ಪುಟ:Banashankari.pdf/೩೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಬನಶಂಕರಿ ಪ್ರೀತಿಯೇ ಮಾತಿನ ರೂಪ ತಳೆದು ಬಂದ ಹಾಗೆ ಅವನು ಮಾತನಾಡಿದ: "ಯಾಕಜ್ಜಿ, ಇಷ್ಟು ಬೇಗ ಎದ್ದದ್ದು ?" ಅಜ್ಜಿ ಅವನ ಬಳಿಯಲ್ಲಿ ಕುಳಿತಳು. " ಬೇಗ್ನೆ ಏಳೋಕೂ ನಿನ್ನ ಒಪ್ಗೆ ಬೇಕೇನೋ ರಾಮು? ಆಗ್ಹೋಯ್ತು! ನಾಳೆ ಮಹಾರಾಣಿ ಬರ್ತಾಳಲ್ಲಾ, ಅವಳಿಗೆ ಹೇಳು ಈ ಮಾತ್ನ... ಖುಷಿಯಾಗಿ ಸೂರ್ಯ ನೆತ್ತಿ ಮೇಲೆ ಬರೋವರ್ಗೂ ಗೊರಕೆ ಹೊಡೀಲಿ!!" ರಾಮಕೃಷ್ಣ ಹಿ–ಹ್ಹಿ ಎಂದು ನಕ್ಕ, ಅಜ್ಜಿಯ ಮೊಣಕಾಲನ್ನು ತನ್ನ ಕೈಗಳಿಂದ ಆವರಿಸಿ, ಮೊಣಗಂಟಿನ ಮೇಲೆ ಮುಖವಿರಿಸಿ, ಆಕೆಯ ಕಣ್ಣಗಳನ್ನೆ ಮೊಮ್ಮಗ ದಿಟ್ಟಿಸಿದ. ಮತ್ತೊಮ್ಮೆ ಮಗುವಾಗಿ ಅಜ್ಜಿಯ ಬೆನ್ನೇರುವ ಬಯಕೆಯಾಯಿತು ಅವನಿಗೆ ರಾಮಕೃಷ್ಣ ನಲ್ಲಿ ತನ್ನ ಮಗನ ಪ್ರತಿ ಮೂರ್ತಿಯನ್ನು ಕಾಣುತ್ತ ಆ ವೃದ್ಧೆ ಆತನ ತಲೆಗೂದಲ ಮೇಲೆ ಕೈಯಾಡಿಸಿದಳು. " ಜಾಣ, ನನ್ಮಗು ಜಾಣ," ಎಂದಳು. ಬೆಳಕು ಹರಿದ ಮೇಲೆ ಎಲ್ಲರಿಗಿಂತ ತಡವಾಗಿ ಎದ್ದವಳು ಅಮ್ಮಿ ಎಚ್ಚರವಾದಾಗ ಪಿಳಿಪಿಳಿ ಕಣ್ಣು ಬಿಟ್ಟ ಛಾವಣಿಯನ್ನು ನೋಡಿದಳು. ಒಂದೆರಡು ಕಡೆ ಬೆಳಕು ಒಳಬರು ತ್ತಿತು. ಆ ಬೆಳಕು ಹೇಗೆ ಬಂತೆಂಬುದೇ ಅವಳಿಗೆ ಅರ್ಥವಾಗಲಿಲ್ಲ. ಆದರೆ ಮರುಕ್ಷಣವೆ ಸಮಸ್ಯೆ ಬಗೆಹರಿಯಿತು. ಹೆಚ್ಚು ಕಡಿಮೆ ಮೂರು ವರ್ಷಗಳ ಕಾಲ ತಾನು ದಿಟ್ಟಿಸಿ ನೋಡುತ್ತಿದ್ದ ಛಾವಣಿ ಅದಾಗಿರಲಿಲ್ಲ. ಇದು ಅತ್ತೆಯ ಮನೆಯಾಗಿರಲಿಲ್ಲ, ಅವಳ ಮನೆ ಯಾಗಿತು. ಅವಳು ಹುಟ್ಟಿ ಬಂದು ಮೊದಲ ಬಾರಿ ಲೋಕದ ಬೆಳಕನ್ನು ಕಂಡಿದ್ದ ಮನೆ.... ಹಾಗೆ ಮಾಡನ್ನೆ ದಿಟ್ಟಿಸುತ್ತ ಮಲಗಿರುವುದು ಎಷ್ಟೊಂದು ಸುಖಕರ! ಏಳಲೇ ಬೇಡವೆನಿಸಿತು ಅವಳಿಗೆ. ಆದರೆ ತಾನು ಇಲ್ಲಿಗೆ ಬಂದಿರುವ ಉದ್ದೇಶ?'ಓ! ಇನ್ನೊಂದೇ ದಿನ ಕಳೆದ ರಾಯಿತು. ನಾಳೆ ದಿಬ್ಬಣ!...ಒಮ್ಮೆಲೆ ಅಣ್ಣನನ್ನು ನೋಡುವ ಬಯಕೆಯಾಯಿತು ಅಮ್ಮಿಗೆ.. ಅವಳು ಎದ್ದಳು. ಬಿಚ್ಚಿ ಕೆದರಿದ್ದ ತಲೆಗೂದಲನ್ನು ಹಿಡಿಹಿಡಿದು ಕಟ್ಟಿದಳು. ಅದೇನೂ ನಡುವಿನಿಂದ ಕೆಳಕ್ಕಿಳಿದ ನೀಳವಾದ ಕೇಶರಾಶಿಯಾಗಿರಲಿಲ್ಲ. ದೊರಗು ದೊರ ಗಾದ ಸುರುಳಿ ಸುರುಳಿಯಾದ ಕೂದಲ ಗೊಂಚಲಿನಂತಿತ್ತು.ಅದನ್ನು ಮುಟ್ಟುತ್ತಲಿದ್ದಂತೆ ಅವಳ ಮುಖ ಬಾಡಿತು. ಇನ್ನು ಆ ಹಣೆ. ಅಲ್ಲಿ ಇನ್ನೆಂದೂ ಕುಂಕುಮದ ಬೊಟ್ಟಿಡ ಬಾರದು. ಮೂಗುಬಟ್ಟನ್ನು ಕಳೆದುಕೊಂಡಿದ್ದ ಬರಿಮೂಗು..ಆ ತೂತು.ರೆಕ್ಕೆ ಬಿಚ್ಚಿ ಅದೇ ಆಗ ಹಾರತೊಡಗಿದ ಅವಳ ಹೃದಯ ಹಕ್ಕಿ ಬಲ್ಲೋನೆಯಂತೆ ಸುರಿದ ನೆನಪುಗಳ ಮಳೆಯಲ್ಲಿ ತೋಯ್ದು ಮುದುಡಿತು. "ಅಮ್ಮಿ," ಎಂದು ಅಜ್ಜಿ ಕರೆದಳು. ಇನ್ನು ಅತ್ತೆಯ ಸ್ವರವಿಲ್ಲ. ಮಮತೆಯಿಂದ ತನ್ನನ್ನು ಕಂಡ ಆ ಅತ್ತೆಯನ್ನು ಇನ್ನು ಎಂದಾದರೂ ಅವಳು ಕಾಣುವಳೋ ಇಲ್ಲವೋ. "ಬಂದೆ ಅಜ್ಜಿ..." ಅಮ್ಮಿ ಮುಖ ತೊಳೆದು ಬಂದಾಗ ಅಜ್ಜಿ ಎಂದಳು.: *ಕಾವೇರಿ ನಿನ್ನೆ ಬಂದಿದ್ಲು ಕಣೇ... ನೀನು ಬರೋದು ಅವಳಿಗೆ ಗೊತ್ತು. ಬೆಳಿಗ್ಗೆ ಬರ್ತೀನಿ ಅಮದ್ಲು." 3