ಹೆಂಡತಿಯ ಮನೆಗೆ ಬಂದ ವಿಷಯವನ್ನೂ ಹೇಳಿದ. ಹೆಂಡತಿಯ ವರ್ಣನೆಯೂ ಬಹಳ ಚೆನ್ನಾಗಿ ನಡೆಯಿತು. ಬಹಳ ರೂಪವಂತೆ ಗುಣವಂತೆ ತನ್ನನ್ನು ಬಹು ಪ್ರೀತಿಸುತ್ತಾಳೆ ತಾನೂ ಅವಳನ್ನು ಅತಿ ಯಾಗಿ ಪ್ರೀತಿಸುತ್ತಾನೆಂದೂ ಹೇಳಿದ. ಅವನ ಪತ್ನಿ ಪ್ರೇಮವು ಅಷ್ಟಿಷ್ಟಲ್ಲ. ಎಲ್ಲವನ್ನೂ ಹೇಳಿದ್ದಾದ ಮೇಲೆ ನಾನು ಕಾಗದಗಳನ್ನೇಕೆ ಸರಿಯಾಗಿ ಹಾಕುತ್ತಿರಲಿಲ್ಲವೆಂದು ಪ್ರಶ್ನೆ, ಏನೋ ಕೆಲಸ ಹೆಚ್ಚೆಂದು ನೆವ ಹೇಳಿ ನಿದ್ದೆ ಯ ಸೋಗು ಹಾಕಿ ಮಲಗಿದೆ.
ಒಂದು ತಿಂಗಳ ಕಾಲ ರಾಮೂಗೆ ಇಲ್ಲದ ನೆವ ಹೇಳಿ ತಪ್ಪಿಸಿ ಕೊಂಡು ಹೊರಗೆ ಹೊರಟು ೪-೫ ದಿನಗಳಿಗೊಂದು ಸಲ ಅವನಿಗೆ ಮುಖ ತೋರಿಸಿ ಹಾರಿಬಿಡುತ್ತಿದೆ. ಅವನಿಗೆ ಬಹಳ ವ್ಯಥೆಯಾಗು ತಿತ್ತು. ಆದರೆ ಏನುಮಾಡುವುದು ? ಯಾರಾರೋ ದೊಡ್ಡ ಮನುಷ್ಯರು ಔತಣಕ್ಕೆ ಹೇಳಿ ಮನೆಯಲ್ಲಿ ನಿಲ್ಲಿಸಿಕೊಂಡರೇನು ಮಾಡಲಾದೀತು ?
ಒಂದು ದಿನ ಹೋಟಲ್ ಪ್ರೊಟರಿಂದ ನನ್ನ ಚರಿತ್ರೆ ರಾಮೂಗೆ ತಿಳಿಯಿತು. ಅಂದಿನಿಂದ ನನ್ನ ಬರುವಿಕೆಗೆ ಕಾದಿದ್ದು ಒಂದು ದಿನ ನಾನು ಹೊರಟಾಗ, ನನಗೆ ತಿಳಿಯದಂತೆ ನನ್ನನ್ನೇ ಹಿಂಬಾಲಿಸಿ ನಾನು ಹೋದ ಮನೆಯ ಗುರುತಿಟ್ಟುಕೊಂಡು-ಹಿಂತಿರುಗಿ ಹೋಗಿದ್ದಾನೆ. ಮಾರನೇ ದಿನವೂ ನಾನು ಬರದಿರಲು ಅಲ್ಲಿಗೆ, ಆಕೆಯ ಮನೆಗೆ ಹುಡುಕಿಕೊಂಡು ಬಂದ.
ಅಲ್ಲಿ ಆಕೆಯು ನನ್ನೊಡನೆ ವರ್ತಿಸುತ್ತಿದ್ದುದನ್ನು ನೋಡಿ ಅವನಿಗೆ ಎದೆಯೊಡದಿರಬೇಕು. ನನ್ನನ್ನು ಹೊರಟು ಬಾರೆಂದ ನನಗೆ ಕೋಪ ಬಂತು. ಮೊದಲನೆಯ ಬಾರಿ ಅಷ್ಟು ವರ್ಷಗಳಿಗೆ ಮೊದಲನೆ ಬಾರಿ ಅದೇ ಅವನ ಸಂಗಡ ಜಗಳವಾಡಿದೆ. ಅವನು ನಿರಾಶನಾಗಿ ಹೊರಟ. ನಾನಲ್ಲಿಯೇ ಉಳಿದೆ. ನನ್ನಾಕೆಯ ಮೇಲಿನ ಮೋಹವು ನನ್ನನ್ನು ಆ ಆಳಕ್ಕೆಳೆಯಿತು. ಅಲ್ಲಿಯೇ ಉಳಿದರೂ ನನ್ನ ಮನಸ್ಸಿಗೆ ಸಮಾಧಾನವಿರಲಿಲ್ಲ. ರಾಮುವು ನೊಂದು ಅಸ್ಥಿರ ನಾಗಿರಲು ನನಗೆಲ್ಲಿಯ ಸಮಾಧಾನ.