ಪುಟ:Banashankari.pdf/೧೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ದರು.ಬಿಡುವಿನ ಅವಧಿಯೆಲ್ಲ ಭಾರತಪಾಚನಕ್ಕೆ ಮಿಸಲಾಗುತ್ತಿತ್ತು. ಅಷ್ಟಿದ್ದರೂ ಮಗನ ನೆನೆಪಾಗಿ ಆಂತಮು೯ಖಿಯಾದಾಗ ಅವರು ಹೇಳುತ್ತಿದ್ದರು; " ವಿಷಯ ಜ್ವರ ಯಾವಾಗ್ಲೂ ಅಷ್ಟೇ ಲಕ್ಷ್ಮಿ. ಆರೈಕೆ ಮುಖ್ಯ. ಸ್ವಲ್ಪ ಹೆಚ್ಚು ಕಡಿಮೆ ಅದರೂ ಪ್ರಾಣಕ್ಕೆ ಸಂಚಕಾರ. ಮೊದಲೇ ಮನೆ ಅಡಿಗೆ ಇಲ್ಲದೆ ನಿತ್ರಾಣನಾಗಿದ್ದ ಹುಡುಗು.....ಅಂತೂ ಅಗ್ಹೋಯ್ತಲ್ಲ....ಹೂಂ..." ಅಂಚೆಯವನು ಈಗಲೂ ವಾರಕ್ಕೆರಡು ಬಾರಿ ಚಿಕ್ಕಮಗಳೂರಿಗೆ ಹೋಗಿ ಬರುತ್ತಿದ್ದ. ಹಿಂದೆಯಾದರೆ ಅಮ್ಮಿಯ ಗಂಡಿನಿಂದ ಆತ ಕೈಕಾಗದಗಳನ್ನು ತರುತ್ತಿದ್ದ. ಈಗ ಕೈಕಾಗದಗಳೂ ಇಲ್ಲ.ಟಪಾಲು ಮುದ್ರೆ ಹೊತ್ತ ಕಾಗದಗಳೂ ಇಲ್ಲ. ಆದರೂ ಆತ ಬರು ವೇಳಗೆ ಈಗಳೂ ಅಮ್ಮಿಯ ದೃಷ್ಟಿ ಬೆಟ್ಟಗಳ ಇಳಿ ಜಾರಿನತ್ತ ಕಾಡು ಹಾದಿ ಕಾಲು ಹಾದಿಗಳತ್ತ ಹರಿಯುತಿತ್ತು. ಅದರೆ ಇದೇಗ ಅಥ‍೯ವಿಲ್ಲದ ನೋಟಿ. ಒಮ್ಮೊಮ್ಮೆ ಅಮ್ಮಿಗೆ ಭಾಸವಾಗುತ್ತಿತ್ತು : ಈಗ ನಡೆದಿರುಉದೆಲ್ಲ ಕನಸಲ್ಲವೆ? ಕೆಟ್ಟ ಕನಸಲ್ವೆ ? ಅದರೆ ದಿನಗಳುರುಳಿದಂಎ, ಕ್ರೂರ ನಿಜಸ್ಥಿತಿ ಅವಳ ಹೃದಯದ ನೋವನ್ನು ಹೆಚ್ಟಿಸುವತಿತ್ತು.


ಜೀವನಹಳ್ಳಿಯಲ್ಲಿ ಹುಟ್ಟಿ ಬೆಳೆದ ಅಮ್ಮಿಗೆ ಹನ್ನೊಂದನೆಯ ವಯಸ್ಸಿನಲ್ಲಿ ವಿವಾಹವಾಯಿತು . ಅಜ್ಜಿ ಸಾಕಿದ ಮಗಳು ಅಮ್ಮಿ, ಒಂದೊಂದು ವರ್ಷ ಒಬ್ಬೊಬ್ಬ ಮಗನ ಬಳಿ ಇರುತ್ತಿದ್ದ ಆ ಮಹಾತಾಯಿ ಆ ವರ್ಷ ಜೀವನಹಳ್ಳಿಯಲ್ಲಿ ಹಿರಿಯ ಮಗನ ಬಳಿ ಇದ್ದಳು. ಅದು, ಅವಳ ಪಾಲಿಗೆ ಅತ್ಯಂತ ಕ್ರೂರಾವಾಗಿದ್ದ ವಷ೯. ತಾನು ಹೊತ್ತು ಹೆತ್ತಿದ್ದೆ ಮೊದಲ ಗಂಡು ಕಣ್ಣು ಮುಚ್ಚಿದುದನ್ನು ಆ ವೃದ್ದೆ ಕಂಡಳು. " ಮೊದಲು ನನ್ನನ್ನು ಒಯ್ಬಾರ್ದಾಗಿತ್ತೇನೋ ನಿದ೯ಯಾ" ಎಂದು ದೇವರನ್ನು ನಿಂದಿಸಿದಳು. ಆಗ ಆ ಅಜ್ಜಿಯ ಸೊಸೆ ಗಭಿ೯ಣೇ. ಅಮ್ಮೀ ಆ ಬಸಿರಲ್ಲಿದವಳು. ಅಜ್ಜಿ ನಾಲ್ಕೂ ವಷ೯ದ ಮೊಮ್ಮಗ ರಾಮ ಕೃಷ್ಣನನ್ನು ನೋಡಿಕೊಂಡಳು : ಗಭೀ೯ಣಿ