ಪುಟ:ಹಗಲಿರುಳು.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಗಂತು. ೧೬ ಮರಳಿ ತೆರೆಯದಂತಾಯಿತು. ಹೇಗಾದರೂ ಹೊರಬಿದ್ದು, ಎಡವಿತಡವರಿ ಸುತ್ತ ಓಡಿಹೋದರು, ಒಂದೆ ಹೊಟ್ಟೆಯಿಂದ ಇಳಿದವರೂ, ಅಲ್ಲಲ್ಲಿ ಚದರಿ ಮಡಿದುಹೋಗುವಂತೆ, ಒಂದೆ ದಾರಿ ಹಿಡಿದು ಬಂದರೂ, ಎಲ್ಲೆಲ್ಲಿಯೂ ಕಂಡ ಬಟ್ಟೆ ಹಿಡಿಯಬೇಕಾಯಿತು, ಇಂಥ ನೀಚರಲ್ಲಿಯ ಕೆಲವು ಯೋಚನೆ ಗಳು ಯೋಗ್ಯವಾಗಿವೆ, ಆದರೆ, ಸಮುದ್ರಕ್ಕೆ ಸಕ್ಕರೆ ಹಾಕಿದಂತೆ, ಅವು ಅಲ್ಪವಾಗಿರುವುದರಿಂದ, ದುರ್ಭಾವನೆಗಳೆ ಮಿತಿಮೀರಿರುತ್ತವೆ. ಅದರಿಂದ, ಈಗಿನ ಏಕಸತ್ತಾವಾದಿಗಳ ಸಭೆಯಂತೆ, ಎಲ್ಲ ವೂ ಲೋಕವಿರುದ್ಧ ವಾಗಿಪರಿಣಮಿಸಿ, ಕೆಟ್ಟುಹೋಗುತ್ತಿದೆ. -NOXXO--- ನಾಲ್ಕನೆಯ ಅ೦ಕ - ಅಸಕತ್ತಲೆ:- ಅ, ಮಾಡಿದ ಮಾಟಗಳೆಲ್ಲ, ಹಿಂದೊದೆವ ಕೋವಿಯಂತೆ, ನನಗೇ ಅನಿಷ್ಟಕರವಾಗುತ್ತಿವೆ. ಕೈಗೆ ಬಂದುದು ಬಾಯಿಗಿಲ್ಲದೆ ಮಾಯವಾಗುತ್ತಿದೆ. ಆದರೆ ಈಗ, ನಕ್ಷತ್ರಪತಿ ನನ್ನ ಕಡೆಗೆ, ಒಂದಿಷ್ಟು ಕೊಂಕಾಗಿದ್ದರೂ ಈ ರಾತ್ರಿಯಲ್ಲಿ ಯ ಆ ಹಗಲಿನಲ್ಲಿ ಯೂ ನನಗಿರುವ ಅನುಕೂಲತೆಗಳನ್ನು ಹೋಲಿಸಿದರೆ, ಅಜಗಜಾಂತರದ ವ್ಯತ್ಯಾಸವಿರುವುದು, ಅದರಿಂದ, ಈಗಲೆ, ಏಳಿಗೆಗಾಗಿ ಕೈಲಾಗುವ ಪ್ರಯತ್ನ ಮಾಡಬೇಕು, [ಮನೋರಥವನ್ನು ಏರಿ ದರೆ, ಅದು ಎಲ್ಲೆಲ್ಲಿಗೆ ಹೋಗಿ, ಆರಾರೊಡನೆ ಮಾತಾಡಿ, ಎಂಥೆಂಥ ಉಪಾಯಗಳನ್ನು ಹೂಡುವುದಿಲ್ಲ ! ಆದರೆ, ಆ ಹೂಟವು ಬಾನಿನ ಬಳ್ಳಿಯಾ ಗದ ತೋಟದ ತೆಂಗಾಗಬೇಕಾದರೆ, ಹಿನ್ನೋಟ ಮುನ್ನೋಟಗಳೂ ತನ್ಯಾಟದ ತಿಳಿವೂ ಚೆನ್ನಾಗಿ ಇರಬೇಕು, ಆ ರಥಕ್ಕೆ, ವಿಚಾರವೆಂಬ ಪಳಗಿದ ಕುದುರೆ ಯನ್ನು ಕಟ್ಟಿದರೆ, ರಾಜಬೀದಿಯಲ್ಲಿ ನೀರಾಗಿ ಗರಗರನೆ ಹರಿದು ಗುರಿ ಮುಟ್ಟುವುದು, ಆ ತೇರಿನ ನೊಗವನ್ನು, ಭ್ರಮವೆಂಬ ವಾಜಿಯ ಹೆಗಲಿಗೆ ತಗಲಿಸಿದರೆ, ಅದು ಕಾಡುಗುಡ್ಡಗಳಿಗೆ ಕಣಿವೆಕಂದಕಗಳಿಗೆ ಹಾಯ್ದು; ತನ್ನನ್ನು ನಂಬಿ ಹಿಂಬಾಲಿಸುವ ಗಾಡಿಗೂ ಅದರೊಳಗಿನವರಿಗೂ ದುರ್ಗತಿಯನ್ನ ಒದಗಿಸುವುದು, ಈ ಸಂದರ್ಭದಲ್ಲಿ, ಬೆನ್ನು ಹಿಡಿದ ಮಡದಿಮಕ್ಕಳನ್ನು ದುರ್ದಶೆಯ ತುತ್ತಾಗಿಸಿ ಪಾರಾದ ಕೆಲವು ಪಂಡಿತರು ಕಣ್ಣೆದುರಿಗೆ ಬಂದು