ಪುಟ:Daaminii.pdf/೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

Preface

ಪೀಠಿಕೆ

.

ಮಾಧವೀಲತಾ"ಗ್ರಂಥಕರ್ತೃಗಳಾದ ಸಂಜೀವಚಂದ್ರ ಚಟ್ಟೋಪಾಧ್ಯಾಯರು ಕರ್ಣಾಟಕದೇಶಸ್ಥರಿಗೆ ಅಪರಿಚಿತರಲ್ಲ. ದಿವಂಗತ ಶ್ರೀಯುತ ಬಿ. ವೆಂಕಟಾ ಚಾರ್ಯರು ಅವರ ಗ್ರಂಥಗಳಲ್ಲಿ ಒಂದೆರಡನ್ನು ಪರಿವೃತ್ತೀಕರಿಸಿ, ಮುಂದಿರಿಸಿ, ಮಹೋಪಕಾರಮಾಡಿರುವರು. ಸಾಹಿತ್ಯ ಸಮ್ರಾಜರಾದ ಬಂಕಿಮಚಂದ್ರರ ಸಹೋದವರಾದ ಈ ಗ್ರಂಥಕರ್ತೃಗಳ ಉಲ್ಲೇಖಗಳು ವಂಗಸಮಾಜದಲ್ಲಿಯೆಲ್ಲ ಆದರಣೀ ಯಗಳಾಗಿರುವುದರಲ್ಲಿ ಅಡ್ಡಿಯೇನಿದೆ? ಅವುಗಳಲ್ಲಿ ಒಂದಾದ ಈ “ದಾಮಿನಿ'ಯನ್ನು, ಗ್ರಂಥಪ್ರಕಾಶಕರಾದ “ವಸುಮತೀ' ಸಂಪಾದಕರ ಅನುಮೋದನದೊಡನೆ, ಕನ್ನಡಿ ಗರ ಸರಸಾವಲೋಕನಕ್ಕಾಗಿ, ಕನ್ನಡಿಸಿರುವೆ. ಇದೊಂದು ಸೂಕಪರ್ಯವ ಸಾಯಿಯಾದ ಸಾಂಸಾರಿಕಚಿತ್ರ.
ಇದನ್ನು ಪರಿಷ್ಕರಿಸಿ ಮುದ್ರಿಸುವುದರಲ್ಲಿ ನನಗೆ ಸಹಾಯಮಾಡಿದ “ ಶ್ರೀ ಕೃಷ್ಣ ಸೂಕ್ತಿ” ಪ್ರಕಾಶಕರ ಮಹೋಪಕಾರ ಚಿರಸ್ಮರಣೀಯವಾಗಿರುವುದು.


ಬೆಂಗಳೂರು

.

ಸದ್ಯ ನವಿಧೇಯ,
ಪರಿವರ್ತನಕಾರ

.