ಪುಟ:Duurada Nakshhatra.pdf/೧೦೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


ಜಯದೇವನಿಗೆ ಆ ಮಾತು ಅಸಹ್ಯಎನಿಸಿತು. ಥೂ-ಥೂ... ವೆಂಕಟರಾಯರು ಕೂಡಾ ಅದನ್ನು ಮೆಚ್ಚಿಕೊಳ್ಳಲಾರರು-ಎಂದು ಅವನ ಮನಸ್ಸು ಸಿಡಿನುಡಿಯಿತು.

ಆದರೆ ಜಯದೇವನ ತಿಳಿವಳಿಕೆಗೆ ನಿಲುಕದ ಎತ್ತರದಲ್ಲಿದ್ದರು ವೆಂಕಟರಾಯರು.

"ಅದು ಅಷ್ಟು ಸುಲಭವಲ್ಲ ನಂಜುಂಡಯ್ಯ. ಅದಕ್ಕೆ ಆ ವ್ಯಕ್ತಿ ಗುರು ತರವಾದ ಆಪರಾಧ ಮಾಡಿರ್ಬೇಕು"

"ಅದು ನಿಜ ಅನ್ನಿ",

“ಅಷ್ಟೇ ಅಲ್ಲ, ಈಗ ಅಸೆಂಬ್ಲೀಲಿ ವಿರೋಧಪಕ್ಷದವರೂ ಕೆಲವರಿದ್ದಾರೆ ನೋಡಿ, ಇಲಾಖೆಯವರು ಹುಷಾರಾಗಿ ಇರದೇ ಇದ್ರೆ, ಆ ಗೋಪಾಲಗೌಡ ಅಂಥವರಿಗೇನಾದರೂ ಈ ವಿಷಯ ತಿಳಿಯಿತೂಂತಿಟ್ಕೊಳ್ಳಿ–ಆಗೇ ಹೋಯ್ತು! ಇನ್ನು ಬೆಂಗಳೂರಿನ ಪತ್ರಿಕೆಗಳೋ –ಅವಕ್ಕೆ ಲ೦ಗು ಲಗಾಮು ಒಂದೂ ಇಲ್ಲ.... "

ಪ್ರಜಾಪ್ರತಿನಿಧಿ ಸಭೆಯ ಅಧಿವೇಶನದಲ್ಲಿ ಬಡ ಉಪಾಧ್ಯಾಯರ ಪ್ರಶ್ನೆ ಬಂದುದನ್ನು, ಪತ್ರಿಕೆಗಳಲ್ಲಿ ಪ್ರಕಟವಾದ ಟೀಕೆ ಟಿಪಣಿಗಳನ್ನು ಜಯದೇವ ಓದಿದ್ದ, ತಾನು ಉಪಾಧ್ಯಾಯನಾಗದೆ ಇದ್ದಾಗಲೂ ಅ೦ತಹ ವಿಷಯದ ಕಡೆಗೆ ಅವನ ಗಮನ ಹೋಗುತ್ತಿತ್ತು. ಬಡ ಉಪಾಧ್ಯಾಯರ ಪರವಾದ ಪ್ರಸ್ತಾಪ ಬಂದಾಗಲೆಲ್ಲ ಅವನಿಗೆ ಸಂತೋಷವಾಗುತ್ತಿತ್ತು. ಆದರೆ ವೆಂಕಟರಾಯರ ದೃಷ್ಟಿಯಲ್ಲಿ ಅದು ಹಾಗಿರಲಿಲ್ಲ....

"ಏನು ಜಯದೇವ್ ಸುಮ್ಮನೆ ಕೂತಿದೀರಲ್ಲ?"

"ನನಗೆ, ಈ ಸಚಿವರು-ಅಸೆಂಬ್ಲಿ ವಿಷಯ-ಏನೂ ಗೊತ್ತಾಗೋದಿಲ್ಲ ಸಾರ್."

“ಅದು ನಿಜ ಅನ್ನಿ, ರಾಜಕೀಯ ಅಂದ್ರೆ ಸಾಮಾನ್ಯ ವಿಷಯವೇನಲ್ಲ!”

ನಂಜುಂಡಯ್ಯನಿಗೆ, ವೆಂಕಟರಾಯರು ಬಂದರೆಂದು ಪರಮ ಸಂತೋಷವಾಗುವುದೇನೂ ಸಾಧ್ಯವಿರಲಿಲ್ಲ, ಕಾರಣ, ಈ ರಾಯರೆಲ್ಲಾ ಒಂದೇ ಜನ. ಆದರೂ ವೆಂಕಟರಾಯರ ಮನಸಿನ ಆಳವನ್ನು ತಿಳಿದುಕೊಳ್ಳಲು ನಂಜುಂಡಯ್ಯ ಕುತೂಹಲಿಯಾದರು. ಅಲ್ಲದೆ ರಂಗರಾಯರ ದೆಸೆಯಿಂದ ಅವರಿಬ್ಬರಲ್ಲಿ ಒಂದು ರೀತಿಯ ಒಮ್ಮತವೂ ಇತ್ತಲ್ಲವೇ? ವೆಂಕಟರಾಯರನ್ನು