ಪುಟ:Abhaya.pdf/೫೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

"ನಿಲ್ಸಿ!ನಿಲ್ಸಿ! ದಮಯಂತಿ! ಅಲಮೇಲು! ನಿಲ್ಸಿ-ನಿಲ್ಸಿ !"

ದೊಡ್ಡಮ್ಮನ ಆಜ್ಞೆಯನ್ನು ಆ ಕ್ಷಣವೇ ಯಾರೂ ಪರಿಪಾಲಿಸುವ

ಚಿಹ್ನೆ ಇರಲಿಲ್ಲ. ಸರಸಮ್ಮನಿಗೆ ರೇಗಿ ಹೋಯಿತು.

"ಬಿಡಿಸಿ, ಇಬ್ಬರನ್ನೂ ಹಿಡ್ಕೊಳ್ಳಿ! "

ಜಗಳ ನೋಡುತ್ತ ನಿಂತಿದ್ದ ಇತರ ಹುಡುಗಿಯರು ಆ ಕೆಲಸ

ಮಾಡಿದರು.

ಪರಸ್ಪರ ಕಿತ್ತಾಡುತಿದ್ದ ಎರಡು ಕೋಳಿಗಳು....ಹುಡುಗಿಯರಿಬ್ಬರೂ

ತಲೆ ಕೆದರಿಕೊಂಡು ಬುಸುಗುಟ್ಟುತಿದ್ದರು.

ಸರಸಮ್ಮ , ಆ ಕಟ್ಟಡದ ನಾಲ್ಕು ಮೂಲೆಗಳಿಗೂ ಕೇಳಿಸುವ ಹಾಗೆ

ಬಾಗಿಲ ಬಳಿ ಉಚ್ಚ ಸ್ವರದಲ್ಲಿ ಅಂದರು:

"ದಮಯಂತಿ- ಅಲಮೇಲು! ನಿಮಗಿಬ್ಬರಿಗೂ ಬೆಳಿಗ್ಗೆ ತಿಂಡಿಯಿಲ್ಲ!

ಇಬ್ಬರೂ ಮಧ್ಯಾಹ್ನದ ವರೆಗೂ ಆಫೀಸು ರೂಮಿನಲ್ಲೇ ಇರಬೇಕು!"

ತುಂಗಮ್ಮನಿಗೆ ಈ ಆಜ್ಞೆ ವಿಚಿತ್ರವೆನಿಸಿತು. ಆದರೆ ಹುಡುಗಿಯರು

ಯಾರೂ ಅಳುಕಿದಂತೆ ತೋರಲಿಲ್ಲ. ಸರಸಮ್ಮನ ಆಫೀಸು ರೂಮು, ಮಲಗುವ ಕೊಠಡಿ,ಎಲ್ಲವು ಅದೇ ಆಗಿತ್ತು.ಆ ಹುಡುಗಿಯರಿಬ್ಬರು ಇತರರಿಂದ ಬೇರಾಗಿ ಕೊಠಡಿಯ ಎರಡು ಮೂಲೆಗಳಿಗೆ ನಡೆದರು.

ಅನಂತರ ಸರಸಮ್ಮ,ಉಳಿದೆಲ್ಲರನ್ನೂ ಉದ್ದೇಶಿಸಿ ಎರಡನೆಯ

ಆಜ್ಞೆಯನ್ನಿತ್ತರು:

"ಈ ದಿವಸ ಎಲ್ಲರೂ ಗುಡಿಸ್ಬೇಕು-ಎಲ್ಲರೂ! ಕಸ ಹೆಕ್ಕಿ!

ತಗೋಳ್ಳಿ ಪರಕೆ!ಹೂಂ!"

ಮರುಕ್ಷಣವೆ ಕಸಗುಡಿಸುವ ಸಾಮೂಹಿಕ ಕೆಲಸ ಆರಂಭವಾಯಿತು.

ಅದರ ಮೇಲ್ವಿಚಾರಣೆಗೆಂದು ಸರಸಮ್ಮ ಹೊರ ಹೋದರು.

ತುಂಗಮ್ಮನ ಸುಖ ಒಂದು ಕಡೆ ಒಂದಿಷ್ಟು ಹೆಪ್ಪು ಗಟ್ಟದ ಹಾಗಾ

ಯಿತು. ಈ ಸುಖದ ಬೀಡಿನಲ್ಲಿಯೂ ಹೀಗೆ ಆಗಾಗ್ಗೆ ಕಲಹಗಳಾಗುತ್ತವಲ್ಲವೆ?

ಆದರೆ ಜಲಜಳಿಗೆ ಇದೆಲ್ಲವೂ ಸರ್ವಸಾಮಾನ್ಯವಾಗಿತ್ತು. ತಿಳಿವಳಿ

ಕೆಯ ದೃಷ್ಟಿಯಿಂದ ಆಕೆ ತುಂಗಮ್ಮನನ್ನು ನೋಡಿ ನಸುನಕ್ಕಳು. ತಮ್ಮಿ.