ಪುಟ:Abhaya.pdf/೬೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಮತ್ತೆ ಅಸಮಾಧನದ ಆಳದಲ್ಲಿ ಮನಸಿನ ಸಂಚಾರ.

ಆದರೆ,ಕಾರುಣ್ಯಮಯಿಯಾದ ದೊಡ್ಡಮ್ಮನ ಮಾತುಗಳು,ಸ್ನೇಹ

ಮಯಿಯಾದ ಜಲಜೆಯ ಮಾತುಗಳು,ಸಮಾಧಾನದ ಎತ್ತರಕ್ಕೆ ತುಂಗಮ್ಮ ನನ್ನು ಎಬ್ಬಿಸುತಿದ್ದುವು....

ಮತ್ತೊಮ್ಮೆ ಮೌನ ನೆಲೆಸಿದಾಗ ಜಲಜೆಯೇ ಮಾತುತೆಗೆದಳು:

"ತುಂಗಕ್ಕ,ನಿಮಗೆ ಕಥೆ ಅಂದರೆ ಎಷ್ಟಾನಾ?"

"ಹೂಂ. ಯಾಕೆ?"

"ಎಂಥಾ ಕಥೆ?"

"ಎಂಧಾದ್ದು ಅಂದರೆ ಏನು ಹೇಳ್ಲೆ?"

"ರಾಜಕುಮಾರ-ರಾಜಕುಮಾರಿ ಕತೆ ಹಿಡಿಸುತ್ತಾ?"

ತುಂಗಮ್ಮನಿಗೆ ನಗು ಬಂತು.ಜಲಜ ನೊಂದುಕೊಂಡಳು ಆ

ನಗುನೋಡಿ.

"ಹೋಗಲಿ ಬಿಡಿ.ಅಲ್ಲ,ನೀವು ಓದೇ ಇಲ್ವೇನೊ!ಈಗ ಚಂದಮಾಮ

ಅಂತ ಒಂದು ಕತೆ ಪುಸ್ತಕ ತಿಂಗಳು ತಿಂಗಳಿಗೂ ಬರತ್ತೆ ನೋಡಿ ದೀರಾ?"

"ನೋಡಿದೀನಿ"

"ಚೆನ್ನಾಗಿರತ್ತೆ ಅಲ್ವೆ? ಬೊಂಬೇನೂ ಹಾಕಿರ್ತ್ತಾರೆ!"

ಹದಿನೆಂಟರ ಹುಡುಗಿ ಜಲಜಎಳೆಯಮಗುವಿನಹಾಗೆ ಚಂದಮಾಮ

ಓದುತ್ತಾಳೆ!ಮವಳ್ಳಿಯ ಮನೆಯಲ್ಲಿದ್ದಾಗಲೂ ಅದಕ್ಕಿಂತಲೂ ಹಿಂದೆ ತುಮಕೂರಿನಲ್ಲೂ ತುಂಗಮ್ಮನೂ ಚಂದಮಾಮ ಪತ್ರಿಕೆಯನ್ನು ನೋಡಿ ದ್ದಳು.ಎಳೆಯ ಹುಡುಗರ ಹಾಗೆ ಮನೆಯ ಹಿರಿಯರೂ ಅದನ್ನೋದು ವುದನ್ನು ಕಂಡಿದ್ದಳು.

"ನನ್ನ ತಮ್ಮ ಕೊಂಡ್ಕೊಂಡು ಬರ್ತಿದ್ದ"

-ಎಂದಳು ತುಂಗಮ್ಮ,ತನಗರಿಯದಂತೆಯೇ.

"ತಮ್ಮ?"

"ಹೂಂ ಚಿಕ್ಕೋನು.ನಮ್ಮೂರಲ್ಲಿದಾನೆ."

ಜಲಜ ಒಮ್ಮೆಲೆ ಮೌನವಾದಳು.ಹತ್ತರು ಯೋಚನೆಗಳು ಆಕೆಯ