ಪುಟ:Banashankari.pdf/೩೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

" ಹೂಂ.. ಮಾವಯ್ಯ." ಆ ರಾಮಕೃಷ್ಣ ಇನ್ನೊಂದು ಏರ್ಪಾಟು ಮಾಡಿಕೊಂಡು ಬಂದಿದ್ದ. ಆದರೆ ಬಾಯಿ ಹೇಳಲು ಅವನಿಗೆ ನಾಚಿಕೆಯಾಯಿತು. ಊಟಕ್ಕೆ ಕುಳಿತಾಗ ಅಮ್ಮಿಯ ಅತ್ತೆ ಹೇಳಿದರು: " ಹೀಗೇ ಎಷ್ಟು ದಿನ ಒಂಟಿಯಾಗಿಲ್ತಿಯಾ? ಬೇಗನೆ ಮದುವೆ ಮಾಡೊಬೇಕಪ್ಪ." ಅಣ್ಣನ ಮದುವೆ!ಅತ್ತೆಯ ಆ ಮಾತು ಕೇಳಿ ಅಮ್ಮಿ ಹಿಗ್ಗಿದಳು. ಅಮಾವಾಸ್ಯೆಯ ರಾತ್ರಿ ಹುಣ್ಣಿಮೆಯ ಚಂದ್ರ ಮುಖ ತೋರಿಸಿದ ಹಾಗಾಯಿತು ಅವಳ ಅನುಭವ. ಆದರೆ ಆ ಅಣ್ಣನೊ! ತಲೆಬಗ್ಗಿಸಿದವನು ಉಸಿರೆತ್ತದೆ ಉಣುತ್ತಿದ್ದ. ಎಲ್ಲಿಲ್ಲದ ನಾಚಿಕೆ - ಅವನನ್ನು ಆವರಿಸಿತು. ಅಮ್ಮಿಯ ಮಾವನೂ ಅಂದರು: "ಹೌದಪ್ಪಾ, ಹೀಗೇ ಇರೋಕಾಗುತ್ಯೆ ಹೇಳು? - ಆದರೆ ಆ ಅತ್ತೆ ಮಾವಂದಿರು ರಾಮಕೃಷ್ಣನ ಮದುವೆಯ ವಿಷಯವನ್ನಷ್ಟೇ ಯೋಚಿ ಸುತ್ತಿರಲಿಲ್ಲ, ಆ ಮದುವೆ ಆದರೆ, ತಮ್ಮ ಮನೆಯ ಸೊಸೆ ಖಂಡಿತವಾಗಿ ಅಲ್ಲಿಗೇ ಹೋಗಬಹುದೆಂಬ ಆಸೆಯೂ ಅವರ ಮಾತುಗಳ ಹಿಂದೆ ಅಡಗಿ ಕುಳಿತಿತು. ಅಮ್ಮಿ ಮೌನವಾಗಿಯೇ ಇದ್ದಳು. ಅವಳ ಕಣ್ಣುಗಳಲ್ಲಿ ಆನಂದಾಶ್ರು ತುಂಬಿಬಂತು. ಅಣ್ಣನ ಮದುವೆಯ ಸಂದರ್ಭದಲ್ಲಿ ತಾನು ಸಡಗರದಿಂದ ಓಡಿಯಾಡುವ ಸುಂದರ ಕಲ್ಪನೆ... ರಾಮಕೃಷ್ಣ ಮೆಲ್ಲಮೆಲ್ಲನೆ ನಾಚುತ್ತ ನಾಚುತ್ತ ಹೇಳಿದ: "ಅದೇ ವಿಯ ಹೇಳಿ ಯೋಗೋಣಾಂತ ಬಂದೆ." " ನಿಜವೇನಯ್ಯ ?" ಎಂದು ಸಂತೋಷದಿಂದ ಕೇಳಿದರು ಮಾವ. ತಮ್ಮ ಮಗನ ನೆನಪಾಗಿ ಮುಖ ಬಾಡುತ್ತಿದ್ದರೂ ಅತ್ತೆ " ಸಂತೋಷವಪ್ಪಾ" ಎಂದರು. ಅಮ್ಮಿ ಆನಂದ ಆಶ್ಚರ್ಯಗಳಿಂದ ಅಣ್ಣನ ಮುಖವನ್ನೇ ನೋಡಿದಳು. ಆತ ತಲೆಬಾಗಿಸಿ ಹೇಳುತ್ತಲಿದ್ದ:

  • ಶಾನುಭೋಗರು ಇಷ್ಟೆಲ್ಲ ಮಾಡಿರೋದು. ನಮ್ಮ ಪಕ್ಕದ ಹಳ್ಳೀದೇ ಸ೦ಬ೦ಧ.ವಿಶಯ ತಿಳಿಸಿ ಹಿರಿಯರ ಆಶೀವಾದ ಪಡಕೂಂಡು ಹೋಗೋಣಾಂತ ಬಂದೆ."

"ಕೇಳಿದಿಯೇನೇ ಅಮ್ಮಿ?" ಎಂದರು ಮಾವ, "ಹಾಗಿದ್ದಾನೆ ನೋಡು ನಿಮ್ಮಣ್ಣ!" ಅಮ್ಮಿ ಒಬ್ಬಳೇ ಎಂದೇನು,ಎದುರಲೇ ಊಟಕ್ಕೆ ಕುಳಿತಿದ್ದ ರಂಗ--ನಾಣಿಯರೂಬೆರಗಾಗಿ ರಾಮಕೃಷ್ಣನನ್ನು ದಿಟ್ಟಿಸಿದರು. - ಊಟ ಮುಗಿಯಿತು. ಅಣ್ಣನನ್ನು ಏಕಾಂತದಲ್ಲಿ ಎಂದು ಕಾಣುವೆನೋ ಎಂಬ ಆತುರ ಅಮ್ಮಿಗೆ. ಅಂತೂ ಸಂಜೆಯ ಹೊತ್ತಿಗೆ ಅಣ್ಣನೊಬ್ಬನೇ ದೊರೆತ.ಅಮ್ಮಿ ಅವನ ಬಳಿಗೆ ನಡೆದು ಬಂದಳು. ಋತುಮತಿಯಾದ ಮೇಲೆ ಮಾವ ಯಾವ ಸಂಕಟಗಳಿಗೂ ಬೆದರದೆ ಬೇಡ ಬೇಡ ವೆಂದರೂ ಅವಳ ಮೈ ಮೆಲ್ಲಮೆಲ್ಲನೆ ತುಂಬಿಕೊಳ್ಳತೊಡಗಿತು, ರಾಮಕೃಷ್ಣ ಹನಿಕೂಡಿದ ಕಣ್ಣುಗಳಿಂದ ತಂಗಿಯನ್ನು ಹಿಟ್ತಿಸಿದ.