೫೮
“ ಸಾಕು, ಎತ್ತಿಡೀಂದ್ರೆ, ಇದ್ದೇ ಇದೆ. ಯಾವಾಗೂ ನಿಮ್ಮ
ಪುರಾಣ ; ಬೇಕಾದ್ರೆ, ಬೆಳಿಗ್ಗೆ ನಿಮ್ಮನ್ನ ಹುಡಕ್ಕೊಂಡು ಯಾರು
ಬಂದ್ರೂ ಇಲ್ಲಾಂತ ಹೇಳಿಬಿಟ್ಟೇನೆ. ಯಾರ ತೊಂದರೇನೂ ಇಲ್ದೆ
ಬೆಳಿಗ್ಗೆ ಇಂದ ಸಾಯಂಕಾಲದ ತನಕಾ ಬರೀತಾ ಕೂತ್ಕೊಳ್ಳಿ.”
“ ಆಗೋಲ್ಲ-ರಾಜಿ....ಹಗಲು ಹೊತ್ತು ಹುಡುಗರ ಗಲಾಟೆ...,
ಈಗ್ಲೆ ಬರೆದು ಮುಗಿಸೋಕು ಈಗ ಮುಗಿಸಿದ್ದೇನೆ. ಅದೆಷ್ಟು
ಹೊತ್ತಿನ ಕೆಲಸ, ನೀನು ಸ್ವಲ್ಪ ಹೊತ್ತು ಸುಮ್ಮನೇ ಇದ್ರೆ ಸಾಕು...
ಇಲ್ದೇ ಇದ್ರೆ ಸ್ವಸ್ಥವಾಗಿ ಮಲಗು ; ನೀನ್ಯಾಕೆ ಎದ್ದಿರಬೇಕು ?”
ರಾಜಮ್ಮನ ಮುಖದಲ್ಲಿದ್ದ ಗೆಲುವು-ಸಂತೋಷಗಳು ಉಡುಗಿ
ಹೋದುವು. ಕಣ್ಣಿನಲ್ಲಿ ನೀರುಕ್ಕಿ ಬರುವ ಹಾಗಾಯಿತು. ಮೂರ್ತಿಯ
ಹಿಡಿತದಿಂದ ಕೈ ಕೊಸರಿಕೊಂಡು ಹೋಗಿ ಹಾಸಿಗೆಯ ಮೇಲೆ ಉರುಳಿ
ಕೊಂಡಳು.
ಪಾಪ ! ಅವಳ ಮನಸ್ಸಿನಲ್ಲಿ ಒಂದು ಕೊರತೆ, ಗಂಡ
ನೊಂದಿಗೆ ಹೇಳಲಾರಳು ಹೇಳದೆ ಇರಲಾರಳು.
ಹಗಲೆಲ್ಲಾ
ಅತ್ತೆ ಮಾವಂದಿರ ಮುಂದೆ ಓಡಾಡುತ್ತ ಮನೆಗೆಲಸಗಳಲ್ಲಿ ಮುಳುಗಿರು
ವಳು. ಗಂಡನೊಂದಿಗೆ ಆಗ ಮಾತನಾಡಿದಲ್ಲಿ ದೊಡ್ಡವರು ಏನೆಂದು
ಕೊಳ್ಳುವರೋ ಎಂಬ ಅಂಜಿಕೆ, ಮಧ್ಯಾಹ್ನದ ಹೊತ್ತು ಮೂರ್ತಿಯೇ
ಮೂರುಪಾಲು ಮನೆ ಸೇರುತ್ತಿರಲಿಲ್ಲ. ಅಪ್ಪಿ ತಪ್ಪಿ ಮನೆಗೆ ಬಂದರೆ,
ಸುದ್ದಿ ಸಾಕಾಯಿತೆಂದು ಮಲಗಿಬಿಡುತ್ತಿದ್ದ. ಆಗ ಅವನೊಡನೆ
ಮಾತನಾಡುತ್ತ ಕೂಡಲೆತ್ನಿಸಿದರೆ ರೇಗಿ ಬಿಡುತ್ತಿದ್ದ. ಸಂಜೆಯಿಂದ
ರಾತ್ರಿ ೯, ೯-೩೦ ರ ವರೆಗೂ ಮನೆಗೆಲಸವೇ ಆಗಿಬಿಡುತ್ತಿತ್ತು. ಸ್ವಲ್ಪ
ಹೊತ್ತಾದರೂ ಮನಸ್ಸಿಗೆ ಹರ್ಷವುಂಟಾಗುವಂತೆ ಮನೆಯವರೊಂದಿಗೆ-
ನಗುತ್ತ ಆಡುತ್ತ ಕುಳಿತುಕೊಳ್ಳಲು ತನ್ನ ಸಮವಯಸ್ಸಿನ ಹುಡುಗಿಯ
ರಾರೂ ಮನೆಯಲ್ಲಿಲ್ಲ. ಇದ್ದವರೆಲ್ಲ ಚಿಕ್ಕವರು- ಇಲ್ಲ- ದೊಡ್ಡವರು
ಯಾರೇನಾದರೂ ಅಂದುಕೊಂಡು ಹೋಗಲೆಂದು ಗಂಡನೊಂದಿಗೆ
ಸಲಿಗೆಯಿಂದ ಮಾತನಾಡಲು ಧೈರ್ಯವಿಲ್ಲ ; ಅತ್ತೆಯ ಮನೆಗೆ ಬಂದು