ವಿಷಯಕ್ಕೆ ಹೋಗು

ಪುಟ:Banashankari.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಇಲ್ಲೇ ಬಿಟ್ಟಿದಾನೋ..."

ಆ ಬಳಿಕ ಒಮ್ಮೆಲೆ ಅಳು.

ಅಮ್ಮಿಗೆ ದಿಗ್ಬ್ರಮೆಯಾಯಿತು. ಇತರರ ನೋವು ಸಂಕಟಕ್ಕೆಲ್ಲ ತಾನೇ ಕಾರಣಳು ಹಾಗಾದರೆ! ಆ ಮುತ್ತೈದೆಯರು ಯಾವ ಶುಭ ಕಾರಕ್ಕಾಗಿ ಬಂದಿದ್ದರೋ ಏನೋ.. ವಿಧವೆಯಾದ ತಾನು ಅವರೆದುರು ಬಂದು ಆಮ೦ಗಳವಾಯಿತು.ಅಮ೦ಗಳವಾಯಿತು.

ಆಕೆಯ ಅತ್ತೆ ಗದರಿ ಮಾತನಾಡಿದ್ದರು, ನಿಜ. ಪ್ರೀತಿಯ ಸೊಸೆಯಾಗಿ ಮಗಳಾಗಿ ಮನೆಗೆ ಬಂದಿದ್ದ ಹುಡುಗಿ ಅಮ್ಮಿಯನ್ನು ಅವರು ಒಮ್ಮೆಯೂ ತಿಷ್ಣ್ಯ ಮಾತುಗಳಿಂದ ನೋಯಿಸಿರಲಿಲ್ಲ. ಆದರೆ ಈಗ ತಡೆಯಲಾಗದ ಬೆಂಕಿಯಿಂದ ಅಸಹನೆಯ ಮಾತುಗಳ ಕಿಡಿ ಏಳುತ್ತಿತ್ತು.

ಆ ಮಕ್ಕಳಿಬ್ಬರು–ರಂಗ ಮತ್ತು ನಾಣಿ–ಆತ್ತಿಗೆಯನ್ನು ಈಗ ಪೀಡಿಸುತ್ತಿರಲಿಲ್ಲ. ಮಾತು ನಿಂತು ಮೌನವಾಗಿ ನಿದ್ದೆ ಹೋಗಿದ್ದ ಅಣ್ಣನನ್ನು ಹಳ್ಳಿಗೆ ತಂದಿದ್ದರು. ಆಗ ಎಲ್ಲರೊಡನೆ ಆ ಹುಡುಗರೂ ಅತ್ತಿದ್ದರು. ಆ ಬಳಿಕ ಬೆಂಕಿಯ ಉರಿಯ ಜ್ವಾಲೆ ಅವರಣ್ಣನನ್ನು ಸುಟ್ಟು ಬೂದಿ ಮಾಡಿತ್ತು. ಮಾಗದ ಕಾಯಿಯನ್ನು ಹಿಚುಕಿ ಹಣ್ಣು ಮಾಡಿದ ಹಾಗಿತ್ತು. ಆ ಹುಡುಗರ ಮನಸು. ಅವರೀಗ ಮನೆಯೊಳಗೆ ನಗುತ್ತ ಆಟವಾಡುತ್ತಿರಲಿಲ್ಲ, ತಿನ್ನ ತಿಂದು ಮುಗಿಸಿ ಕುಯಿಲಿನ ಕತ್ತಿ ಎತ್ತಿಕೊಂಡು ಹೊಲಗಳನ್ನು ದಾಟಿ ಗುಡ್ಡ ಹೋಗಿ ದಣಿದು ಹಿಂತಿರುಗುತ್ತಿದ್ದರು. ತಾಯಿಯ ವಾತ್ಸಲ್ಯದ ಕಾತರದ ಧ್ವನಿ ಮಾತ್ರ ಆವರ ಬೆಂಗಾವಲಿಗಿರುತ್ತಿತು. ಯವಾಗಲೂ: "ದೂರ ಹೋಗ್ವೇಡಿ ನಾಣಿ...ಇಲ್ಲೇ ಆಟವಾಡೀಪಾ ರಂಗ....ಜತೇಲೇ ಇರಿ ಕಣ್ರೋ..." ಆವರು ಜತೆಯಾಗಿಯೇ ಇದ್ದರು ನಿಜ! ಆದರೆ ಆಟವಾಡುತ್ತಿರಲಿಲ್ಲ. ಒಂದು ಕತೆ ಮುಗಿದು ಇನ್ನೊಂದು ಆರಂಭವಾದ ಹಾಗಿತ್ತು ಅವರ ಜೀವನ.. ಮನೆಯ ಉಸಿರು ಕಟ್ಟಿಸುವ ವಾತಾವರಣವನ್ನು ಮರೆಯಲೆಂದು ನಾಣಿ ಏನಾದರೊಂದು ವಿಷಯವೆತುತ್ತಿದ್ದ ಹೊಸತಾಗಿ ಕಂಡ ಒಂದು ಹಕ್ಕಿ...ಇಲ್ಲವೆ ಕೆಂಪು ಮುಖದೊಂದು ಕೋತಿ..ಅಥವಾ ಮುಗಿಲು ಮುಟ್ಟುವ ಹಾಗೆ ತೋರುತ್ತಿದ್ದೊಂದು ಮರ. ಅದೇ ವಿಪಯ ಮತ್ತೆ ಬಂದೊಡನೆ ರಂಗ ಹೇಳುತ್ತಿದ್ದ:

"ಎಷ್ಟು ಸಾರಿ ಅಣ್ಣ ಅದೇ ಮಾತು?"
- ಆಗ ಸ್ವಲ್ಪ ಹೊತ್ತು ಸುಮ್ಮನಿದ್ದು, ಬೇರೆ ಯಾವುದಾದರೊಂದು  ವಿಷಯದ ಮೇಲೆ ಇಬ್ಬರೂ ಒಮ್ಮೆಲೆ ಮಾತಾನಾಡುತ್ತಿದ್ದರು.

ಮಾವ ಮಾತ್ರ ಬಹಳ ಇಳಿದು ಹೋಗಿದ್ದರು. ಎತ್ತರವಾದ ಅವರ ದೇಹ ಬಾಗಿತ್ತು. ಮುಖದ ಮೇಲಿನ ಗೆರೆಗಳು ಆಳವಾಗಿದ್ದುವು. ಯಾವ ಕೆಲಸದಲ್ಲೂ ಉತ್ಸಾಹ ಉಳಿದಿರಲಿಲ್ಲ ಭಾರತವಾಚನ ಗೀತಾಪಠನಗಳನ್ನು ಆವರು ಬಿಟ್ಟಿರಲಿಲ್ಲ. ನಿಜ. ಆದರೆ ಅವರ ಪಾಲಿಗೆ ಮನಸಿನ ನೆಮ್ಮದಿ ಕನಸಿನ ಗಂಟಾಗಿತ್ತು. ಹುಡುಗರ ಅಕ್ಷರಾಭ್ಯಾಸವನ್ನಾದರೂ ಮುಂದು ವರಿಸಬೇಕೆಂದು ಅವರು ಯತ್ನಿಸಿದರು. ಆದರೆ ತಪ್ತವಾಗಿದ್ದ ಮೆದುಳು - ಹೃದಯ ಸಿಡಿದು