ಪುಟ:Chirasmarane-Niranjana.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೦ ಚಿರಸ್ಮರಣೆ

   ಅಪ್ಪು ಅಂಗಳದಲ್ಲಿ ಬರಿ ಮ್ಯೆಯನ್ನು ಗಾಳಿಗೊಡ್ಡಿ ಕುಳಿತ. ಒಲೆಯಲ್ಲಿ

ಉರಿಯುತ್ತಿದ್ದ ಒಣಸೋಗೆಯ ಬೆಳಕು ಆತನ ಮುಖದ ಮೇಲೂ ಎದೆಯ ಮೇಲೂ ಬಿದ್ದು ಕುಣಿಯಿತು.

  ಅಜ್ಜಿ ಮೊಮ್ಮಗನನ್ನು ನೋಡಿ ಕೇಳಿದಳು:
 "ಅದೇನೋ ಹಾಗೆ ಕೂತಿದ್ದೀಯಾ-ಮುದುಕಪ್ಪನಹಾಗೆ.ನಿನಗೆ ಯಾತರದೊ

ಚಿಂತೆ?"

  ಅಪ್ಪು ಮಾತನಾಡಲಿಲ್ಲ.
  ತಾಯಿ ಮಗನತ್ತ ನೋಡಿ ಮೆಲುದನಿಯಲ್ಲಿ ಕೇಳಿದಳು:
  "ಮೈಲಿ ಹುಷಾರಿಲ್ವೆ ಅಪ್ಪು?"
ಅಪ್ಪು ಮುಖವೆತ್ತಿ, ಕಾತರದ ಕಣ್ಣುಗಳಿಂದ ನೋಡುತ್ತಿದ್ದ ತಾಯಿಯನ್ನು

ದಿಟ್ಟಿಸಿ ಹೇಳಿದ: "ಹುಷಾರಾಗೇ ಇದೇನಮ್ಮ."

...ಎತ್ತುಗಳ ಕೊರಳ ಗಂಟೆಗಳು ಸದ್ದುಮಾಡಿದವು.ಅವುಗಳ ಹಿಂದೆಯೇ

ನೊಗವನ್ನು ಹೆಗಲಮೇಲೇರಿಸಿಕೊಂಡು ಅಪ್ಪುವಿನ ತಂದೆಯೂ ಬಂದ. ತಾಯಿ ಎತ್ತುಗಳನ್ನು ಗುಡಿಸಲಿನ ಹಿಂಭಾಗದಲ್ಲಿದ್ದ ಹಟ್ಟಿಯಲ್ಲಿ ಕಟ್ಟಿದಳು. ತಂದೆ ನೊಗವನ್ನು ಮಾಡಕ್ಕೆ ತೂಗುಹಾಕಿ "ಉಸ್ಸಪ್ಪ" ಎಂದು ಉಸಿರುಬಿಟ್ಟು,ನೆಲದ ಮೇಲೆ ಕುಳಿತ.

ತಡವಾಗಿಯೇ ಬಂದಿದ್ದ ತಂದೆ,ಆ ದಿನ ಕುಡಿತಕ್ಕೋಸ್ಕರ ಮತ್ತೆ

ಹೊರಟುಹೋಗುವ ಲಕ್ಷಣ ಕಾಣಿಸಲಿಲ್ಲ. ಅವನನ್ನೇ ನೋಡುತ್ತ ಅಪ್ಪು ಚಿರುಕಂಡನ ಮನೆಯವರಿಗಾದ ಅನ್ಯಾಯದ ವಿಷಯ ಆತನಿಗೆ ಹೇಳಬೇಕು- ಎಂದುಕೊಂಡು.ಹಾಗೆ ತೋರಿತೇ ಹೊರತು ಮಾತು ಹೊರಡಲಿಲ್ಲ.

 ಎಳೆಯರಿಬ್ಬರೂ ಎಂದಿನಂತೆ ಬೇಗನೆ ಉಂಡು ನಿದ್ದೆ ಹೋದರು. ಅಪ್ಪು

ತಂದೆಯ ಜತೆಯಲ್ಲಿ ಸ್ನಾನ ಮಾಡಿದ. ಆ ಬಳಿಕೆ ಅವರೆಲ್ಲ ಗಂಜಿಯೂಟಕ್ಕೆ ಕುಳಿತರು.

 ಆಗ ತಂದೆಯಿಂದ ಒಂದು ಪ್ರಶ್ನೆ ಬಂತು:
 "ಚಿರುಕಂಡ ಕತ್ತಲಾಗೋವರೆಗೂ ಇಲ್ಲೆ ಇದ್ನೇನೋ?"
 ಸಹಜವಾಗಿಯೇ ಕಂಡುಬಂದ ಆ ಪ್ರಶ್ನೆಗೆ ಅಪ್ಪು ಉತ್ತರವಿತ್ತ:
 "ಸ್ವಲ್ವ ಹೊತ್ತು ಇದ್ದಿಟ್ಟು ಮನೆಗೆ ಹೋದ."
ತಾಯಿ ಮತ್ತೊಮ್ಮೆ ಬಡಿಸಲು ಬಂದಾಗ, ಬೇಡವೆಂದು ಕೈ ಅಡ್ಡ ಹಿಡಿಯುತ್ತ,

ತಂದೆ ಹೇಳಿದ:"ಚಿರುಕಂಡನ ತಂದೆ ಹೊಲ ಕಳ್ಕೊಂಡ."