ಪುಟ:ಹಗಲಿರುಳು.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕತ್ತಲೆ. ೧8 ಆದರೇನು ? ಧೀರರು ಮುಂದಿಟ್ಟಿ ಹಜ್ಜೆಯನ್ನು, ವಿಂದೂ, ಏನಾ ದರೂ, ಹಿಂದೆಗೆವರೆ ? “ನನಿಶ್ಚಿತಾರ್ಥಾದ್ವಿರಮಂತಿಧೀರಾಳಿ ಎಂಬುದು, ಅವರಿ ಗಾಗಿಯೆ ಕಟ್ಟಿಟ್ಟ ಗಂಟು. ತೇಜಸ್ವಿ, ಕಂಗೆಡದೆ, ಅಲ್ಲಲ್ಲಿ ಹರಿಯುತ್ತಲೆ ಇದ್ದನು. ಮನೆಮನೆಗಳಲ್ಲಿ ಯ, ದಾರಿಕೇರಿ ಸಂದುಗೊಂದುಗಳಲ್ಲಿ ಯ, ದಾರಿಹೋಕರ ಕೈಗಳಲ್ಲಿ ಯ ಅವನ ಹಸಿರಿನ ದೀಪ.ಜಗಳೇರಿದುವು. ಜನರ ಊಟಉಪಚಾರಗಳನ್ನೂ, ತಾನೆ ಕೈಗೊಟ್ಟು ನಡೆಯಿಸುತ್ತಿದ್ದನು. ಏನಾದರೂ, ನೀಲಾಚಲದಂತೆ, ಮೇಲೇರಿರುವ ಕತ್ತಲೆಯೆಡೆಯಲ್ಲಿ, ತೇಜ ಸ್ವಿಯ ಜ್ಯೋತಿರ್ಲತೆಯ ಮಿಣುಕು ಎಷ್ಟಾದರೂ ಅಷ್ಟೇ, ಈ ಸುದ್ದಿಯೆಲ್ಲವೂ, ರಾಜತ್ವದಲ್ಲಿ ಆಸೆಪಡುತ್ತಿದ್ದ ನಕ್ಷತ್ರಪತಿಯ ಕಿವಿಗೆ ಮುಟ್ಟಿತು. ಒಡನೆಯೆ, ಒಳಮನೆಯಿಂದೆದ್ದು, ಮುಖಮಂಟಪಕ್ಕೆ ಕಟ್ಟಿದ ನೀಲಾಂಬರದ ಪರದೆಯೆಡೆಯಲ್ಲಿ ಅಣಕಿಸಿದನು. ತಂಗಿಯಾದ ಕತ್ತಲೆಯೊಡನೆ, ಮನಬಂದಂತೆ ನಡೆಯುತ್ತಿದ್ದ ನಿಶಾದೇವಿಯೆಂಬ ರಾಣಿಯ ಮೋರೆ ಬೆಳುಬೆಳ್ಳಗಾಯಿತು, ತನ್ನ ದ್ವೇಚ್ಛಾಚಾರಕ್ಕೆ, ವರನು ಸಿಟ್ಟಾಗುವ ನೆಂಬ ಹೆದರಿಕೆಯಿಂದಲೆ, ನಿಶಾದೇವಿಯ ಮೋರೆ, ಹಾಗೆ ಮಾರ್ಪಾಡಾಗಿರ ಬಹುದು. ಪ್ರಿಯನಿಗೆ, ಯಾವ ಅಲಂಕಾರದಲ್ಲಿ ಪ್ರೀತಿಯೊ, ಅದನ್ನೆ ಧರಿ ಸುವುದು, ಹೆಂಗುಸರ ಸ್ವಭಾವವಷ್ಟೆ, ನಿಶಾದೇವಿಯೂ, ಮುಖಕ್ಕೆ ಬಿಳಿ ಬಣ್ಣವನ್ನು ಬಳಿದಳು, ತನ್ನ ಕಾಂಗಿನ ಬಟ್ಟೆಯಂತಿದ್ದ ಕತ್ತಲೆಯನ್ನು ಅತ್ತಿ ತಿಣ ಕಾಡುಗಳಿಗೆ ಒಗೆದು, ತನ್ನಿನಿಯನ ಕೈಯ ತಳತಳಿಸುವ ಬೆಳುದಿಂಗಳ ಪಟ್ಟಿಯನ್ನುಟ್ಟಳು. ಇದನ್ನೆಲ್ಲ ನೋಡಿದ ಕತ್ತಲೆಯ ಹೊಟ್ಟೆಗೆ ಕತ್ತಿ ಹಾಕಿ ದಂತಾಯಿತು. ] ಕತ್ತಲೆ:-(ತನ್ನಲ್ಲಿ) ಅಕ್ಕನೆಂದು ಮರೆಹೊಕ್ಕುದಕ್ಕೆ, ಈ ಮರೆಯನ್ನೇ ಹೊಗಿಸಿ ಬಿಟ್ಟಳು, ಈ ಮರೆಯಲ್ಲಿ ನಾನೆಷ್ಟರವರೆಗೆ ಕಾಯುತ್ತಿರಲಿ, ಕೆಳಗಿನವರು, ದೊಡ್ಡವರನ್ನು ಸೇರಿ, ದೊರೆಯನ್ನು ಆಶ್ರಯಿಸುವುದೆಂದರೆ ಇಷ್ಟೇ ಸರಿ. ಕೆಳಗಿನವರೂ ರಾಜಾಶ್ರಯದಿಂದ ಮೇಲೆಬಂದರೆ, ತಮ್ಮ ಮೇಲುತನವೆಲ್ಲಿ ?' ಎಂದು ಅವರ ಎಣಿಕೆ ಇರಬಹುದು. ಇರಲಿ, ಆದರೆ, ನಾನೀಗ ಹೀಗೆ ಬಂಧನದಲ್ಲಿ ಬಿದ್ದಂತೆ ಇದ್ದರೆ ಫಲವಿಲ್ಲ. * ಧೀರರು ಕೈಕೊಂಡ ಕೆಲಸವು ಫಲಿಸದೆ ವಿಶ್ರಮಿಸುವದಿಲ್ಲ. ೨, ನೀಲಾಂಬರ =ಕಾದ ಆಕಾಶ, ಕಪ್ಪು ಬಟ್ಟೆ,