ಪುಟ:Banashankari.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



   ಅದು ಅವಳಣ್ಣ, ಬೀಳ್ಕೊಡುವ ಆ ಹೊತ್ತಿನಲ್ಲಿ ಬೇರೆ ಮಾತುಗಳೇ ಇರಲಿಲ್ಲವೇನೊ ಅವನಲ್ಲಿ!

ಪುರೋಹಿತರ ಮಂತ್ರಪಠನ ...ಅಕ್ಕಿಕಾಳು...ಹಾಡು... ಸಿಹಿಯನೂಟ. ಅಮ್ಮಿಯ ಪಾಲಿನ ಆ ದೊಡ್ಡ ಹಬ್ಬವೆಲ್ಲ ಮುಗಿದಿತು. ಇನ್ನು ವಾಸ್ತವತೆ. ಹೊರಡುವ ಹೊತು. ಬೇರು ಕಿತ್ತ ಹೂ ಬಳ್ಳಿಯಂತೆ ಅಮ್ಮಿ ನಿಶ್ಯಕ್ತಳಾದಳು, ಗೋಳಾಡಿದಳು.

  ಆದರೆ ಮಾವನ ಮಾತು ಮೈದಡವಿತು.
"ಅಳಬಾರದು ಮಗೂ..ನೀನು ನಿನ್ನ ಮನೆಗೇ ಹೋಗ್ರಿರೋದು... ಅಳಬಾರದು." ಬೆನ್ನ ಮೇಲೆ ಕೈಯಾಡಿಸಿ ಅತ್ತೆ ಹೇಳಿದರು :
"ನಮ್ಮನೇಲಿ ಹೆಣುಮಕ್ಕಳಿಲ್ಲ ಚಿನಾ.. ನೀನೇ ನನ್ನ ಮಗಳು."
ಗಾಡಿಯ ಮುಂಭಾಗದಿಂದ ಪತಿರಾಯ ತನ್ನ ಕೈಹಿಡಿದವಳನ್ನು ಪ್ರೀತಿಯ ದೃಷ್ಟಿ ಯಿಂದ ನೋಡುತ್ತಿದ್ದ. ಅವನ ಎಳೆಯ ತಮ್ಮಂದಿರು ತಾಯಿಗಂಟಿಕೊಂಡು ಮೌನವಾಗಿ ನಿಂತಿದರು.-ಪಿಳಿ ಪಿಳಿ ಕಣು ಬಿಡುತ.ಇನೊಂದು ಗಾಡಿಯಲೆ,ಕೊನೆಯಿಲ್ಲ ಮಾತುಕತೆಯಲ್ಲಿ ನಿರತರಾಗಿದ್ದ ಇನ್ನಿತರರಿದ್ದರು–ಗಂಡಿನ ಕಡೆಯ ಹಲವರು.
  ಅಂತೂ ಗಾಡಿಗಳು ಹೊರಟುವು, ಹರದಾರಿ ದೂರ ರಾಮಕೃಷ್ಣ ತಂಗಿಯ ಗಾಡಿ

ಯನ್ನು ಹಿಂಬಾಲಿಸಿ ಬಂದ. ಆಮೇಲೆ ಬೆಟ್ಟದ ಕಣಿವೆಯಲ್ಲಿ ಗಾಡಗಳು ಇಳಿಯತೊಡಗಿ ದಾಗ ಆತ ತಡೆದು ನಿಂತ. ಕಣ್ಣುಗಳು ತೇವವಾಗಿದ್ದರೂ ಪ್ರಯತ್ನಪೂರ್ವಕವಾದ ಮುಗುಳು ನಗು ಆ ತುಟಿಗಳ ಮೇಲೆ ಮೂಡಿ ಬಂತು. ರಾಯನಹಳ್ಳಿಗೆ, ಮಾವನ ಮನೆಗೆ, ಬನಶಂಕರಿಯಾಗಿ ಅಮ್ಮಿ ಬಂದಳು-ಬನಶಂಕರಮ್ಮ. ಆಕೆಯ ಬಲು ಸುಲಭವಾಗಿ ಆ ಮನೆ ಒಗ್ಗಿತು. ಮಹಾ ತುಂಟರಾದ ಮೈದುನಂದಿರು ಮಿತ ಭಾಷಿಯನೂ ಮೃದುಭಾಷಿಯಾ ಆದ ಮಾವ, ಅಮ್ಮಿ ಅನುಭವಿಸದೇ ಇದ್ದ ಮಾತೃಪ್ರೇಮ ವನ್ನು ಒದಗಿಸಿಕೊಟ್ಟ ಅತ್ತೆ, ಎಂದಾದರೊಮ್ಮೆ ಯಾರೂ ನೋಡದೇ ಇದ್ದಾಗ ಕಣ್ಣೆತ್ತಿ ಮುಗುಳುನಗುತ್ತಿದ್ದ ಕೈಹಿಡಿದ ಗಂಡ...ಆ ಬಾಳುವೆ ಅಮ್ಮಿಗೆ ಆಹ್ವಾದಕರವಾಗಿತು. ವಾಡಿಕೆಯಂತೆ ಗಂಡನ ಮನೆಯಲ್ಲಿ ಹೊಸ ಹೆಸರು ಬಂತು ಅವಳಿಗೆ. ಆದರೆ, ವಾಡಿ ಕೆಗೆ ವಿರುದ್ಧವಾಗಿ, ಅತ್ತೆಯ ಮನೆಯಲ್ಲಿ ವಾತ್ಸಲ್ಯದ ಹೊನಲಿನಲ್ಲೇ ಮಿಂದ ಅಮ್ಮಿ ಬನ ಶಂಕರಿಯಾಗಿ ಮಾರ್ಪಡಲಿಲ್ಲ: ಅಮ್ಮಿಯಾಗಿಯೇ ಉಳಿದಳು.

  ಅಮ್ಮಿಯ ಮಾವ ತಮ್ಮ ಸಾತ್ವಿಕ ಗುಣಗಳಿಗಾಗಿ ಹಳ್ಳಿಯ ಹತುಸಮಸ್ತರ ಅದರ ಗೌರವಗಳಿಗೆ ಪಾತ್ರರಾಗಿದ್ದರು. ಋತುಮತಿಯಾಗದ ಸೊಸೆಯನ್ನು ಮನೆಗೆ ತಂದುದ ಕಾಗಿ ಯಾರೋ ಒಬ್ಬಿಬ್ಬರು ಏನೋ ಅಂದುಕೊಳ್ಳಲು ಬಯಸಿದರೂ ಊರು ಕಿವಿಗೊಡ ಲಿಲ್ಲ, ಅಮ್ಮಿ ಅನಾಥೆಯಾಗಿದ್ದ ಕಾರಣವೊಂದು, ಆ ಮನೆಯಲ್ಲಿ ಆವರೆಗೂ ಹೆಣ್ಣು ಹುಟ್ಟದೇ ಇದ್ದ ಇನ್ನೊಂದು ಕಾರಣ, ಎರಡೂ ಸೇರಿ ಸಂಪ್ರದಾಯದ ರೀತಿನೀತಿಗಳಲ್ಲಿ ಸಣ್ಣ ಪಟ್ಟ ಬದಲಾವಣೆ ಮಾಡಿದುವು. ಅಮ್ಮಿ ಮೈದುನಂದಿರೊಡನೆ ನಗೆಯಾಡುತ್ತಿದ್ದಳು. ಆದರೆ ಗಂಡನೊಡನೆ ಅಂತಹ ಸಲಿಗೆಯ ವರ್ತನೆ ಸಾಧ್ಯವಿರಲಿಲ್ಲ.ಆ ಪರಿಸಿತಿಗೆ,ಅತೆ  ಮಾವಂದಿರು ಆಕ್ಷೇಪಿಸಬಹುದೆಂಬ ಅಂಜಿಕೆಗಿಂತಲೂ ಸ್ವಭಾವತಃ ಬೆಳೆದು ಬಂದ ಸಂಕೋಚ ಕಾರಣವಾಗಿತು.

-