, ಆ ಜಪತರ್ಪಣಾದಿಗಳನ್ನು ಕಾಲಕ್ಕೆ ತಕ್ಕತ ಮಂತ್ರಪೂರ್ವಕವಾಗಿಯೂ ತಂತ್ರಯುಕ್ತವಾಗಿಯೂ ಮಾಡುತ್ತಿದ್ದರು. ಆದರೆ, ಈಗಿನ ಹಲವರು ಅರ್ಥಜ್ಞಾನವಿಲ್ಲದೆ, ಕಾಲನಿಯಮವನ್ನು ಮರೆಯುತ್ತಾರೆ. ಕಾಲನಿಯಮವಿಲ್ಲದೆ, ಮಂತ್ರವೂ ನೆಲೆಗೆಡುತ್ತದೆ. ಸಮಯ ತಪ್ಪಿದರೆ ಪಾಠವು ನೆಲೆಗೊಳ್ಳದಿರುವುದೂ, ಹಸಿವೆ ಕೆಡುವುದೂ ಇದಕ್ಕೆ ದೃಷ್ಟಾಂತವು. ಆ ಮಂತ್ರವಿಲ್ಲದೆ ತಂತ್ರಕ್ಕೂ ಉದ್ಯಾಪನೆಯೆ, ಅಡಿಗಟ್ಟು ತಪ್ಪಿದರೆ ಇಡಿ ಕಟ್ಟೂ ಬೀಳುವುದು ಅಪ್ರಕೃತಿಯಲ್ಲ. ವಸ್ತು ಜ್ಞಾನವನ್ನು ಮಾಡಿಕೊಳ್ಳದಿದ್ದರೆ ಪ್ರಪಂಚಕ್ಕೆ ಕೇಡು, ಅದರಿಂದ, ಈ ಮಾತನ್ನು ಮರೆಯಕೂಡದು. ಒಂದೊಂದೇ ಕೂಡಿ ಕೋಟ್ಯಂತವಾಗಿ ಲೆಕ್ಕವು ನಿಲ್ವುದು | ಒಂದಾದರೂ ಅಡಿಭಿಡಲ್ ತಪ್ಪು ಬಪ್ಪುದುಕೊಟಿಗೂ || ೧ ] ಎ ರ ಡ ನೆ ಯ ಅ೦ ಕ . -ರ:+x- ಕತ್ತಲೆ : (ಪ್ರವೇಶಿಸಿ) ಅನುಷ್ಟುಪ್ | ಭಾರವನ್ನತ್ರ ಬಿಸುಟಾಮೇಲೆ ಸಂತಸದಿಂದಲಿ | ಕೈ ಬೀಸಿ ನಡೆವಂತಾಯ್ತು, ಪಾರತಂತ್ರ ಮಹಾಭಯಂ || ೧ | ಬಂಡಿಯನ್ನೆತ್ತಿ ಬೇಸತ್ತ ಎತ್ತಾಗುತ್ತೆಟುತಿಂದಕ್ಕೆ | ಕಾಲನಾ ಕಪ್ಪು ಗಣ್ಣನ್ನು ಮುಚ್ಚಲಾರ್ಯಂ ಸಮರ್ಥನೆ? 11 ೨ | ನಾನು, ಕಾಲನ ಸವರ್ಣದವಳೆಂದೂ, ಅದರಿಂದ, ಕಾಲನು ನನ್ನ ಹಿತ ಚಿಂತಕನೆಂದೂ ಈಗಲಾದರೂ ಲೋಕಕ್ಕೆ ಗೊತ್ತಾಗಿರಬಹುದು, ನೋಡೋಣ. ಆದರೆ, ಫಕ್ಕನ, ಮೇಲೇರುವುದೆಂದರೆ ಅಪಾಯಕರವು : ಮಗನನ್ನಾದರೂ ಮುಟ್ಟಿನೋಡು' ಎಂದಲ್ಲವೆ ಎಚ್ಚರಿಕೆಯ ಮಾತು. [ಹೀಗೆ ಎಣಿಸುತ್ತ ಗವಿಗಳೆಂಬ ತಾಯ್ತನೆಯಲ್ಲಿ ಕಾಲೂರಿ, ಮರೆಗಳಲ್ಲಿ ೧ ಸವರ್ಣ = ಸದಾಶಕ್ತಿ, ಒಂದೇ ಬಣ್ಣ,