ಪುಟ:Abhaya.pdf/೪೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ದೊಡ್ಡಮ್ಮನ ವಿಷಯ ತಿಳಿಯಬೇಕೆಂಬ ಆಸೆಯಾಯಿತು ತುಂಗಮ್ಮ

ನಿಗೆ. ಇಲ್ಲಿ,ಯಾರು ತನ್ನ ಜವಾಬ್ದಾರಿಯನ್ನು ಹೊತ್ತವರು ?

"ಅವರೇನಾ ಇಲ್ಲಿ ನೋಡ್ಕೊಳ್ಳೋರು ?"

ತನ್ನ ಸ್ವರವನ್ನು ಕೇಳಿ ತುಂಗಮ್ಮನಿಗೇ ಆಶ್ಚರ್ಯವಾಯಿತು. ತಾನೇ

ಆ ಪ್ರಶ್ನೆಯನ್ನು ಕೇಳಿದ್ದಲ್ಲವೆ ?

ಜಲಜ ಮುಗುಳ್ನಕ್ಕಳು.

"ಹೊಂ. ಅವರೇ. ಒಳ್ಳೆಯವರು. ಅಲ್ವಾ ?"

ಹಾಗೆ ತಾನು ಕೇಳಿದ್ದು ತಪ್ಪಾಯಿತೆಂದು ಲಜ್ಜೆಯಾಯಿತು

ತುಂಗಮ್ಮನಿಗೆ.

ಮತ್ತೆರಡು ನಿಮಿಷಗಳಲ್ಲೆ ಸರಸಮ್ಮ ಬಂದರು. ಬರುತ್ತಲೆ

ಅವರೆಂದರು:

"ಮರೆತು ಹಾಗೇ ಹೊರಟ್ಠೋದೆ ಬಾ ತುಂಗಮ್ಮ. ಕೈ ಕಾಲು

ತೊಳಕೊಂಡು ಬರುವಯಂತೆ, ಬಾ."