ಪುಟ:ಹಗಲಿರುಳು.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಗಲಿರುಳು. ಮಾಸಿಹೋಯಿತು ! ಇದನ್ನು ಲೋಕದ ಒಂದು ಕತೆ ನೆನಪಿಗೆ ತರು ತಿದೆ. ಕೇಳು- ಇಂದಿಗೆ ಎಷ್ಟೋ ಮೊದಲು, ಕಡೆಹಳ್ಳಿಯಂಬಲ್ಲಿ ಒಬ್ಬ ಬ್ರಾಹ್ಮಣನಿದ್ದನು, ಅವನ ಮನೆಯನ್ನು ಹಲವರು ನೋಡದಿದ್ದರೂ ಅವನು ಒಬ್ಬ ನದನ್ನೂ ಬಿಡಲಿಲ್ಲ, ನಾಲ್ಕು, ತಪ್ಪಿದರೆ, ಐದು ದಿನಕ್ಕೊಮ್ಮೆ ಅವನ (ಭವತಿಭಿಕ್ಷಾಂದೇಹಿ' ಪ್ರತಿಯೊಂದು ಮನೆಯಲ್ಲೂ ಆವೃತ್ತಿಯಾಗುತ್ತಿತ್ತು. ಅಕ್ಕಿಯ ಕದಿಕಡ್ಕೊ೦ದು ಚೆಲ್ಲಿ ಹೋದರೂ, ಕಾಗೆಯ ಕೊಕ್ಕಿನಂತಿರುವ ಬೆರಳಿಂದ ಹೆಕ್ಕುತ್ತಿದ್ದನು. ಆಗ ನಗುತ್ತ ಅವನು ಲೋಕದಲ್ಲಿ ಬಹಳ ಮಂದಿ ಗಣಿತಶಾಸ್ತ್ರ ಪಾರಂಗತರಿದ್ದಾರೆ. ಆದರೆ, ಈ ಕಡಿಕಾಳಿಗೆ, ಇಂತಿಷ್ಟೆ ಬೆಲೆಯೆಂದು, ನಾನಲ್ಲದೆ ಯಾರೂ ಹೇಳಲಾರರು' ಅದಕ್ಕೆ ಮತ್ತೊಬ್ಬ ವಿದ್ಯಾರ್ಥಿ “ಅಯ್ಯಾ, ವೆಂಕಣ್ಣ, ನಾನು ಅಯ್ಯಗಳ ಮಠದಲ್ಲಿ ಕಲಿಯ ತೊಡಗಿ ಐದಾರು ವರ್ಷಗಳಾದುವು. ನಿನ್ನ ಪ್ರಶ್ನೆಗೆ ಉತ್ತರಗೊಡಲಿಕ್ಕೆ ಮಹಾಶಾಸ್ತ್ರಿಗಳೇನೂ ಬೇಡ, ಅದಿರಲಿ, ಉತ್ತರಹೇಳಿದರೆ, ನನಗೆ ಉಡು ಗೊರೆ ಏನು? (“ಬ್ರಾಹ್ಮಣ-ಇದೇನು? ಮಜ್ಜಿಗೆಗೆ ಗತಿಯಿಲ್ಲ, ಮೊಸರಿಗೆ ಚೀಟು, ಉತ್ತರದ ಮೇಲಲ್ಲವೆ ಉಡುಗೊರೆ ? ಹುಂ, ಚಿಂತೆಯಿಲ್ಲ, ಹುಡುಗರು ನಿಷ್ಕಾಮ ಕರ್ಮಕ್ಕೆ ಕೈಹಾಕುವುದು ಕಡಮೆ, ಸಂಸಾರಿಗಳಾಗತಕ್ಕ ಅವರು ನಿಷ್ಠಾವಿ ಗಳಾಗಬಾರದೆಂದೆ ನನ್ನದೂ ಎಣಿಕೆ, ಇರಲಿ, ಉತ್ತರಹೇಳಿದರೆ ಸುಂದರ ವಾದ ಬಹುಮಾನವನ್ನೆ ಕೊಡುತ್ತೇನೆ, ಆದರೆ, ಅದನ್ನು ಹಾಗೆಹೀಗೆಂದು ತಿರಸ್ಕರಿಸದೆ ತಲೆಬಗ್ಗಿಸಿ ಅಂಗೀಕರಿಸಬೇಕು, ನಿನ್ನಂಥ ಹುಡುಗರೂ ನನ್ನ ವಿದ್ವತ್ತೆಗೆ ಕಪ್ಪು ಹಚ್ಚಿ ಉಡುಗರೆಗೆ ಕೈನೀಡುವುದಿದ್ದರೆ ನೋಡೋಣ.* ಹುಡುಗನೇನೋ ಶ್ರೀಮಂತನ ಮಗನು, ಈ ಬಡವನು ಹೆಚ್ಚೇನೂ ಕೊಡ ಲಾರನೆಂದು ಅವನಿಗೆ ಗೊತ್ತಿತ್ತು, ಆದರೂ, ಹತ್ತಾಗಲಿ, ಒಂದಾಗಲಿ, ಉಡು ಗೊರೆಯೆಂದರೆ, ಹುಡುಗರಿಗೆ ಒಂದು ಸಡಗರಿಕೆ: ಬ್ರಾಹ್ಮಣನ ಮಾತಿಗೆ ಹುಂಗುಟ್ಟಿದನು. ಇಬ್ಬರು ಗೃಹಸ್ಥರ ಎದುರಲ್ಲಿ ಹೊಡೆಗೈಯ ಆಣೆಗೈಯ ಪಂತವಾಯಿತು, ಬಾಲಕನು ಉತ್ತರವನ್ನು ನೀರಿನಂತೆ ಹೇಳಿಬಿಟ್ಟನು. ಮಧ್ಯ ಸ್ಥರು 'ಸೈ' ಎಂದರು. ಆಗ ಹುಡುಗನು ಕೈಹೊಯ್ದು “ಎಲೆ, ವೆಂಕಣ್ಣಾ, ಈಗೇಲ್ಲಿ ಉಡುಗೊರೆ” ಎಂದು ಚಾಳಿಸಿದನು. ಆಗ ಬ್ರಾಹ್ಮಣನು ನಗುತ್ತ