ಪುಟ:ಹಗಲಿರುಳು.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ಕನ್ನಡ ಕೋಗಿಲೆ, ಮೇ ೧೯೧೮,


ಕಲಹಕ್ಕೂ ಎಡೆಯಿಲ್ಲ. ಅದಿಲ್ಲವಾದರೆ, ಮುಖ್ಯವಾದ ಶೃಂಗಾರರಸದ ಜೀವನವೆ ಆರಿದಂತೆ, ನನ್ನ ಪ್ರೇಮಕಲಹದ ಗುಟ್ಟಾದರೂ ಬೇರೆಯಲ್ಲ ; ಆ ಉಪಾಯದ ಮೊಗ್ಗೆಯನ್ನು ನಿನ್ನ ಗಾಳಿಯ ಗಂಟಿನಲ್ಲಿ ಹಾಕಿಕೊಂಡರೆ, ಗಂಧವು ಬಯಲಾಗಿ, ಕೆಟ್ಟು ಹೋಗುವುದೆಂದು ಮಾತ್ರವೆ. ಇರಲಿ, ಆ ಕೋಪದ ಪರದೆಯನ್ನು ಓಸರಿಸಿ, ಪ್ರೀತಿವಿಶ್ವಾಸದ ಕರಡಿಗೆಯ ಮುಚ್ಚಳ ವನ್ನು ತೆರೆ. ಸದಾಗ:- (ಸಂತೋಷದಿಂದ) ಪ್ರಿಯನೆ, ನಿನ್ನ ಎಚ್ಚರಿಕೆ ಸರ್ವಥಾ ಸರಿಯೆ. ಆದರೆ ನಾನಾದರೂ ಆ ಗುಟ್ಟಿನಕಟ್ಟನ್ನು ಮನಸ್ಸಿಗೆ ಮಾತ್ರವಲ್ಲದೆ, ಕೈಗೆ ಕೊಟ್ಟಿಲ್ಲ. ನಿನಗೊಬ್ಬನಿಗೆ ತಿಳಿಸುವುದಷ್ಟೇ ನನ್ನ ಎಣಿಕೆ. ಈಗ ಆ ನಕ್ಷತ್ರಪತಿಯ ಅವನ ಪರಿವಾರವೂ ನಮ್ಮ ಜಲಧರನ ಮರೆಹೊಕ್ಕು ಬೆನ್ನು ಹಿಡಿದಿದ್ದಾರೆ. ಇಕ್ಕಡೆಯ ಜಗಳದ ತೀರ್ಪಿನ ಹಕ್ಕೂ ನಮ್ಮವನ ಕೈಗೇ। ಕಟ್ಟಿಕೊಡೋಣಾಗಿದೆ. ನ್ಯಾಯವಿರುದ್ಧವಾದ ಗೊಡ್ಡು ಚಳವಳವು, ನಮಗೆ ಬೇಡವಾದುದರಿಂದ ಸಂಧಿಗೆ ಇದೇ ಒಳ್ಳೆಯ ಸಮಯವು. ತೇಜಸ್ವಿ - ಸರಿ, ಸಂಧಿಗೆ ನನಗೂ ಸಂತೋಷವೆ, ಆದರೆ ಅವರಿಗೆ ಜಲಧರನ ನಂಬಿಕೆಯಿದ್ದರೆ, ಈ ಕತ್ತಲೆ ಯಾಕೆ ? ಸದಾಗತಿ:- ಅದರಿಂದೇನು ? ಒಕ್ಕಡೆಯವರನ್ನೇ ಇಟ್ಟುಕೊಂಡು ವಾದವನ್ನು ತೀರಿಸುವುದು ತಪ್ಪೆಂದೆಣಿಸಿದ ನಮ್ಮ ಜಲಧರನ ಒಪ್ಪಿಗೆಯಿಂದಲೆ ಕತ್ತಲೆ ಇತ್ತ ಕಡೆ ಬಂದಿದೆ. ತೇಜ - (ಉರಿದೆದ್ದು) ಅ: , ಇದೀಗ ಒಳ್ಳೆಯ ಸಂಧಿ, ಯಾವದು ರಾಜ ಮಾರ್ಗದಿಂದ ಕವಲುದಾರಿಗೆಳೆದು ಕಾಡಿಗೆ ದೂಡುವುದೊ, ಯಾವುದು, ಮುಂಕುಮಸಿ ಬಳಿದು ಕಂಡವರ ಕಣ್ಣನ್ನು ಕುರುಡಾಗಿಸುವುದೊ, ಯಾವು ದರ ಸಲುವಾಗಿಯೆ ಲೋಕಕ್ಕೆ ಇಷ್ಟು ಅಸಮಾಧಾನವುಂಟಾಗಿದೆಯೊ, ಆ ಕಡುಗತ್ತಲೆಗೆ ಈ ಸಂಧಾನದ ಸಭಿಕತೆಯೆ ! ನಕ್ಷತ್ರಪತಿಯಾಗಲಿ, ಪ್ರತಿನಿಧಿ ಗಳಾಗಿ ಗುರು ಮೊದಲಾದವರು ಯಾರಾಗಲಿ, ಬರುವಂತೆ ಏರ್ಪಡಿಸಬೇ ಕಿತ್ತು, ತಾನು ರಾಜನು; ತನ್ನವರು ರಾಜಸಭೆಯ ಮಹನೀಯರು, ಲೌಕಿಕ' ರೊಡನೆ ಕೂಡಿ ಕೂತುಕೊಳ್ಳುವುದೆಂದರೆ ಮಾನಹಾನಿ' ಎಂಬೆಣಿಕೆಯಿದ್ದರೆ,