ಪುಟ:ಹಗಲಿರುಳು.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ---------- --- --..-.-.. ಕನ್ನಡ ಕೋಗಿಲೆ, ಮೇ ೧೯೧೮. ನೀನೆಂದರೆ, ಆ ಕಡೆಗೂ ಹಿತಚಿಂತಕನು, ನಮ್ಮವರಿಗಾದರೂ, ನಿನ್ನಲ್ಲಿ ನಂಬಿಕೆಯುಂಟು, ಅದರಿಂದ ನಡುವೆ ನಿಂತು, ದಡೆಹಿಡಿದು ತಪ್ಪೋಸ್ಸು ಗಳನ್ನು ಅಳೆದುಬಿಡು. ಕವಿ:- ರಾಯ, ಅವರವನಾದ ಈ ಸದಾಗತಿಯ ಮಧ್ಯಸ್ಥನಾಗಿರಲಿ, ಒಬ್ಬ ನಿಗಿಂತಲೂ ಇಬ್ಬರೆ ಲೇಸು “ದ್ವೇಷೋಪಿ ಸಮ್ಮತ ಹೈ?” ಎಂಬ ಕವಿ ಕಾಳಿದಾಸನ ಮಾತಿನಂತೆ, ಹಗೆಗಳ ಸಾಲಿನವರಾದರೂ ಈ ಶಿಷ್ಯರಿಬ್ಬರಲ್ಲಿ ಯೂ ನಮಗೆ ಬರವಸೆಯುಂಟಲ್ಲ ವೆ? ನಕ್ಷತ್ರಪತಿ:- ಮುಚ್ಚು ಮರೆ ಏನು? ಕವಿಯೆಂದುದು ಸವಿಮಾತು. ಜಲಧರ:- ಸರಿ, ಆದರೆ ಒಂದು ವೇಳೆ ಲೋಕವು ನಮ್ಮ ಮಧ್ಯಸ್ಥಿಕೆಗೆ ಒಪ್ಪ ದಿದ್ದರೂ, ಅವರ ಜೀವನಕ್ಕೆ ಅಡ್ಡಬರುವುದು ಅಧಿಕಾರದ ಲಕ್ಷಣವಲ್ಲ. ನಕ್ಷತ್ರಪತಿ:- ಸರಿ, ಓಷಧೀಶನಾದ ನಾನಾದರೂ, ಬೆಳೆಗಳನ್ನೊಣಗಿಸಿ, ಲೋಕದ ಆರೋಗ್ಯವನ್ನೂ ತುತ್ತನ್ನೂ ಮುತ್ತಿ ಸುವವನಲ್ಲ, ತಪ್ಪಿಗೆ, ಬೆನ್ನಿಗೆ ಬಡಿಯ ಬೇಕಲ್ಲದೆ ಹೊಟ್ಟೆಗೆ ಹೊಡೆಯಬಾರದು. , ಜಲಧರಃ- ಇನ್ನೇನು? ಇಬ್ಬರದೂ ಒಂದೇ ಮನೆಯಾಯಿತು, ಆದರೆ, ಇಕ್ಕಡೆ ಯವರ ಮಧ್ಯಸ್ಥರ ಕೆಳಗಿರುವುದು ತಕ್ಕುದು. ಲೋಕವು, ಹೇಗೂ ಕೆಳ ಗಿದೆ. ನೀವೂ ಆ ಸಮಯದಲ್ಲಿ ನಮ್ಮೊಳಗಿರಬೇಕಾದೀತು. ನಕತುಪತಿ:- ಒಳ್ಳೆಯದು, ಆದರೆ, ನೀವು ಮಾತುಕತೆ ನಡೆಯಿಸುವಾಗ, ಲೋಕದವರು, ಕೆಳಗಾದರೂ ನಿಮ್ಮಿದಿರಲ್ಲಿಯೆ ಇರುವರು, ನಾವಾದರೋ, ಹಿಂದುಗಡೆ ಮೋರೆಯಡಗಿಸಿಕೊಂಡಿರಬೇಕಾಗುವುದು, ಅದರಿಂದ, ನಮ್ಮ ಪ್ರತಿನಿಧಿಯಾಗಿ, ಕತ್ತಲೆಯೊಂದು ನಿಮ್ಮಿದಿರಲೇ ಇರಬೇಕು, ನಿಮ್ಮ ಬರ ವಸೆ, ನಮಗೆ ಎಷ್ಟರಮಟ್ಟಿಗಿದೆಯೆಂದು, ನಿಮಗೇ ಮನಮುಟ್ಟಿರುವುದಷ್ಟೆ. ಆದರೂ ಇದೊಂದು ನಮ್ಮವರ ಗೌರವಾರ್ಥವಾಗಿ ಜಲಧರ:- ಆಗಲಿ, ಮನಸ್ಸಿಗೆ ಮತ್ಸರವುಂಟೆ? ನಾನಿನ್ನು, ಲೋಕದ ಒಡನಾಡಿ ಯಾದ ಈ ಸದಾಗತಿಯನ್ನೆ ಮುಂದೆ ಮಾಡಿ, ಅವರೊಡನೆ ಮಾತಾಡುತ್ತೇನೆ.