ಪುಟ:ಹಗಲಿರುಳು.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೆಗಳಿರುಳು, ಎಂದು ಹೇಳುತ್ತಾರೆ, ಒಮ್ಮೆ ನಾಟದ ಮದ್ದು, ಇನ್ನೊಮ್ಮೆ ಕಾಲ, ಹವೆ ಇವುಗಳ ಆನುಕೂಲ್ಯದಿಂದ ನಾಟುವುದಲ್ಲವೆ? (ವಿಂದು, ಕಳೆಗುಂದಿದ ನಕ್ಷತ ಪತಿಯ ಕಡೆಗೆ ಕೈನೀಡಿ) ಎಲೆ ನಕ್ಷತ್ರಪತಿಯೆ, ಈ ವರೆಗೆ, ಎಷ್ಟೆಷ್ಟೊ ಆನುಕೂಲ್ಯಗಳನ್ನು ಒದಗಿಸಿ (ಬುದ್ದಿ, ಈ ಹೊತ್ತು ಬಂದೀತು, ನಾಳೆ ಬಂದೀತು' ಎಂದು ದಾರಿ ನೋಡುತ್ತಿದ್ದು ದೆಲ್ಲ ಗಾಳಿಯ ಹತ್ತಿ ಯಾಯಿತು, ಆದರೆ, ಸಾರಾಸಾರವಿಚಾ ರಕನಾದಮೇಲೆಯೆ, ಅಧಿಕಾರವನ್ನು ಕೊಡದೆ, ಮೊದಲೆ ಯಜಮಾನಿಕೆ ಯನ್ನು ಒಪ್ಪಿಸಿದ ತಪ್ಪು ನನ್ನದೆ. ಈಗ ಮನೆಗಿಂತ ದೊಡ್ಡ ಮಟ್ಟುಗಲ್ಲನ್ನು ಏರಿಸಿದ ನನ್ನ ತಪ್ಪಿಗೆ ನನಗೂ, ನಿಂತಲ್ಲಿಂದಲೆ ಕಾಲುನೀಡಿದ ನಿನ್ನ ಉದ್ಧತತ್ವದ ಘಾತುಕತನಕ್ಕೆ ನಿನಗೂ ತಕ್ಕ ಪ್ರಾಯಶ್ಚಿತ್ತವೆ ಆಯಿತು. ಇರಲಿ, ಇದರಿಂದ ಲೂ ಒಳ್ಳೆಯ ಪಾಠವನ್ನೇ ಕಲಿಯಬಹುದು, ಹೇಗೆಂದರೆ-ದಾರಿಹಿಡಿದವರು ಮುಂದಾಳುಗಳ-ದಾರಿಬಿಟ್ಟವರು ತಂತಮ್ಮ ಪ್ರಯತ್ನ ಕಷ್ಟಗಳಿಂದಲೆ ಕರ್ತವ್ಯ ವನ್ನು ಕಂಡುಕೊಳ್ಳತಕ್ಕುದು, ಅದರಲ್ಲಿ, ಮೊದಲನೆಯವರಿಗೆ, ಆ ಮುಖಂಡರ ಮೇಲುಪಂತಿಯಿಂದಾಗಿ ಸನ್ಮಾರ್ಗವು ಕಣ್ಣೆದುರಲ್ಲಿಯೆ ಇರುವುದು, ಎರಡನೆಯ ವರಿಗೆ, ಅಭ್ಯಾಸವು ದುಷ್ಟವಾಗಿಯೂ, ಸನ್ಮಾರ್ಗವನ್ನು ಹುಡುಕಬೇಕಾಗಿರುವು ದರಿಂದಲೂ, ಕಷ್ಟಕರವಾಗುವುದು, ಊರ ಮುಂದಾಳುಗಳೂ ಹಿಂದಾಳುಗಳೂ ಈ ರೀತಿಯ ವಿಷಯವಿಚಾರವನ್ನು, ಮಾಡುವವರಿದ್ದಾರೆ, ಅದರಿಂದ ನಾವು ಬಹಳ ಜಾಗ್ರತೆಯಿಂದಿದ್ದು , ನಮ್ಮ ನಡತೆಯಿಂದ ಆದಷ್ಟು ಒಳ್ಳೆಯ ದೃಷ್ಟಾಂತವನ್ನೆ ತೋರಿಸಬೇಕು, ಅಲ್ಲವಾದರೆ “ಶಿಷ್ಯಶಾಪಂ ಗುರೋರಪಿ ಎಂಬಂತೆ ಲೋಕವೆಂಬ ಶಿಷ್ಯನ ಪಾಪವು ನಮ್ಮ ಮೇಲೆಯ ಹೊರು ವುದು, ಕೇಳು, ಎಳವೆಯಲ್ಲಿ, ಅದರಲ್ಲಿ ಯೂ, ಸ್ವತಂತ್ರಾಧಿಕಾರಕ್ಕೆ ಎರೆಸಿಕ್ಕಿದಲ್ಲಿ, ಹಲವು ಮಂದಿ ಕೆಳೆಯರು ತಲೆದೋರುತ್ತಾರೆ, ಅವರು ವಿನಯ ವಿಧೇಯತೆ ಸ್ತುತಿ ನಮಸ್ಕಾರ ಮೊದಲಾದ ರಸಾಯನ (Wine)ಗಳನ್ನ ಕಾಣಿಕೆಕೊಡುತ್ತಾರೆ. ಆ ರಸಾಯನವು ನಾಲಗೆಗೆ ಮೆಚ್ಚಿದಷ್ಟೂ, ಹೃದ ಯಕ್ಕೆ ಕಿಚ್ಚೆಂಬುದು, ಮೊದಮೊದಲು ಗೊತ್ತಾಗುವುದಿಲ್ಲ. ಅವರ ಹೊಗಳಿ ಕಗೆ ಹಿಗ್ಗಿ ಹಲವರು ಪರೋಪಕಾರಿಗಳ ಹಂತಿಗೆ ಹತ್ತುತ್ತಾರೆ. ಊರಲ್ಲಿ ಈಗ 'ಪರೀಕ್ಷೆಗಾಗಿ ಓದುವ ಹುಡುಗರಂತೆ, ತಾವು ಮೇಲಿನ ತರಗತಿಗೆ ಏರಬೇಕೆಂದು ಸೊಂಟಗಟ್ಟ ಪ್ರಯತ್ನಿಸುತ್ತಾರೆ. ಆ ತರಗತಿಗಳಲ್ಲಿ ಬಹಳ ಭೇದ