ಪುಟ:ಹಗಲಿರುಳು.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು, ೨೩

ಈಗ ನೆಲಕ್ಕೆಲ್ಲ ಮಾಂಗಲ್ಯವನ್ನುಂಟುಮಾಡುವ ಮಂಗಳನಾದರೂ, ಆರ್ಯಾಭಿ ಮಾನಿಯಾದ ಲೋಕವು (" ಅದೋ ಅಂಗಾರಕ ” ಎಂದು ಕೈ ತೋರಿಸಿ ಹಲ್ಲು ಕಿಸಿವುದನ್ನು ಇನ್ನೂ ಬಿಟ್ಟಿಲ್ಲ. ಹೀಗೆ ಹೇಳುವುದಕ್ಕೆ, ಲೋಕದ ಮೂರ್ಖ ತೆಯೊ-ಮೂಢತೆಯೊ-ಕಾರಣವು ಯಾವುದಿರಬಹುದು? ಮೊದಲನೆಯ ದಾದರೆ, ಅವರಲ್ಲಿ ಸಾನಕ್ಕೆ ಎಡೆಯಿಲ್ಲ; ಮೂರ್ಖರಲ್ಲಿ ಮರ್ದನಂ ಗುಣ ವರ್ಧನಂ' ಎಂಬ ನ್ಯಾಯವೇ ತಕ್ಕುದು, ಇನ್ನು, ಎರಡನೆಯದಾದರೆ, ಬಿಚ್ಚಿ ಬಿಡಿಸಿ ಹೇಳಿದ ಮೇಲಾದರೂ ಕರೆಯಬೇಕಲ್ಲವೆ ? ಯೋಚಿಸಿನೋಡು. ಎಳವೆಯಲ್ಲಿ ನನ್ನನ್ನೊಮ್ಮೆ, ಅಂಗಾರ (ಮಸಿ) ವನ್ನಾಗಿ ಮಾಡಿದವನೆ ಆ ಆರ್ಯನೆಂದ ಮೇಲೆ, ಅಂಗಾರಕನೆಂಬ ಹೆಸರು, ಅವನಿಗೇ ಅಲ್ಲದೆ ನನಗೆ ಹೇಗೆ ಸಲ್ಲು ವುದು? ನನ್ನನ್ನಿರಲಿ, ಆ ತಸನನ್ನು, ಆರ್ಯನೆಂಬ ಗಂಭೀರವಾದ ಹೆಸರ ನಿಟ್ಟುಕೊಂಡು, ಗೋಚರ್ಮವನ್ನು ಹೊದೆದು ಮಂದೆಯಲ್ಲಿ ಎಡೆಗೊಂಡ ಹುಲಿಯಂತೆ, ಸಾಧುಪ್ರಾಣಿಗಳನ್ನೆಲ್ಲ ಸುಟ್ಟು ತಿನ್ನಲಿಕ್ಕುಂಟು, ನೋಡು, ಅವನ ಹತ್ತಿರ ಹೋದವರಿಗೆಲ್ಲ ಮೌಢಾವಸ್ಥೆಯೆ ಗತಿಯಲ್ಲದೆ, ಸ್ವಪ್ರಕಾಶ ಶಕ್ತಿ ಇಲ್ಲವೇ ಇಲ್ಲ. ಇದು ಯಾವ ನ್ಯಾಯವು? ಇದರಿಂದ, ಅವನು ಹೇಳಿಕೊಳ್ಳುವ ಲೋಕಾಭಿವೃದ್ಧಿಯಾದರೂ ಹೇಗಾದೀತು? ದೊರೆಯೆಂದರೆ, ಎಲ್ಲ ರಲ್ಲಿಯ ದೊರೆ (ಸಮಾನ)ಯಾಗಿರಬೇಕು, ಹೀಗೆ ಕಂಡುದನ್ನು ಕಂಡಂತೆ ಹೇಳುವುದರಿಂದಲೆ, ಕೆಂಡದ ಸಿಟ್ಟು ಬಂದು ಮೂಢರು ( ಅನಿಷ್ಟಕ್ಕೆ ಅಂಗಾ ರಕ'ನೆಂದು ಮತ್ತಷ್ಟೂ, ನನ್ನನ್ನು ನಿಂದಿಸುವುದು, ಹುಂ, ಈ ಕಣ್ಣು ಕಿವಿ ಗಳಲ್ಲಿ, ಏನೆಲ್ಲ ಕಂಡು ಕೇಳಿ ಆಯಿತೊ, ಇನ್ನೇನೆಲ್ಲ ಉಂಟೋ? ಇರಲಿ, ಹತ್ತರ ಮೇಲೆ ಹನ್ನೊಂದು, ನನ್ನಲ್ಲಿ, ಆರ್ಯನ ಒಳ್ಳಡತೆಯ ವಿಷಯ ವಾಗಿ, ನೀವು ಏನು ಹೇಳಿದರೂ, ಬೇರು ಬಲ್ಲ ವನಿಗೆ ಎಲೆ ತೋರಿಸು ವಂತೆಯೇ ಸರಿ. ನಕ್ಷತ್ರಪತಿ:- ಪ್ರಿಯನೆ, ಆರ್ಯನ ಆಪ್ತರಾಗಿರಬೇಕಾದವರ ಅಭಿಪ್ರಾಯವೇ ಹೀಗಿರುವಾಗ, ನಮಗೆ ಇನ್ನು ಬೇರೆ ಸೂಕ್ಷ್ಮ ದರ್ಶಕಯಂತ್ರವೇಕೆ ? ನನ್ನೂ ಬ್ಬನ ಸಲುವಾಗಿ ಹೇಗಾದರೂ ಚಿಂತೆಯಿಲ್ಲ. ಲೋಕಹಿತಕಾರ್ಯದಲ್ಲಿ ಕೈ ಹಾಕುವಾಗ ಬಲ್ಲವರೆಲ್ಲರ ನಿಜವಾದ ವಿಚಾರವನ್ನು ತಿಳಿದುಕೊಳ್ಳಬೇಕು.