ಪುಟ:Banashankari.pdf/೩೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ದೀರ್ಘ ನಿಟುಸಿರುಬಿಟ್ಟು ಅಮ್ಮಿಯೆಂದಳು.: " ಆದರೆ ಬೇರೆಯವರು ಸುಮ್ನಿರಾರೆ, ಅಣ್ಣ ?" " ಅವದ್ದೇನಂತೆ ಗಂಟು ಮುಳುಗೊಣ್ಣಗಿರೋದು?" "ಹಾಗೆ ಹೇಳೋಕಾಗುತ್ಯೆ ಅಣ್ಣ?" " ಕೆಟ್ಟ ಜನ! " ಆ ಉದಾರದ ಬಳಿಕ ಎರಡು ನಿಮಿಷಗಳಾದ ಮೇಲೆ ಆತನೇ ಹೇಳಿದ: "ಮದುವೆಗೆ ಬಂದೋಳು ಅಲೇ ಇದ್ಬಿಡು ಅಮ್ಮಿ" ಒಡಹುಟಿದವನ ಮಡಿಲಲೀ ಮುಖವಿಟು ಅಮ್ಮಿ ಬಿಕ್ಕಿ ಬಿಕ್ಕಿ ಅತ್ತಳು-ಸಂತೊಶದಿಂದ, ದುಃಖದಿಂದ, ಇಂಥದೇ ಎಂದು ಗುರುತಿಸಲಾಗದ ಭಾವನೆಗಳಿಂದ ಅತ್ತಳು. –ಮರುದಿನವೇ ಜೀವನಹಳ್ಳಿಗೆ ಪ್ರಯಾಣ ಬೆಳೆಸಲು ಸನ್ನದ್ದನಾದ ರಾಮಕೃಷ್ಣ ಮಾವನವರಿಗೆ ಹೇಳಿದ: "ಮುಹೂರ್ತ ತಿಳಿಸಿ ಕಾಗದ ಬರೀತೀನಿ. ದಿಬ್ಬಣ ಹೊರಡೋಕೆ ಎರಡು ದಿವ್ನ ಇದೆ ಅನ್ನೋವಾಗ್ಲೇ ನೀವೆಲ್ಲರು ಬಂದ್ಬಿಡಿ. –ನೀವು ಬರದೇ ಹೋದರೆ ಮದುವೇನೇ ನಡೆಯೋಲ್ಲ. ಖಂಡಿತಾ ಬನ್ನಿ-ಅಮಿಾನನ್ನೂ ಕರಕೊಂಡು బన్ని..." - ಅತ್ರೆ ಮಾವ" ಹೂ೦" ಎಂದರು. ಮಾವ ಸ್ವಲ್ಪ ದೂರ ರಾಮಕೃಷ್ಣನ ಜತೆಯಲ್ಲೇ ಹಾದಿ ನಡೆದು ಬಂದರು. ಹಾಗೆ ಬರುತ್ತ, ಭಾರವಾದ ಹೃದಯವನ್ನು ಹಗುರಗೊಳಿಸಲು ಯತ್ನಿಸಿದರು. "ನಿನ್ನ ತಂಗಿ ವಿಷಯ–" " ಹೇಳಿ ಮಾವಯ್ಯ." " ಪೂರ್ವಿಕರ ಆಚಾರವಿಚಾರ ಏನೇ ಇಲ್ಲಿ...ಆವಳ ವಿಷಯದಲ್ಲಿ ಕಾರಿಗಳ ಹಾಗೆನಡಕೊಳ್ಳೋದು ಸಾಧ್ಯವಿಲ್ಲ." " ನಾನು ಏನು ಹೇಳ್ಳಿ ಮಾವಯ್ಯ ? ನಂಗೆ ಮಾತೇ ಬರದು. "ನನ್ನ ತೀರ್ಮಾನ ಸರೀಂತ ಮನಸ್ಸಾಕ್ಷಿ ಹೇಳುತ್ತೆ." "ಆಗಲಿ ಮಾವಯ್ಯ--ಮದುವೆಗೆ ಬಂದವಳನ್ನ ಜೀವನಹಳ್ಲಿಲೇ ಬಿಟ್ಬಡಿ,ನೋಡ್ಕೂತೇನೆ "ಹಾಗೇ ಆಗಲಪ್ಪ..ಅವಸರವೇನಿಲ್ಲ..ಇಲ್ಲೇ ಇರಬಹುದು ಬೇಕಾದ್ರೆ...ಆದರೂ--" "ಹೌದು ಮಾವಯ್ಯ, ಜನರ ಬಾಯಿ ಮುಚ್ಚಿಸೋದು ಕಷ್ಟದ ಕೆಲಸ ನಮ್ಮ ನೇಲೇ ಇರಿಸ್ಕೂತೀನಿ.." ಮಾವ ಸ್ವಲ್ಪ ದೂರದಿಂದಲೇ ಹಿಂತಿರುಗಿ ಬಂದರು. ಅದಾದ ಮೇಲೆ ಇಂದು ವಾರದೂಳಗೆ ಜೀವನಹಳಿಯಿಂದ ಗೌಡರೊಬ್ಬರು ರಾಮ ಕೃಶ್ರನ ಕಾಗದ ತಂದರು.

ಅದಾದ ಮೇಲೆ ಒಂದು ವಾರದೊಳಗೆ ಜೀವನಹಳ್ಳಿಯಿಂದ ಗೌಡರೊಬ್ಬರು ರಾಮ "ಬನಶಂಕರೀ!ಬನಶಂಕರೀ!"