ಪುಟ:ಹಗಲಿರುಳು.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆL ಕನ್ನಕ ಕೋಗಿಲೆ, ಜೂನ ೧೯೧೮, ಜೂಜಿನ ಓಜ:- ನಮ್ಮ ಮತಗಳಲ್ಲಿ ಅದು ಇದು' ಎಂದೇನು? ಎಲ್ಲವೂ ಮೇಲಾಗಿಯೇ ಇದ್ದುವು, ಪುಷ್ಕರ ಶಕುನಿ ಮೊದಲಾದ ಬ್ಯೂತವಿದ್ಯಾ ಶಿರೋಮಣಿಗಳೆಂದರೆ ಸಾಮಾನ್ಯರೆ ? ಐಶ್ವರ್ಯಬಲದಿಂದ ಉಚ್ಚ ನೀಚ ಭಾವನೆಗಳುಂಟಾಗಿ ಲೋಕವೆ ಕೆಟ್ಟು ಹೋಗುವ ಪ್ರಸಂಗವನ್ನು ನಿವಾರಿಸ ಲಿಕ್ಕಾಗಿ, ಆ ದ್ರವ್ಯವನ್ನು ತೂಗಿಕೊಡುವಂತಿರುವ ದತ್ಯವಿದ್ಯೆಯನ್ನು ಹಬ್ಬಿಸಿದ ಆ ಆಚಾರ್ಯರ ಕಲಿಕೆಗೆ ಕಣ್ಣುಂಟೆ? ದುರದೃಷ್ಟದಿಂದ ಆ ಮಹ ನೀಯರು ಮರೆಯಾದರು, ಈಗ ಈ ನೀಚರು ಕಾಲ್ಮೀಡಿ ಕುಳಿತು ಕಂಡು ಕೇಳಿದವರನ್ನು “ಏಳುಕೂರು' ಮಾಡುತ್ತಾರೆ, ಅದರಿಂದ ಕೆರಳಿನ ತೂಣ ದಂತಿರುವ ಇವರನ್ನು ಮುರಿದಿಡಲೆಬೇಕು, ಕಳ್ಳರ ಗುರು:- ಎಲ್ಲವೂ ಸರಿಯೆ. ಆದರೆ, ಈಗ ಮಾತಾಡುತ್ತಿರಲಿಕ್ಕೆ ಎದೆ ಯಿಲ್ಲ. ಮನೆಗಟ್ಟಿದ ಮೇಲೆ ಸಾರಣೆ ಎಂಬಂತೆ, ಕೆಲಸವನ್ನು ಮಾದಲು ಮಾಡೋಣ, ನಾನೀಗ ಗನ್ನಹಾಕಿ ಒಳಹೋಗುತ್ತೇನೆ. ನಗನಾಣ್ಯಗಳನ್ನು ಆರಿಸುವುದಕ್ಕಾಗಿ ಜೂಜಿನ ಓಜನು ನನ್ನೊಟ್ಟಿಗೆ ಇರಬೇಕು, ಈ ಸಾರಜ್ಞನು, ಯಾರಾದರೂ ಕಾವಲಿಗರ ಸುಳಿವು ಸೋಂಕನ್ನು ಇದಿರುನೋಡುತ್ತ ಹೊರಗೆ ಇರಲಿ. [ಎಲ್ಲರೂ ಒಪ್ಪಿದರು. ಕಳ್ಳರಗುರುವಿನ ಗನ್ನಗತ್ತರಿಗೆ ಮನೆಗೋಡೆ ಒಡೆಯಿತು, ವಾತಕಫಗಳಂತೆ, ಮನೆಯೆಂಬ ಮೆಯನ್ನು ಹೊಕ್ಕರು. ಪಿತ್ತ ದಂತೆ, ಹೆಂಡದಗಂಡನು ಆ ತೂತಿನ ತಲೆಬಾಗಿಲಲ್ಲಿ ಕಾಯುತ್ತಿದ್ದನು, ರೋಗ ಬಾಧೆಯಿಂದ ನರಳುವಂತೆ, ಮನನಾಯಿ ಬೊಬ್ಬೋ' ಎಂದು ಬಗುಳಿತು. ನರಗಳ ಬಡಿದಾಟದಂತೆ ಕೆಲ ಹೆಂಗಸರು, ಎಚ್ಚತ್ತು ಅತ್ತಿತ್ತ ತಿರುಗಾಡಿದರು. ಮುದ್ದು ಮಾಟಗಳಂತೆ, ಆಯುಧಗಳೊಡನೆ, ಒಳಗೆ ಸದ್ದಾದ ಕಡೆಗೆ ಮನೆ ಗಂಡ ಸರು ಬಂದರು, ಕಳ್ಳರ ಗುರುವಿಗೂ ಜೂಜಿನ ಓಜನಿಗೂ ಔಷಧದ ಗದಾ ಪ್ರಯೋಗವೂ ಆಯಿತು. ಬಂದ ದಾರಿಗೆ ಸುಂಕವಿಲ್ಲ ಎಂದು ಭಾವಿಸಿ ಇಬ್ಬರೂ ಹೊಕ್ಕಕ್ಕೆ ಹೊರಡಲು ಆರಂಭಿಸಿದರು.] ಹೆಂಡದಗಂಡ:- (ಗಾಬರಿಗೊಂಡರೂ ವಿಮರ್ಷಾಪೂರ್ವಕವಾಗಿ) ಇದೆ, ನಮ್ಮವ ರಿಬ್ಬರೂ ಕಣ್ಣು ಮುಚ್ಚಿಕೊಳ್ಳಿರಿ, ಮರಳು ಚೆಲ್ಲುತ್ತೇನೆ ಜಾಗ್ರತೆ, ಜಾಗ್ರತೆ: [ಎಂದು ಚೆಲ್ಲಿದನು. ಇಬ್ಬರ ಕಣ್ಣ ಮರಳು ತುಂಬಿಹೋಗಿ