ಈ ಪುಟವನ್ನು ಪ್ರಕಟಿಸಲಾಗಿದೆ
ತಾಯಿ ಮಾತಾಯಿ
೧೧೩
ಒಳನಿನಿಂದ ಚಹದ ಕಪ್ಪಿನೊಡನೆ ಶ್ರೀಧರರಾಯರೂ, ಫಲಹಾರದ ತಟ್ಟೆಯೊಡನೆ ಆ ಹುಡುಗಿಯೂ, ಬೆನ್ನುಗುಂಟ ನೀರಿನ ತಂಬಿಗೆಯೊಡನೆ ಡಾಕ್ಟರರ ಪತ್ನಿ ಇಂದಿರಾಬಾಯಿಯೂ ಬಂದರು, ನಾನು ತುಂಬ ದಿಗಿಲುಗೊಂಡೆ.
ಅವಳ ರೂಪಕ್ಕೂ ಗುಣಕ್ಕೂ ಮನಸೋತು ಸುಧಾರಕರಾದ ಶ್ರೀಧರರಾಯರೇ ಅವಳನ್ನು ಮದುವೆಯಾಗಿ ಈಗೆರಡು ವರುಷವಾಗಿತ್ತಂತೆ.
ದಿನ ತುಂಬಿದವಳಾಗಿ ಈಗವಳು ಮತ್ತೆ ಡಾಕ್ಟರರಲ್ಲಿಗೆ ಬಂದಿದ್ದಳು- ಪುತ್ರವತಿಯಾಗಲೋಸುಗ!