ಪುಟ:Ekaan'gini.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಕಾಂಗಿನಿ

ನಿಂದ ಯಾರೂ ತವಕಗೊಂಡು ಬಾಗಿಲನ್ನು ತಳ್ಳೆಲಿಲ್ಲ. ಒಂದು ಕ್ಷಣ

ಹಾಗೆಯೆ ನಿಂತಿದ್ದು ಪುಟ್ಟಣ್ಣ ಬಾಗಿಲು ತೆರೆದ.

ಮನೆ ಬಾಗಿಲ ಬಳಿ ತನ್ನನ್ನು ಕರೆಯುತ್ತ ಮಗುವನ್ನೆತ್ತಿಕೊಂಡು ನಿಂತಿರುತ್ತಿದ್ದ ದೃಶ್ಯವೇ. ಹಸುಗೂಸಲ್ಲ - ಸ್ವಲ್ಪ ದೊಡ್ಡದಾಗಿದ್ದ ಮಗು. ಆ ಮುಖ... ಗಂಡನನ್ನು ಕಂಡಳು ಸುನಂದಾ. ನಿಂತಲ್ಲಿಂದಲೆ ಬಾಗಿ ಆತನ ಪಾದ ಮುಟ್ಟಿದಳು. ಮಗುವನ್ನೂ ಪಾದಗಳ ಬಳಿ ಇಟ್ಟಳು. ಹಾವು ಕಚ್ಚಿದತನಂತೆ ಪುಟ್ಟಣ್ಣ ಕಾಲುಗಳನ್ನು ಹಿಂದಕ್ಕೆಳೆದುಕೊಂಡ. ಸರಸ್ವತಿ ಗಾಬರಿಯಾಗಿ ಅತ್ತಳು. ಸಂಸಾರ ನಾಟಕದ ಭೀಕರವಾದೊಂದು ಅಂಕ ಆರಂಭವಾಗಿತ್ತು.ಆ ಅಳು ಮೊದಲ ಆಲಾಪನೆ. ನಾಟಕದ ಪ್ರೇ ಕ್ಷಕರಾಗಿ ಅಲ್ಲೆ ಸ್ವಲ್ಪ ದೂರದಲ್ಲಿ

ನಿಂತಿದ್ದರು, ಸುನಂದೆಯ ತಂದೆ ಮತ್ತು ರಾಮಕೃಷ್ಣಯ್ಯ. ಕಾತರ ತುಂಬಿದ ಮುಖಗಳು. ಅವರಿಬ್ಬರನ್ನೂ ಹಾಗೆಯೇ ನುಂಗಿ ಬಿಡುವೆನೆಂಬಂತೆ ಪುಟ್ಟಣ್ಣ 

ಕ್ರೂರವಾಗಿ ದಿಟ್ಟಿಸಿದ. ಮೊದಲು ಮಾತನಾಡಿದ ಪಾತ್ರಧಾರಿ -ರಾಮಕೃಷ್ಣಯ್ಯ. "ನಮಸ್ಕಾರ ಪುಟ್ಟಣ್ಣನವರೆ." ಉತ್ತರರೂಪವಾಗಿ ದೊರೆತುದು ಬಿರುಗಣ್ಣಿನ ನೋಟ. ಮೊದಲೇ ಗೊತ್ತು ಮಾಡಿದ್ದ ಮಾತನ್ನು ಪಾಠ ಒಪ್ಪಿಸುವವರಂತೆ ಕೃಷ್ಣಪ್ಪ ಹೇಳಿದರು : "ನೀವು ಅಗ್ನಿಸಾಕ್ಷಿಯಾಗಿ ಕೈ ಹಿಡಿದ ಹೆಂಡತಿಯನ್ನೂ , ನಿಮ್ಮಿಬ್ಬರ ಮಗುವನ್ನೂ ನಿಮಗೆ ಒಪ್ಪಿಸಿದೀನಿ , ಪುಟ್ಟಣ್ಣ. ನನ್ನ ಕರ್ತವ್ಯ ನಾನು ಮಾಡಿದ ಹಾಗಾಯಿತು. ದೇವರು ನಿಮಗೆ ಒಳ್ಳೇದು ಮಾಡಲಿ" ಅನಂತರ ರಾಮಕೃಷ್ಣಯ್ಯನ ಸ್ವರ: "ನಾವಿನ್ನು ಬ, ಮಿ ಪುಟ್ಟಣ್ಣ" ಬಾಗಿಲಿಗೆ ಅಡ್ದವಾಗಿ ನಿಂತಿದ್ದ ಪುಟ್ಟಣ್ಣ ನೋಡುತ್ತಲೇ ಇದ್ದ. ಪರಿಸ್ಥಿಥಿ

ಆ ರೂಪ ತಳೆಯುವುದೆಂದು ಆತ ಭಾವಿಸಿರಲಿಲ್ಲ. ಅವರಿಬ್ಬರು ನಿಜವಾಗಿಯೂ ಹೊರಟುದನ್ನು ಕಂಡು ಆತ ಗಾಬರಿಯಾದ, ಎದೆ ದವಡವನೆ ಹೊಡೆದುಕೊಂಡು, ಮೆದುಳು ದಿಕ್ಕು ದೋಚದೆ ಧೀಂಗುಟ್ಟತು. ಆ ಗಂಡಸರಿಬ್ಬರು